ಜಗದೀಪ್ ಧನ್ಖರ್ ವಕೀಲರಾಗಿದ್ದಾಗ ಹಣ ಎಣಿಸಲು ಯಂತ್ರ ಬಳಸುತ್ತಿದ್ದರು ಎಂದ ಖರ್ಗೆ; ಸದನದಲ್ಲಿ ನಗುವೋ ನಗು
ಅದಾನಿ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿಗೆ ಪ್ರತಿಪಕ್ಷಗಳ ಬೇಡಿಕೆಯನ್ನು ಉಲ್ಲೇಖಿಸಿದ ಸಭಾಪತಿ, "ಐಸಾ ಲಗ್ತಾ ಹೈ ಆಪ್ ಮೇರೆ ಉಪರ್ ಜೆಪಿಸಿ ಬಿಠಾ ದೋಗೆ (ನೀವು ನನ್ನ ಮೇಲೆ ಜೆಪಿಸಿ ತನಿಖೆಗೆ ಆಗ್ರಹಿಸುವಂತೆ ತೋರುತ್ತದೆ)" ಎಂದು ತಮಾಷೆ ಮಾಡಿದ್ದಾರೆ. ಈ ವಿಚಾರ ವಿನಿಮಯದಿಂದ ಸದನ ನಗೆಗಡಲಲ್ಲಿ ಮುಳುಗಿತು.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಗಂಭೀರ ಚರ್ಚೆ ವೇಳೆ ಸಭಾಪತಿಯಾಗಿರುವ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ (Jagdeep Dhankhar) ಹೇಳಿದ್ದಾರೆ ಎನ್ನಲಾದ ಮಾತುಗಳನ್ನು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಸ್ತಾಪಿಸಿದಾಗ ಸದನದಲ್ಲಿ ನಗೆಗಡಲು. ನೀವು ನನ್ನಲ್ಲಿ ಒಂದು ವಿಷಯ ಹೇಳಿದ್ದೀರಿ. ಅದನ್ನು ನಾನು ಇಲ್ಲಿ ಹೇಳಲಾ ಎಂದು ಹೇಳಿ ಖರ್ಗೆ ಹೀಗೆ ಹೇಳಿದ್ದಾರೆ. ಉಪರಾಷ್ಟ್ರಪತಿ ಅವರು ವಕೀಲರಾಗಿದ್ದ ಆರಂಭಿಕ ವರ್ಷಗಳಲ್ಲಿ ಕೈಯಿಂದ ಹಣವನ್ನು ಎಣಿಸುತ್ತಿದ್ದರು. ಆದರೆ ನಂತರ ಅವರು ವಕೀಲಿ ವೃತ್ತಿ ಮಾಡಿಕೊಂಡಾಗ ಹಣ ಎಣಿಕೆಗೆ ಯಂತ್ರವನ್ನು ಖರೀದಿಸಿದರು ಎಂದಿದ್ದರು. ಇದಕ್ಕೆ ನಗುತ್ತಾ ಪ್ರತಿಕ್ರಿಯಿಸಿದ ಧನ್ಖರ್, ಕೈ ಮುಗಿದು ನಾನು ಹಾಗೆ ಹೇಳಿಲ್ಲ ಎಂದಿದ್ದಾರೆ.
ಅದಾನಿ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿಗೆ ಪ್ರತಿಪಕ್ಷಗಳ ಬೇಡಿಕೆಯನ್ನು ಉಲ್ಲೇಖಿಸಿದ ಸಭಾಪತಿ, “ಐಸಾ ಲಗ್ತಾ ಹೈ ಆಪ್ ಮೇರೆ ಉಪರ್ ಜೆಪಿಸಿ ಬಿಠಾ ದೋಗೆ (ನೀವು ನನ್ನ ಮೇಲೆ ಜೆಪಿಸಿ ತನಿಖೆಗೆ ಆಗ್ರಹಿಸುವಂತೆ ತೋರುತ್ತದೆ)” ಎಂದು ತಮಾಷೆ ಮಾಡಿದ್ದಾರೆ. ಈ ವಿಚಾರ ವಿನಿಮಯದಿಂದ ಸದನ ನಗೆಗಡಲಲ್ಲಿ ಮುಳುಗಿತು.
#WATCH | Rajya Sabha Chairman Jagdeep Dhankhar in exchange with LoP Mallikarjun Kharge who is demanding JPC on the Adani issue says, “it seems you will set up a JPC on me.”
(Video source: Sansad TV) pic.twitter.com/hGEt7oPeGz
— ANI (@ANI) February 8, 2023
ಜುಲೈ 2019 ರಲ್ಲಿ ಬಂಗಾಳದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಧನ್ಖರ್ ಅವರು ಸುಪ್ರೀಂಕೋರ್ಟ್‌ನ ಹೆಸರಾಂತ ಹಿರಿಯ ವಕೀಲರಾಗಿದ್ದರು. ಅವರು ಜೈಪುರದ ರಾಜಸ್ಥಾನ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷರಾಗಿದ್ದಾರೆ. 1987ರಲ್ಲಿ ಅವರು ಆ ಸ್ಥಾನಕ್ಕೆ ಆಯ್ಕೆಯಾದ ಕಿರಿಯ ವ್ಯಕ್ತಿ ಆಗಿದ್ದರು.
ರಾಷ್ಟ್ರಪತಿಗಳ ಭಾಷಣಕ್ಕೆ ನೀಡಿದ ಉತ್ತರದ ವೇಳೆ, ಖರ್ಗೆ ಅವರು ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದು, ಅದಾನಿ ವಿಷಯದ ಬಗ್ಗೆ ಅವರ ಮೌನವನ್ನು ಪ್ರಶ್ನಿಸುವಾಗ ಅವರನ್ನು “ಮೌನಿ ಬಾಬಾ” ಎಂದು ಕರೆದರು.
ಇದನ್ನೂ ಓದಿ: ಅದಾನಿ ವಿಚಾರದಲ್ಲಿ ಮೇಲ್ಮನೆಯಲ್ಲಿ ಗದ್ದಲ; ರಾಜ್ಯಸಭೆಯಲ್ಲಿ ಮೋದಿಯನ್ನು ಮೌನಿ ಬಾಬಾ ಎಂದ ಮಲ್ಲಿಕಾರ್ಜುನ ಖರ್ಗೆ
“ನೀವು ಯಾಕೆ ಮೌನವಾಗಿರುವಿರಿ ಎಂದು ನಾನು ಪ್ರಧಾನಿಯನ್ನು ಕೇಳಲು ಬಯಸುತ್ತೇನೆ. ನೀವು ಪ್ರತಿಯೊಬ್ಬ ವ್ಯಕ್ತಿಯನ್ನು ಹೆದರಿಸುತ್ತೀರಿ ಏಕೆ ನೀವು ಕೈಗಾರಿಕೋದ್ಯಮಿಗಳನ್ನು ಹೆದರಿಸುತ್ತಿಲ್ಲ? ಎಂದು ಖರ್ಗೆ ಗುಡುಗಿದ್ದಾರೆ. “ದ್ವೇಷ ಹರಡುವ ಜನರ ಮೇಲೆ ಪ್ರಧಾನಿ ಗರಂ ಆದರೆ ಅವರು ಈ ಬಾರಿ ನನಗೆ ಟಿಕೆಟ್ ಸಿಗುವುದಿಲ್ಲ ಎಂದು ಕುಳಿತುಕೊಳ್ಳುತ್ತಾರೆ. ಆದರೆ ಮೋದಿ ಇಂದು ಮೌನವಾಗಿರಲು ಬಯಸಿದ್ದಾರೆ. ಅವರು ಮೌನಿ ಬಾಬಾ ಆಗಿದ್ದಾರೆ ಎಂದಿದ್ದಾರೆ ಖರ್ಗೆ.
ಖರ್ಗೆಯವರ ಟೀಕೆಗೆ ಪ್ರತಿಕ್ರಿಯಿಸಿದ ಧನ್ಖರ್, ಅಂತಹ ಹೇಳಿಕೆ ನಿಮ್ಮ ಸ್ಥಾನಮಾನಕ್ಕೆ ಸರಿಹೊಂದುವುದಿಲ್ಲ ಎಂದು ಹೇಳಿದ್ದಾರೆ. “ಅಂತೆಯೇ, ನೀವು ಸಂಸ್ಥೆಗಳನ್ನು ಆ ರೀತಿಯ ಅವಲೋಕನದಿಂದ ಪರಿಗಣಿಸಲು ಸಾಧ್ಯವಿಲ್ಲ. ನೀವು ಹಿರಿಯ ಸದಸ್ಯರು. ಮನೆಯಲ್ಲಿ ಯಾರಾದರೂ ವಿಪಕ್ಷ ನಾಯಕನ ಬಗ್ಗೆ ಹೇಳಿದರೂ ನಾನು ಅವರನ್ನು ರಕ್ಷಿಸಲು ಬರುತ್ತೇನೆ ಎಂದು ಅವರು ಹೇಳಿದರು. “ಇದು ಉನ್ನತ ಸಾಂವಿಧಾನಿಕ ಸ್ಥಾನವಾಗಿದೆ. ನೀವು ಚರ್ಚೆಯ ಮಟ್ಟವನ್ನು ಹೆಚ್ಚಿಸುತ್ತೀರಿ ಎಂದು ನಾನು ನಿರೀಕ್ಷಿಸಿದ್ದೆ” ಎಂದು ಅವರು ಹೇಳಿದರು.