ಪತ್ನಿ ಹತ್ಯೆ, ಪತಿಗೆ ಪ್ಯಾರಲಿಸಿಸ್, ಮನೆಯಲ್ಲಿ ಮತ್ತೂ ಒಂದು ಶವ: ಕೊಂದವರು ಯಾರು?
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪತಿರಾಯ ಪತ್ನಿಯನ್ನ ಕೊಂದು, ಪುತ್ರಿಯ ಮೇಲೆ ಹಲ್ಲೆ ನಡೆಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೆಗ್ಗನಹಳ್ಳಿಯ ಮನೆಯಲ್ಲಿ ನಡೆದಿದೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಿವರಾಜ್ ಪತ್ನಿ ಲಕ್ಷ್ಮೀ(30) ಕಪಾಳಕ್ಕೆ ಹೊಡೆದು ಹತ್ಯೆ ಮಾಡಿದ್ದಾನೆ. ಆತ ಹೊಡೆದ ಏಟಿಗೆ ಪತ್ನಿಯ ಕಿವಿಯಿಂದ ರಕ್ತ ಸುರಿದಿದೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ವೇಳೆ ಅಡ್ಡಬಂದ ಪುತ್ರಿ ಚೈತ್ರಾ ಮೇಲೂ ಹಲ್ಲೆ ನಡೆಸಿದ್ದು, ಚೈತ್ರಾ ತಲೆ ತಿರುಗಿ ಬಿದ್ದಿದ್ದಾಳೆ. ಬಳಿಕ ತಾನು ಕತ್ತು ಕೊಯ್ದುಕೊಂಡು […]
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪತಿರಾಯ ಪತ್ನಿಯನ್ನ ಕೊಂದು, ಪುತ್ರಿಯ ಮೇಲೆ ಹಲ್ಲೆ ನಡೆಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೆಗ್ಗನಹಳ್ಳಿಯ ಮನೆಯಲ್ಲಿ ನಡೆದಿದೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಿವರಾಜ್ ಪತ್ನಿ ಲಕ್ಷ್ಮೀ(30) ಕಪಾಳಕ್ಕೆ ಹೊಡೆದು ಹತ್ಯೆ ಮಾಡಿದ್ದಾನೆ.
ಆತ ಹೊಡೆದ ಏಟಿಗೆ ಪತ್ನಿಯ ಕಿವಿಯಿಂದ ರಕ್ತ ಸುರಿದಿದೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ವೇಳೆ ಅಡ್ಡಬಂದ ಪುತ್ರಿ ಚೈತ್ರಾ ಮೇಲೂ ಹಲ್ಲೆ ನಡೆಸಿದ್ದು, ಚೈತ್ರಾ ತಲೆ ತಿರುಗಿ ಬಿದ್ದಿದ್ದಾಳೆ. ಬಳಿಕ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥ ಚೈತ್ರಾ, ಶಿವರಾಜ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರಿಗೆ ಸಿಕ್ತು ಮತ್ತೊಂದು ಶವ: ಘಟನೆಯ ನಂತರ ಸ್ಥಳಕ್ಕೆ ಆಗಮಿಸಿದ್ದ ರಾಜಗೋಪಾಲನಗರ ಪೊಲೀಸರು ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಮತ್ತೊಂದು ಶವ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ರಂಗದಾಮಯ್ಯ ಎಂಬಾತನ ಶವ ಪತ್ತೆಯಾಗಿದ್ದು, ಆತನ ಹೊಟ್ಟೆಗೆ ಚಾಕು ಸಹ ಇರಿಯಲಾಗಿದೆ. ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ. ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಪರಿಶೀಲನೆ ನಡೆಸುತ್ತಿದ್ದಾರೆ.
ಮೃತ ಮಹಿಳೆ ಶಿವರಾಜ್ ಪತ್ನಿ ಲಕ್ಷ್ಮೀ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದಳು. ಇಂದು ಬೆಳಗ್ಗೆ ನೀಡಬೇಕಿದ್ದ ಮೆಟೀರಿಯಲ್ಸ್ ಕಚೇರಿಗೆ ಬಂದು ನೀಡಿರಲಿಲ್ಲ. ಹೀಗಾಗಿ ಮೆಟೀರಿಯಲ್ಸ್ ತೆಗೆದುಕೊಂಡು ಹೋಗಲು ಬೆಳಗ್ಗೆ 10 ಗಂಟೆಗೆ ಬ್ರೋಜನ್ ಎಂಬ ಹೆಸರಿನ ವ್ಯಕ್ತಿ ಮನೆಯ ಬಳಿ ಬಂದಿದ್ದಾನೆ. ಈ ವೇಳೆ ಮನೆಯ ಡೋರ್ ಮುಚ್ಚಿದೆ.
ಆತ ಕಿಟಕಿಯಿಂದ ಇಣುಕಿ ನೋಡಿದ್ದಾನೆ. ಬಟ್ಟೆಯಲ್ಲಾ ರಕ್ತದ ಕಲೆಯಾಗಿದ್ದ ಶಿವರಾಜ್ ಕಂಡಿದ್ದಾನೆ. ಬ್ರೋಜನ್ ಲಕ್ಷ್ಮಿ ಎಲ್ಲಿ ಎಂದು ಕೇಳಿದ್ದಾಗ, ಮನೆ ಒಳಗೆ ಬರುವಂತೆ ಶಿವರಾಜ್ ಹೇಳಿದ್ದಾನೆ, ಆದರೆ ಬ್ರೋಜನ್ ಒಳಗೆ ಹೋಗಿಲ್ಲ ಆತನನ್ನೇ ಮನೆ ಹೊರಗೆ ಕರೆದಿದ್ದಾನೆ. ಶಿವರಾಜ್ ಹೊರ ಬರಲು ನಿರಾಕರಿಸಿದ್ದಾನೆ. ಬ್ರೋಜನ್ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾನೆ. ಅಧಿಕಾರಿಗಳು ಮನೆಯ ಬಳಿ ಬಂದು ವಿಚಾರಿಸಿದ್ದಾರೆ. ಆಗಲೂ ಅದೇ ರೀತಿ ಉತ್ತರಿಸಿದ್ದಾನೆ. ಅನುಮಾನಗೊಂಡ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗಾಯಾಳು ಪತಿ ಶಿವರಾಜ್‌ಗೆ ಪ್ಯಾರಲಿಸಿಸ್, ಹಾಗಾದ್ರೆ ಕೊಂದವರು ಯಾರು? ಪತಿಯಿಂದ ಪತ್ನಿ ಹತ್ಯೆ, ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಗಾಯಾಳು ಪತಿ ಶಿವರಾಜ್ ಅನಾರೋಗ್ಯ ಸಮಸ್ಯೆಯಿಂದ ಬಳಲುತಿದ್ದಾನೆ. ಮೃತ ಲಕ್ಷ್ಮಿ ಪತಿಯಿಂದ ಅಲ್ಲ, ಬೇರೆ ವ್ಯಕ್ತಿಯಿಂದ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಯಾರೋ ಪರಿಚಯಸ್ಥ ವ್ಯಕ್ತಿಯಿಂದ ಕೊಲೆ ನಡೆದಿರುವ ಶಂಕೆಯಿದೆ.
ಗಾಯಾಳು ಶಿವರಾಜ್ ಪ್ಯಾರಲಿಸಿಸ್ ಸಮಸ್ಯೆಯಿಂದ ಬಳಲುತಿದ್ದಾನೆ. ಆತ ಓಡಾಡಲು ಸಹ ಕಷ್ಟ ಪಡುತ್ತಾನೆ. ಹಾಗಾಗಿ ಆತನೇ ಪತ್ನಿಯನ್ನ ಕೊಂದು, ಮಗಳ ಮೇಲೆ ಹಲ್ಲೆ ನಡೆಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಜೊತೆಗೆ ಮೊದಲನೇ ಮಹಡಿಯಲ್ಲಿ ನೇಣು ಬಿಗಿದು, ಚಾಕುವಿನಿಂದ ಇರಿದ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಪರಿಚಿತರಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ರಂಗದಾಮಯ್ಯ ಯಾರು? ಮೂಲತಃ ಕುಣಿಗಲ್ನವನಾದ ಶಿವಾರಾಜ್ ಸ್ವಂತ ಮನೆಯಲ್ಲಿ ತನ್ನ ಪತ್ನಿ, ಓರ್ವ ಪುತ್ರಿ ಜೊತೆ ಹೆಗ್ಗನಹಳ್ಳಿಯಲ್ಲಿ ವಾಸವಿದ್ದ. ಒಂದಂತಸ್ತಿನ ಕಟ್ಟಡದಲ್ಲಿ ಕೆಳ ಮಹಡಿಯಲ್ಲಿ ಪತ್ನಿ, ಮಗಳ ಜೊತೆ ವಾಸವಿದ್ದ. ಮೇಲ್ಮಹಡಿಯಲ್ಲಿ ಎರಡು ಮನೆಗಳಿದ್ದು, ಮೇಲ್ಭಾಗದ ಜಾಗದಲ್ಲಿ ರಂಗದಾಮಯ್ಯಗೆ ಒಂದು ಮನೆ ನೀಡಲಾಗಿತ್ತು. ಮತ್ತೊಂದು ಮನೆಯಲ್ಲಿ ಇಬ್ಬರು ಬಿಹಾರಿ ಮೂಲದ ಯುವಕರಿಗೆ ಬಾಡಿಗೆ ನೀಡಲಾಗಿತ್ತು.
ಈ ನಡುವೆ ರಂಗದಾಮಯ್ಯ ಪತ್ನಿ ಒಂದು ವರ್ಷದ ಹಿಂದೆ ಸಾವನಪ್ಪಿದ್ದಳು. ರಂಗದಾಮಯ್ಯಗೆ ಶಿವರಾಜ್ ಪತ್ನಿ ಹತ್ತಿರವಾಗಿದ್ದಳು. ಯಾರು ಇಲ್ಲದ ವೇಳೆ ರಂಗದಾಮಯ್ಯ ಮನೆಗೆ ಹೋಗಿ ಆತನಿಗೆ ಅಡುಗೆ ಉಪಚಾರ ಮಾಡುತ್ತಿದ್ದಳು. ಈ ವಿಚಾರವಾಗಿ ಪತಿ ಶಿವರಾಜ್ ಹಲವು ಬಾರಿ ಪತ್ನಿಯೊಂದಿಗೆ ಜಗಳವಾಡಿದ್ದ. ಆದರೆ ಹತ್ಯೆ ಯಾರು..? ಯಾವ ಕಾರಣಕ್ಕೆ ಮಾಡಿದ್ದಾರೆ..? ಅನ್ನೋದೆ ಗೊಂದಲ
Published On - 1:56 pm, Tue, 11 February 20