AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೃದ್ಧಾಶ್ರಮಕ್ಕೆ ಬಾಡಿಗೆಗೆ ಬೇಕೆಂದು ಕಾರುಗಳನ್ನು ಪಡೆದು ವಂಚನೆ: ಆರೋಪಿ ಸುನಿಲ್ ನಾಯಕ್ ಬಂಧನ, 12 ಕಾರುಗಳು ವಶ

ವೈಟ್ ಬೋರ್ಡ್ ಕಾರುಗಳನ್ನು ವೃದ್ಧಾಶ್ರಮಕ್ಕೆ ಬಾಡಿಗೆಗೆ ಬೇಕು ಎಂದು ಹೇಳಿ ಪಡೆದು, ಬಳಿಕ ಅವುಗಳನ್ನು ಅಡಮಾನ ಇಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸುತ್ತಿದ್ದ ಆರೋಪದ ಮೇಲೆ ಜೆ.ಪಿ. ನಗರದ ಸುನಿಲ್ ನಾಯಕ್ ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಈತನಿಂದ ಸುಮಾರು 1.20 ಕೋಟಿ ರೂ. ಮೌಲ್ಯದ 12 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವೃದ್ಧಾಶ್ರಮಕ್ಕೆ ಬಾಡಿಗೆಗೆ ಬೇಕೆಂದು ಕಾರುಗಳನ್ನು ಪಡೆದು ವಂಚನೆ: ಆರೋಪಿ ಸುನಿಲ್ ನಾಯಕ್ ಬಂಧನ, 12 ಕಾರುಗಳು ವಶ
ಸೀಜ್ ಮಾಡಿರುವ ಕಾರುಗಳು ಹಾಗೂ ಒಳಚಿತ್ರದಲ್ಲಿ ಆರೋಪಿ ಸುನಿಲ್
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Nov 11, 2026 | 12:11 PM

Share

ಮುಖ್ಯಾಂಶಗಳು

  • ವೃದ್ಧಾಶ್ರಮಕ್ಕೆ ಬಾಡಿಗೆ ಎಂದು ಕಾರು ಪಡೆದು ವಂಚನೆ
  • ಬಂಧಿತನಿಂದ 12 ಕಾರುಗಳು ಹುಳಿಮಾವು ಪೊಲೀಸರ ವಶಕ್ಕೆ
  • ಸುಮಾರು 1.20 ಕೋಟಿ ರೂ. ಮೌಲ್ಯದ ಕಾರುಗಳು ವಾಪಸ್ ನೀಡದೆ ಮೋಸ

ಬೆಂಗಳೂರು, ನವೆಂಬರ್ 11: ಕಾರು ಮಾಲೀಕರಿಂದ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ಪಡೆದು, ಅವುಗಳನ್ನು ವಾಪಸ್ ನೀಡದೆ ವಂಚಿಸುತ್ತಿದ್ದ ಆರೋಪದ ಮೇಲೆ ಒಬ್ಬನನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಜೆ.ಪಿ. ನಗರ 9ನೇ ಫೇಸ್ ನಿವಾಸಿ ಸುನಿಲ್ ನಾಯಕ್ ಬಂಧಿತ ಆರೋಪಿ. ಆತನ ಬಳಿಯಿಂದ ಒಟ್ಟು 12 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುನಿಲ್ ನಾಯಕ್ ಈ ಹಿಂದೆ ವೃದ್ಧಾಶ್ರಮ ನಡೆಸುತ್ತಿದ್ದ. ಜೊತೆಗೆ ಟ್ರಾವೆಲ್ಸ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆ ನಡೆದದ್ದು ಹೇಗೆ?

ಆರೋಪಿಯು ಕಾರು ಮಾಲೀಕರನ್ನು ಸಂಪರ್ಕಿಸಿ, ತನ್ನ ವೃದ್ಧಾಶ್ರಮಕ್ಕೆ ಕಾರುಗಳು ಬಾಡಿಗೆಗೆ ಬೇಕಿವೆ ಎಂದು ಹೇಳುತ್ತಿದ್ದ. ದಿನಕ್ಕೆ ₹1,000ದಿಂದ ₹2,000 ಬಾಡಿಗೆ ನೀಡುವುದಾಗಿ ಭರವಸೆ ನೀಡಿ ಕಾರುಗಳನ್ನು ಪಡೆಯುತ್ತಿದ್ದ. ಆರಂಭದಲ್ಲಿ ಕೆಲ ದಿನ ಬಾಡಿಗೆ ಹಣವನ್ನೂ ನೀಡಿ ಮಾಲೀಕರ ವಿಶ್ವಾಸ ಗಳಿಸಿದ್ದ. ನಂತರ ಆ ಕಾರುಗಳು ತನ್ನದೇ ಎಂದು ಹೇಳಿ, ತುರ್ತಾಗಿ ಹಣ ಬೇಕಿದೆ ಎಂಬ ಕಾರಣ ನೀಡಿ ಅವುಗಳನ್ನು ಅಡಮಾನ ಇಟ್ಟು ಸಾಲ ಪಡೆಯುತ್ತಿದ್ದ. ಹೀಗೆ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಬಾಡಿಗೆಯೂ ಇಲ್ಲ, ಕಾರೂ ಇಲ್ಲ ಎಂಬಂತೆ ಮಾಲೀಕರಿಗೆ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.

1.20 ಕೋಟಿ ರೂ. ಮೌಲ್ಯದ ಕಾರುಗಳು ವಾಪಸ್ ನೀಡದೆ ಮೋಸ

ಈ ರೀತಿ ವಂಚಿಸಿ ಒಟ್ಟು ಸುಮಾರು ₹1.20 ಕೋಟಿ ಮೌಲ್ಯದ ಕಾರುಗಳನ್ನು ಮಾಲೀಕರಿಗೆ ವಾಪಸ್ ನೀಡದೆ ಆರೋಪಿ ಮೋಸ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹುಳಿಮಾವು ಪೊಲೀಸರು ಆರೋಪಿಯನ್ನು ಬಂಧಿಸಿ, ಇನ್ನೋವಾ, ಎರ್ಟಿಗಾ, ಸಿಯಾಜ್, ಕ್ರೆಟಾ, ಎಕ್ಸ್‌ಯುವಿ ಹಾಗೂ ಬಲೆನೊ ಸೇರಿದಂತೆ ಒಟ್ಟು 12 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

LIVE TV

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More