ಅಜ್ಜಿ ಮನೆಯಲ್ಲಿದ್ದ ಬಾಲಕಿಗೆ ಆಮಿಷವೊಡ್ಡಿ ಟೆನಿಸ್ ಕೋಚ್​ನಿಂದ ಅತ್ಯಾಚಾರ

|

Updated on: Mar 23, 2021 | 9:44 PM

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಅಮಾನುಷ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಬಾಲಕಿಯ ನೆರೆಮನೆಯ ನಿವಾಸಿಯಿಂದ ಅತ್ಯಾಚಾರ ಎಸಗಲಾಗಿದೆ.

ಅಜ್ಜಿ ಮನೆಯಲ್ಲಿದ್ದ ಬಾಲಕಿಗೆ ಆಮಿಷವೊಡ್ಡಿ ಟೆನಿಸ್ ಕೋಚ್​ನಿಂದ ಅತ್ಯಾಚಾರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಅಮಾನುಷ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಬಾಲಕಿಯ ನೆರೆಮನೆಯ ನಿವಾಸಿಯಿಂದ ಅತ್ಯಾಚಾರ ಎಸಗಲಾಗಿದೆ. ಅಜ್ಜಿ ಮನೆಯಲ್ಲಿದ್ದ ಬಾಲಕಿಗೆ ಆಮಿಷವೊಡ್ಡಿ ವೃತ್ತಿಯಲ್ಲಿ ಟೆನಿಸ್ ಕೋಚ್​ ಆಗಿರುವ ಆರೋಪಿ ದುಷ್ಕೃತ್ಯ ನಡೆಸಿದ್ದಾನೆ. 3-4 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ಪೋಷಕರಿಂದ ಬಾಣಸವಾಡಿ ಠಾಣೆಗೆ ದೂರು ನೀಡಲಾಗಿದೆ.

ಕಾರು ಡಿಕ್ಕಿ, ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ
ಕಾರು ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಕಲ್ಲೂರು ಬಳಿ ದೇವಪ್ಪ(22), ಕೃಷ್ಣಯ್ಯ(45) ಸಾವನ್ನಪ್ಪಿದ್ದಾರೆ. ಕಾರು ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಅಪಘಾತದ ಭೀಕರ ದೃಶ್ಯ

ತಿರ್ಲಾಪುರದಲ್ಲಿ ಬಾರ್​ ಆರಂಭಿಸಿದ್ದಕ್ಕೆ ಗ್ರಾಮಸ್ಥರ ಧರಣಿ
ತಿರ್ಲಾಪುರದಲ್ಲಿ ಬಾರ್​ ಆರಂಭಿಸಿದ್ದಕ್ಕೆ ಗ್ರಾಮಸ್ಥರು ಧರಣಿ ನಡೆಸಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಿರ್ಲಾಪುರದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ರೈತ ಮುಖಂಡ ವೀರೇಶ್ ಸೊಬರದಮಠ ನೇತೃತ್ವದಲ್ಲಿ ಧರಣಿ ನಡೆಸಲಾಗಿದೆ. ಅಹೋರಾತ್ರಿ ಧರಣಿ ನಡೆಸುವುದಕ್ಕೆ ಗ್ರಾಮಸ್ಥರ ನಿರ್ಧಾರ ಕೈಗೊಂಡಿದ್ದಾರೆ.

ಬಾರ್​ ಆರಂಭಿಸಿದ್ದಕ್ಕೆ ಗ್ರಾಮಸ್ಥರ ಧರಣಿ

ಬೈಕ್ ಅಪಘಾತ: ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ 13 ಆರೋಪಿಗಳ ಬಂಧನ
ಬೈಕ್ ಅಪಘಾತ ಹಿನ್ನೆಲೆ ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ್ದ 13 ಆರೋಪಿಗಳ ಬಂಧನವಾಗಿದೆ. ಮೈಸೂರಿನ ವಿಜಯನಗರ ಪೊಲೀಸರಿಂದ ಆರೋಪಿಗಳ ಬಂಧನವಾಗಿದೆ. ಪ್ರಕರಣ ಸಂಬಂಧ 15 ಜನರ ವಿರುದ್ಧ ಪ್ರಕರಣ​ ದಾಖಲಾಗಿದೆ. ಇದಲ್ಲದೆ, ಮತ್ತಿಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳ ವಿಡಿಯೋ ಆಧರಿಸಿ ಇವರನ್ನು ಅರೆಸ್ಟ್​ ಮಾಡಲಾಗಿದೆ.

ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ 13 ಆರೋಪಿಗಳ ಬಂಧನ

ವಾಹನದ ಇನ್ಶುರೆನ್ಸ್ ಇದೆ -ಪೊಲೀಸ್ ಇಲಾಖೆ ಸ್ಪಷ್ಟನೆ
ಮೈಸೂರಿನಲ್ಲಿ ವಾಹನ ತಪಾಸಣೆ ವೇಳೆ ಸವಾರ ಸಾವು ಕೇಸ್​ನಲ್ಲಿ ಪೊಲೀಸ್ ವಾಹನದ ಇನ್ಶುರೆನ್ಸ್ ಇದೆ ಎಂದು
ಮೈಸೂರು ನಗರ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಮಾರುತಿ ಎರಿಟಿಗಾ ವಾಹನದ ಇನ್ಶುರೆನ್ಸ್ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲಾತಾಣದಲ್ಲಿ ಈ ಬಗ್ಗೆ ಚರ್ಚೆ ಹಿನ್ನೆಲೆ ಇಲಾಖೆಯಿಂದ ಸ್ಪಷ್ಟನೆ ಬಿಡುಗಡೆಯಾಗಿದೆ.

ವಾಹನದ ಇನ್ಶುರೆನ್ಸ್ ಇದೆ -ಪೊಲೀಸ್ ಇಲಾಖೆ ಸ್ಪಷ್ಟನೆ

ಇನ್ಶುರೆನ್ಸ್ ಅಂತ್ಯ ಎಂದು ಪರಿವಾಹನ್ ಆ್ಯಪ್‌ನಲ್ಲಿ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಇದನ್ನು ಸಾರ್ವಜನಿಕರು ಪ್ರಶ್ನಿಸಿದ್ದರು. ಹೀಗಾಗಿ, ಪೊಲೀಸರು ಇನ್ಶುರೆನ್ಸ್ ಪ್ರತಿ ಬಿಡುಗಡೆಗೊಳಿಸಿದ್ದಾರೆ. 2021ರ ಡಿಸೆಂಬರ್‌ವರೆಗೆ ವಿಮೆ ಹೊಂದಿರುವ KA 55 G-0430 ಸಂಖ್ಯೆಯ ಮಾರುತಿ ಎರಿಟಿಗಾ ಗರುಡ ವಾಹನ ನಿನ್ನೆ ಘಟನೆಯಲ್ಲಿ ಜಖಂಗೊಂಡಿತ್ತು.

ಇದನ್ನೂ  ಓದಿ: ತಪಾಸಣೆ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರ ಸ್ಥಳದಲ್ಲೇ ಸಾವು ಪ್ರಕರಣಕ್ಕೆ ಟ್ವಿಸ್ಟ್.. ಹಿಂಬದಿ ಸವಾರ ಬಿಚ್ಚಿಟ್ಟ ನಿಜವಾದ ಸತ್ಯ 

Published On - 9:42 pm, Tue, 23 March 21