ಹದಿಹರೆಯದ ಮನೆಕೆಲಸದ ಹುಡುಗಿಗೆ ಇಕ್ಕಳದಲ್ಲಿ ಸುಟ್ಟು, ಹೊಡೆದು ಕಿರುಕುಳ ನೀಡುತ್ತಿದ್ದ ಗುರುಗ್ರಾಮದ ದಂಪತಿ ಬಂಧನ

|

Updated on: Feb 08, 2023 | 8:55 PM

ಆಕೆಗೆ ದಿನಗಟ್ಟಲೆ ಆಹಾರವನ್ನು ನೀಡಲಾಗಿಲ್ಲ. ಹದಿಹರೆಯದ ಆಕೆ ಡಸ್ಟ್‌ಬಿನ್‌ನಿಂದ ಉಳಿದ ಆಹಾರವನ್ನು ತಿನ್ನುತ್ತಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುಗ್ರಾಮ್ ಮೂಲದ ಎನ್‌ಜಿಒ ನೀಡಿದ ದೂರಿನ ಮೇರೆಗೆ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ

ಹದಿಹರೆಯದ ಮನೆಕೆಲಸದ ಹುಡುಗಿಗೆ ಇಕ್ಕಳದಲ್ಲಿ ಸುಟ್ಟು, ಹೊಡೆದು ಕಿರುಕುಳ ನೀಡುತ್ತಿದ್ದ ಗುರುಗ್ರಾಮದ ದಂಪತಿ ಬಂಧನ
ಗುರುಗ್ರಾಮದ ದಂಪತಿ
Follow us on

ಗುರುಗ್ರಾಮ್: 13 ವರ್ಷದ ಮನೆಕೆಲಸದ ಸಹಾಯಕಿಯನ್ನು ನಿನ್ನೆ (ಮಂಗಳವಾರ) ಸಂಜೆ ಗುರುಗ್ರಾಮ್‌ನಲ್ಲಿರುವ (Gurugram) ತನ್ನ ಉದ್ಯೋಗದಾತರ ಮನೆಯಿಂದ ರಕ್ಷಿಸಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಅವಳು ಭಯಾನಕ ದೌರ್ಜನ್ಯವನ್ನು (Torture) ಅನುಭವಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ. ಜಾರ್ಖಂಡ್ ಮೂಲದ ಬಾಲಕಿಯ ದೇಹದಾದ್ಯಂತ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯರು ಆಕೆಯ ವೈದ್ಯಕೀಯ ಪರೀಕ್ಷೆಯನ್ನೂ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ದಂಪತಿಗಳು ಹುಡುಗಿಯನ್ನು ಬಿಸಿ ಇಕ್ಕಳದಲ್ಲಿ ಸುಟ್ಟಿದ್ದಲ್ಲದೆ, ಕೋಲುಗಳಿಂದ ಹೊಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಕೆ ಆಹಾರವನ್ನು ಕದಿಯುತ್ತಿದ್ದಾಳೆ ಎಂದು ಆರೋಪಿಸಿ ದಂಪತಿಗಳು ಹಸಿವಿನಿಂದ ಹುಡುಗಿಯನ್ನು ಥಳಿಸುತ್ತಿದ್ದಾರೆ ಎಂದು ಪ್ರಾಥಮಿಕ ತನಿಖೆ ಸೂಚಿಸುತ್ತದೆ.

ಆಕೆಗೆ ದಿನಗಟ್ಟಲೆ ಆಹಾರವನ್ನು ನೀಡಲಾಗಿಲ್ಲ. ಹದಿಹರೆಯದ ಆಕೆ ಡಸ್ಟ್‌ಬಿನ್‌ನಿಂದ ಉಳಿದ ಆಹಾರವನ್ನು ತಿನ್ನುತ್ತಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುಗ್ರಾಮ್ ಮೂಲದ ಎನ್‌ಜಿಒ ನೀಡಿದ ದೂರಿನ ಮೇರೆಗೆ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ. ನಿನ್ನೆ ಕಾರ್ಯಕರ್ತರೊಬ್ಬರು ಹುಡುಗಿಯ ಸ್ಥಿತಿಯ ಕುರಿತು ಟ್ವಿಟರ್ ಥ್ರೆಡ್ ವೈರಲ್ ಆದ ನಂತರ ಎನ್‌ಜಿಒ ಪೊಲೀಸರನ್ನು ಸಂಪರ್ಕಿಸಿದೆ.
ಕಾರ್ಯಕರ್ತೆ ದೀಪಿಕಾ ನಾರಾಯಣ ಭಾರದ್ವಾಜ್ ಅವರು ಹಂಚಿಕೊಂಡಿರುವ ಫೋಟೊಗಳು ಹುಡುಗಿಯ ಹಣೆ, ತುಟಿಗಳು, ಕೆನ್ನೆ ಮತ್ತು ತೋಳುಗಳ ಮೇಲೆ ತರಚಿದ ಮತ್ತು ಸುಟ್ಟ ಗಾಯಗಳನ್ನು ತೋರಿಸುತ್ತವೆ.


ಕಳೆದ ವರ್ಷ ದಂಪತಿ ತಮ್ಮ ಮೂರು ತಿಂಗಳ ಮಗಳನ್ನು ನೋಡಿಕೊಳ್ಳಲು ಪ್ಲೇಸ್‌ಮೆಂಟ್ ಏಜೆನ್ಸಿಯ ಮೂಲಕ ಅವಳನ್ನು ನೇಮಿಸಿಕೊಂಡಿದ್ದರು.

ಇದನ್ನೂ ಓದಿ: ಜಗದೀಪ್ ಧನ್ಖರ್ ವಕೀಲರಾಗಿದ್ದಾಗ ಹಣ ಎಣಿಸಲು ಯಂತ್ರ ಬಳಸುತ್ತಿದ್ದರು ಎಂದ ಖರ್ಗೆ; ಸದನದಲ್ಲಿ ನಗುವೋ ನಗು

ದಂಪತಿಯನ್ನು ಬಂಧಿಸಲಾಗಿದ. ಜುವೆನೇಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಅಥವಾ ಪೋಕ್ಸೊ ಕಾಯ್ದೆಯಡಿ ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಬಾಲಕಿಯ ಫೋಟೊಗಳು ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿವೆ. ಬಂಧಿತ ಮಹಿಳೆಯನ್ನು ಆಕೆ ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:52 pm, Wed, 8 February 23