ಹುಬ್ಬಳ್ಳಿ: ಮಹಾಮಾರಿ ಕೊರೊನಾ ಕಾಲದಲ್ಲಿ ಉಗುಳುವುದು ಮಹಾ ಅಪರಾಧ ಅಲ್ವಾ! ಅಂಥಾದ್ರಲ್ಲಿ ಇಲ್ಲೊಬ್ಬ ಐನಾತಿ ಕ್ರಿಮಿನಲ್ ಏನ್ಮಾಡಿದ್ದಾನೆ ನೋಡಿ. ಹೋಟೆಲ್ಗೆ ಹೋಗಿ ಊಟ ಕೇಳಿದ್ದಾನೆ. ಮಾಲೀಕರು ಕೊಡಲ್ಲ ಅಂದಿದ್ದಕ್ಕೆ ಹೋಟೆಲ್ನಲ್ಲೇ ಉಗುಳಿದ್ದಾನೆ. ಇದರಿಂದ ಪಿತ್ತ ನೆತ್ತಿಗೇರಿಸ್ಕೊಂಡ ಹೋಟೆಲ್ ಮಾಲೀಕ ಸೀದಾ ಪೊಲೀಸರಿಗೆ ಬುಲಾವ್ ನೀಡಿದ್ದಾನೆ. ಆ ಮೇಲೆ ಪೊಲೀಸರು ಬೆಂಡೆತ್ತಿ ಬ್ರೇಕ್ ಹಾಕುವಾಗ ಮತ್ತೆ ಬಾಯ್ಬಿಟ್ಟ ಆ ಕ್ರಿಮಿನಲ್ ಹೇಳಿದ್ದು ತಾನೊಬ್ಬ ಸೀರಿಯಲ್ ಕಿಲ್ಲರ್ ಅಂತಾ!
ತಡರಾತ್ರಿ ಕಂಠಪೂರ್ತಿ ಕುಡಿದು ಸಲೀಂ ಬಳ್ಳಾರಿ ನೇಕಾರ ನಗರದಲ್ಲಿರುವ ಹೋಟೆಲ್ಗೆ ತೆರಳಿದ್ದಾನೆ. ಲಾಕ್ಡೌನ್ ಕಾರಣ ಊಟ ನೀಡಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ಹೋಟೆಲ್ನಲ್ಲಿ ಉಗುಳಿದ್ದಾನೆ. ನಂತರ ಪೊಲೀಸರಿಗೆ ಸ್ಥಳೀಯರು ಹಾಗೂ ಹೋಟೆಲ್ ಮಾಲೀಕರು ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಈತ ಕೊಲೆ ಕೇಸ್ನ ಆರೋಪಿ ಸಲೀಂ ಬಳ್ಳಾರಿ ಎಂದು ಬಂಧಿಸಿ ಕಸಬಾಪೇಟ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಕುಖ್ಯಾತ ರೌಡಿ, ಕಲಬುರ್ಗಿಯಲ್ಲಿ ನಡೆದ ಕೊಲೆ ಪ್ರಕರಣ ಪ್ರಮುಖ ಆರೋಪಿಯಾಗಿದ್ದಾನೆ. ಈತನ ಮೇಲೆ ಹಲವು ಪ್ರಕರಣಗಳಿದ್ದು ಎಲ್ಲವನ್ನು ಮರೆಮಾಚಿ ನೇಕಾರ ನಗರದಲ್ಲಿ ಮನೆ ಮಾಡಿಕೊಂಡಿದ್ದ.
Published On - 1:16 pm, Sat, 16 May 20