ನಿನ್ನೆಯಷ್ಟೇ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್ ಐ ಎ) ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟಿರುವ ಶಂಕಿತ ಉಗ್ರಗಾಮಿ, ನೇತ್ರತಜ್ಞ ಡಾ. ಅಬ್ದುಲ್ ರಹೆಮಾನ್ನನ್ನು ವಿಚಾರಣೆ ನಡೆಸುವಾಗ ಒಂದಷ್ಟು ಸ್ಫೋಟಕ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿದೆ.
ವಿಧ್ವಂಸಕ ಕೃತ್ಯಕ್ಕೆ ನೆರವಾಗುವ ಒಂದು ಅಪ್ಲಿಕೇಷನ್ನನ್ನು ರೆಹಮಾನ್ ಇತರ ಮೂವರು ಗೆಳೆಯರೊಂದಿಗೆ ತಯಾರಿಸುತ್ತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಬಸವನಗುಡಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ರೆಹಮಾನ್ ವೈದ್ಯಕೀಯ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಆ್ಯಪ್ ವಿನ್ಯಾಸಗೊಳಿಸುತ್ತಿದ್ದುದನ್ನು ಎನ್ಐಎ ಅಧಿಕಾರಿಗಳು ಬಯಲು ಮಾಡಿದ್ದಾರೆ.