AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಾಗಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿಯನ್ನು ಚಾಕುವಿನಿಂದ ಇರಿದು ಕೊಂದ ಪತ್ನಿ

ಬೆಂಗಳೂರಿನ ಕೆಂಪೇಗೌಡ ನಗರದ ಲಕ್ಷ್ಮೀಪುರದಲ್ಲಿ ಮಕ್ಕಳಾಗಿಲ್ಲ ಎಂದು ನಿತ್ಯ ಕುಡಿದು ಬಂದು ಹೀಯಾಳಿಸುತ್ತಿದ್ದ ಪತಿಯನ್ನು ಚಾಕುವಿನಿಂದ ಇರಿದು ಪತ್ನಿಯೇ ಕೊಲೆ ಮಾಡಿದ್ದಾಳೆ. ತೀವ್ರ ರಕ್ತಸ್ರಾವದಿಂದ ಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಕ್ಕಳಾಗಿಲ್ಲ ಎಂದು ಆಗಾಗ ಇಬ್ಬರ ಮಧ್ಯೆ ಗಲಾಟೆ ಆಗುತ್ತಲೇ ಇತ್ತು ಎನ್ನಲಾಗಿದೆ.

ಮಕ್ಕಳಾಗಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿಯನ್ನು ಚಾಕುವಿನಿಂದ ಇರಿದು ಕೊಂದ ಪತ್ನಿ
ಪತಿಯನ್ನು ಚಾಕುವಿನಿಂದ ಇರಿದು ಕೊಂದ ಪತ್ನಿ
ವಿಕಾಸ್​ ಬಿಎಂ
| Edited By: |

Updated on: Nov 12, 2026 | 3:12 PM

Share

ಬೆಂಗಳೂರು, ನವೆಂಬರ್​​ 12: ಮಕ್ಕಳಾಗಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿಯನ್ನು ಚಾಕುವಿನಿಂದ ಇರಿದು ಪತ್ನಿಯೇ ಕೊಲೆಗೈದಿರುವ ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ಕೆಂಪೇಗೌಡ ನಗರದ ಲಕ್ಷೀಪುರದಲ್ಲಿ‌ ನಡೆದಿದೆ. ರಾಜಶೇಖರ್(44) ಕೊಲೆಯಾದ ವ್ಯಕ್ತಿಯಾಗಿದ್ದು, ಮಾಲಾಶ್ರೀ ಆರೋಪಿಯಾಗಿದ್ದಾರೆ. ಬ್ಯಾಂಕ್‌ನಲ್ಲಿ ಲೋನ್ ವಿಭಾಗದಲ್ಲಿ ಕೆಲಸ‌ ಮಾಡ್ತಿದ್ದ ರಾಜಶೇಖರ್ ಪ್ರತಿದಿನ ಮದ್ಯ ಸೇವಿಸಿ ಬಂದು ಗಲಾಟೆ ಮಾಡುತ್ತಿದ್ದ. ಬೆಳಗ್ಗೆ ಹೊತ್ತು ಮಾತ್ರ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ರಾತ್ರಿಯಾದ್ರೆ ಸಾಕು ಕುಡಿದು ಕ್ಯಾತೆ ತೆಗೆಯುತ್ತಿದ್ದ. ಮಕ್ಕಳಾಗಿಲ್ಲ ಎಂದು ಆಗಾಗ ಇಬ್ಬರ ಮಧ್ಯೆ ಗಲಾಟೆ ಆಗುತ್ತಲೇ ಇತ್ತು. ನಿನ್ನೆಯೂ ಕುಡಿದ ಮತ್ತಿನಲ್ಲಿ ಬಂದು ಗಲಾಟೆ ಮಾಡಿದ್ದ. ನಿನ್ನೆಯೂ ಗಲಾಟೆ ನಡೆದಿದ್ದು, ಅದು ವಿಕೋಪಕ್ಕೆ ಹೋಗಿ ಕೊಲೆ ನಡೆದಿದೆ.

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆರೋಪಿ

ಇನ್ನು ಪತಿಯನ್ನೇ ಕೊಂದಿರುವ ಆರೋಪಿ ಮಾಲಾಶ್ರೀ, ಈ ಹಿಂದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಆ ಸಂಬಂಧ ನಿಮ್ಹಾನ್ಸ್​​ನಲ್ಲಿ ಮೂರು ತಿಂಗಳು ಚಿಕಿತ್ಸೆ ಸಹ ಪಡೆದಿದ್ದಳು. ನಾಲ್ಕು ತಿಂಗಳ ಹಿಂದಷ್ಟೆ ಆಕೆಯನ್ನು ಆಸ್ಪತ್ರೆಯಿಂದ ಮರಳಿ ಮನೆಗೆ ಕರೆತರಲಾಗಿತ್ತು. ಮಕ್ಕಳಾಗಿಲ್ಲ ಎಂದು ಪತಿ ರಾಜಶೇಖರ್ ಪದೇ ಪದೇ ಗಲಾಟೆ ಮಾಡುತ್ತಿದ್ದ ಹಿನ್ನೆಲೆ ಮಾಲಾಶ್ರೀ ಖಿನ್ನತೆಗೆ ಒಳಗಾಗಿದ್ದಳು. ಐದು ವರ್ಷದ ಹಿಂದೆ ಮಾಲಾಶ್ರೀ ಮತ್ತು ರಾಜಶೇಖರ್​​ ವಿವಾಹವಾಗಿತ್ತು. ಸದ್ಯ ಆಕೆ ಎರಡು ತಿಂಗಳ ಗರ್ಭಿಣಿ ಎನ್ನಲಾಗಿದ್ದು, ನಿನ್ನೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಪತಿಗೆ ಚಾಕು ಇರಿದ್ದಾಳೆ. ನಂತರ ಮನೆಗೆ ಕರೆ ಮಾಡಿ ಅತ್ತಿದ್ದಾಳೆ. ಮೊದಲ ಮಹಡಿಯಲ್ಲಿ ರಾಜಶೇಖರ ‌ತಾಯಿ ವಾಸ ಮಾಡ್ತಿದ್ದು, ಘಟನೆ ನಂತರ ಹೋಗಿ ಬಾಗಿಲು ಬಡಿದ್ರೂ ತಾಯಿ‌ ತೆಗೆದಿರ್ಲಿಲ್ಲ. ಅಷ್ಟೊತ್ತಿಗೆ ‌ತೀವ್ರ ರಕ್ತಸ್ರಾವದಿಂದ ರಾಜಶೇಖರ್​​ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಕೊಲೆಯಾಗಿದ್ದಾಳೆ ಎನ್ನಲಾದ ಮಹಿಳೆ ದಿಢೀರ್ ಪ್ರತ್ಯಕ್ಷ; ಮಾಡದ ತಪ್ಪಿಗೆ 2.5 ವರ್ಷ ಜೈಲಿನಲ್ಲಿದ್ದ ವ್ಯಕ್ತಿ!

ಘಟನೆ ಬಗ್ಗೆ ಮಾಹಿತಿ ನೀಡಿರುವ ಮೃತ ರಾಜಶೇಖರ್​​ ಮಾವ ರಾಜಣ್ಣ, ರಾತ್ರಿ 11:30 ರಿಂದ 12:00 ಗಂಟೆ ಸಮಯದಲ್ಲಿ ಸ್ನೇಹಿತರು ಫೋನ್ ಮಾಡಿ ಈ ಘಟನೆ ಬಗ್ಗೆ ತಿಳಿಸಿದರು. ಅಷ್ಟೊತ್ತಿನಲ್ಲಿ ರೋಡ್ ಸರಿಯಿಲ್ಲ, ಬರಕ್ಕಾಗಲ್ಲ ಎಂದು ಹೇಳಿ ಬೆಳಗ್ಗೆ ಬರುವುದಾಗಿ ತಿಳಿಸಿದ್ದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ವ್ಯವಸ್ಥೆ ಮಾಡಲು ಹೇಳಿದ್ದೆ. ಆದರೆ, ಆಗಲೇ ಅವರು ನಿಧನರಾಗಿದ್ದರು ಎಂದು ತಿಳಿದುಬಂದಿದೆ. ರಾಜಶೇಖರ್ ಹೆಂಡತಿಗೆ ಏನು ಕೆಲಸವಿರಲಿಲ್ಲ. ಉಣ್ಣೋದು, ತಿನ್ನೋದು, ಮಲಗೋದು ಅಷ್ಟೇ ಕೆಲಸ. ರಾಣಿ ತರ ನೋಡ್ಕೋತಿದ್ದ. ಆದರೂ ಇಂತಹ ಕೆಲಸ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ವಿಕಾಸ್​ ಬಿಎಂ
ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More
ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ಬೆಲೆ ಹೆಚ್ಚಳ ಆಯ್ತು ಈಗ ಬಾಡಿಗೆ ದರವೂ ಏರಿಕೆ!
ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ಬೆಲೆ ಹೆಚ್ಚಳ ಆಯ್ತು ಈಗ ಬಾಡಿಗೆ ದರವೂ ಏರಿಕೆ!
ಮೈಸೂರಿನಲ್ಲಿ ಯುವತಿ ಜತೆ ರ್ಯಾಪಿಡೋ ಚಾಲಕ ಅವಾಚ್ಯ ಸಂಭಾಷಣೆ
ಮೈಸೂರಿನಲ್ಲಿ ಯುವತಿ ಜತೆ ರ್ಯಾಪಿಡೋ ಚಾಲಕ ಅವಾಚ್ಯ ಸಂಭಾಷಣೆ
ಸ್ಟಿಂಗ್ ಪ್ರಕರಣ: ವಿಡಿಯೋ ಮಾಡಿದ್ದೇ ಗೊತ್ತಿಲ್ಲವೆಂದ ಕೃಪಾ ಆಳ್ವ!
ಸ್ಟಿಂಗ್ ಪ್ರಕರಣ: ವಿಡಿಯೋ ಮಾಡಿದ್ದೇ ಗೊತ್ತಿಲ್ಲವೆಂದ ಕೃಪಾ ಆಳ್ವ!
ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ
ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ
ಡಿ.2ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ
ಡಿ.2ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ
ಕರಾವಳಿ ಬಳಿಕ ಉತ್ತರ ಕರ್ನಾಟಕದತ್ತ ಮುಖ ಮಾಡಿದ ಪ್ರಮೋದ್ ಶೆಟ್ಟಿ
ಕರಾವಳಿ ಬಳಿಕ ಉತ್ತರ ಕರ್ನಾಟಕದತ್ತ ಮುಖ ಮಾಡಿದ ಪ್ರಮೋದ್ ಶೆಟ್ಟಿ
ಪ್ರಧಾನಿ ಮೋದಿ ಬೆಂಗಳೂರು ಭೇಟಿಯ ಸಂಪೂರ್ಣ ವೇಳಾಪಟ್ಟಿ
ಪ್ರಧಾನಿ ಮೋದಿ ಬೆಂಗಳೂರು ಭೇಟಿಯ ಸಂಪೂರ್ಣ ವೇಳಾಪಟ್ಟಿ
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ