ATM ಹಣ ಎಗರಿಸಿದ್ದವರು ಅಂದರ್: ಆರೋಪಿ ನಡೆದಾಡುವ ಶೈಲಿಯಿಂದ ಪತ್ತೆ ಹಚ್ಚಿದ ಪೊಲೀಸರು!

ಬೆಂಗಳೂರು:ATMನಲ್ಲಿ ಹಣ ಎಗರಿಸಿದ್ದ ಖತರ್ನಾಕ್ ಕಳ್ಳನ ವಾಕಿಂಗ್ ಸ್ಟೈಲ್​ ಅನ್ನು ಸಿಸಿಟಿವಿ ಕ್ಯಾಮರಾದಲ್ಲಿ ಗಮನಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗೌರಿಬಿದನೂರು ಮೂಲದ ಕಿರಣ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಸಿಎಂಎಸ್ ಇನ್ಫೋ ಸಿಸ್ಟಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕಂಪನಿಯಿಂದ ಹಣ ಪಡೆದುಕೊಂಡು ಎಟಿಎಂಗಳಿಗೆ ಹಣ ತುಂಬಿಸುವ ಕೆಲಸ ಮಾಡುತ್ತಿದ್ದ ಕಿರಣ್, ಐಟಿಪಿಎಲ್ ರೋಡ್ ಹಾಗೂ ಹಲಸೂರು ಮಾರ್ಗದ ಎಟಿಎಂಗಳಿಗೆ ಹಣ ತುಂಬಿಸುವ ಜವಾಬ್ದಾರಿ ಹೊತ್ತಿದ್ದ. ಇತ್ತೀಚೆಗೆ ಕಿರಣ್ ಹಣ ತುಂಬಿಸುತ್ತಿದ್ದ ಎಟಿಎಂಗಳ ಜವಾಬ್ದಾರಿಯನ್ನು, […]

ATM ಹಣ ಎಗರಿಸಿದ್ದವರು ಅಂದರ್: ಆರೋಪಿ ನಡೆದಾಡುವ ಶೈಲಿಯಿಂದ ಪತ್ತೆ ಹಚ್ಚಿದ ಪೊಲೀಸರು!
ಸಾಧು ಶ್ರೀನಾಥ್​

Updated on: Aug 21, 2020 | 12:00 PM

ಬೆಂಗಳೂರು:ATMನಲ್ಲಿ ಹಣ ಎಗರಿಸಿದ್ದ ಖತರ್ನಾಕ್ ಕಳ್ಳನ ವಾಕಿಂಗ್ ಸ್ಟೈಲ್​ ಅನ್ನು ಸಿಸಿಟಿವಿ ಕ್ಯಾಮರಾದಲ್ಲಿ ಗಮನಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಗೌರಿಬಿದನೂರು ಮೂಲದ ಕಿರಣ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಸಿಎಂಎಸ್ ಇನ್ಫೋ ಸಿಸ್ಟಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕಂಪನಿಯಿಂದ ಹಣ ಪಡೆದುಕೊಂಡು ಎಟಿಎಂಗಳಿಗೆ ಹಣ ತುಂಬಿಸುವ ಕೆಲಸ ಮಾಡುತ್ತಿದ್ದ ಕಿರಣ್, ಐಟಿಪಿಎಲ್ ರೋಡ್ ಹಾಗೂ ಹಲಸೂರು ಮಾರ್ಗದ ಎಟಿಎಂಗಳಿಗೆ ಹಣ ತುಂಬಿಸುವ ಜವಾಬ್ದಾರಿ ಹೊತ್ತಿದ್ದ.

ಇತ್ತೀಚೆಗೆ ಕಿರಣ್ ಹಣ ತುಂಬಿಸುತ್ತಿದ್ದ ಎಟಿಎಂಗಳ ಜವಾಬ್ದಾರಿಯನ್ನು, ಸೂರ್ಯ ಎಂಬ ವ್ಯಕ್ತಿಗೆ ಕಂಪನಿ ವಹಿಸಿತ್ತು. ಕಂಪನಿಯ ಆದೇಶದಂತೆ ಹಲಸೂರಿನ 2 ಎಟಿಎಂಗಳಿಗೆ ಸೂರ್ಯ 12 ಲಕ್ಷ ಹಣ ತುಂಬಿಸಿದ್ದರು. ಹಣ ತುಂಬಿಸಿದ ಅರ್ಧಗಂಟೆಯಲ್ಲಿ ಆರೋಪಿ ಕಿರಣ್ ಎಟಿಎಂಗಳಿಗೆ ಹೋಗಿ 32,28,500 ಲಕ್ಷ ಹಣ ಎಗರಿಸಿದ್ದ. ಈ ಮೊದಲೇ ತಾನು ಹಣ ತುಂಬಿಸುತ್ತಿದ್ದ ಎಟಿಎಂಗಳಾಗಿದ್ದರಿಂದ ಆರೋಪಿ ಕಿರಣನಿಗೆ ಎಟಿಎಂಗಳ ಪಾಸ್ವರ್ಡ್ ತಿಳಿದಿತ್ತು. ಹೀಗಾಗಿ ತನ್ನ ಕೃತ್ಯಕ್ಕೆ ಇನ್ನೊಬ್ಬ ಸ್ನೇಹಿತ ಅಶ್ವತ್ಥನನ್ನೂ ಜೊತೆಗೆ ಸೇರಿಸಿಕೊಂಡಿದ್ದ.

ಎಟಿಎಂನಲ್ಲಿ ಹಣ ಕಳವು ಸಂಬಂಧವಾಗಿ ಕಂಪನಿಯು ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿತ್ತು. ದೂರಿನನ್ವಯ ವಿಚಾರಣೆಗಿಳಿದ ಪೊಲೀಸರು, ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದಾರೆ.

ಇನ್ನು ಹಣ ಕದ್ದು ಯಾರಿಗೂ ಅನುಮಾನ ಬರದಂತೆ ಹೈಡ್ರಾಮಾ ನಡೆಸಿದ್ದ ಆರೋಪಿ ಕಿರಣ್​ನ ವಾಕಿಂಗ್ ಸ್ಟೈಲ್ ಅ​ನ್ನು, ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಆರೋಪಿಯ ನಡೆಯುವ ಶೈಲಿಯ ಜೊತೆಗೆ ತಾಳೆ ಹಾಕಿದಾಗ ಪೊಲೀಸರಿಗೆ ನಿಜವಾದ ಆರೋಪಿ ಕಿರಣ್ ಎಂಬುದು ತಿಳಿದುಬಂದಿದೆ. ಬಂಧಿತರಿಂದ ಸದ್ಯ 24 ಲಕ್ಷದ 10 ಸಾವಿರ ರೂ ಹಣ ಜಪ್ತಿ ಮಾಡಿರೋ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Published On - 11:59 am, Fri, 21 August 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us