ಬೆಂಗಳೂರು: ತನ್ನ ಗರ್ಲ್ ಫ್ರೆಂಡ್ನ ಸ್ನೇಹಿತೆಯ ಬಾಯ್ ಫ್ರೆಂಡ್ ತಂದಿದ್ದ ಚಿನ್ನಾಭರಣಕ್ಕೆ ಬಾಯಿಬಿಟ್ಟ ಖದೀಮ ಆತ ತಂದಿದ್ದ ಚಿನ್ನಾಭರಣವನ್ನು ದೋಚಿ ಜೈಲು ಸೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತನ್ನ ಲವರ್ ಸ್ನೇಹಿತೆಯ ಬಾಯ್ ಫ್ರೆಂಡ್ಗೆ ಹೆದರಿಸಿ ಚಿನ್ನಾಭರಣ ದೋಚಿದ್ದಾನೆ. ಆದರೆ ಸ್ನೇಹಿತೆಯ ಜೊತೆಗೆ ಆಗಮಿಸಿದ ಯುವತಿ.. ತನ್ನ ಬಾಯ್ ಫ್ರೆಂಡ್ ವಿರುದ್ಧ ದೂರು ನೀಡಿ, ಸ್ನೇಹಿತೆಗೆ ನ್ಯಾಯ ಒದಗಿಸಿದ್ದಾಳೆ.
ಈ ಸಂಬಂಧ ಜಾಕಿರ್ ಹುಸೇನ್ (30), ಶಾಬಾಜ್ ಖಾನ್(25), ಫಾಜಿಲ್ (23) ಸೇರಿ ಮೂವರನ್ನು ಚಂದ್ರ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 3 ಲಕ್ಷ ಬೆಲೆಬಾಳುವ 102.3 ಗ್ರಾಂ ಚಿನ್ನಾಭರಣ, ಒಂದು ಆ್ಯಕ್ಸಿಸ್ ಬೈಕ್ ವಶಕ್ಕೆ ಪಡೆಯಲಾಗಿದೆ. ಇದೇ ತಿಂಗಳ 13 ರಂದು ಚಂದ್ರ ಲೇಔಟ್ನ ಭೈರವೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ.
ಘಟನೆ ವಿವರ:
ಮಾಯಿ ಮತ್ತು ಆಕೆಯ ಬಾಯ್ ಫ್ರೆಂಡ್ ಆರೋಪಿ ಜಾಕಿರ್ ಹುಸೇನ್ ಇಬ್ಬರೂ ಮಾಯಿಯ ಸ್ನೇಹಿತೆ ನಯನಾಳನ್ನು ಭೇಟಿ ಮಾಡಿ ಅವಳ ಜೊತೆ ಕಾಲಕಳೆಯುತ್ತಿರುತ್ತಾರೆ. ಈ ವೇಳೆ ನಗರ್ತ ಪೇಟೆಯ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ, ಪಶ್ಚಿಮ ಬಂಗಾಳ ಮೂಲದ ಸಪನ್ ಮಿಥ್ಯ ಎಂಬ ಯುವಕ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಬಂದಿರುತ್ತಾನೆ.
ಪಶ್ಚಿಮ ಬಂಗಾಳ ಚುನಾವಣೆಗೆ ಹೋಗೊ ಮುನ್ನ ತನ್ನ ಪ್ರೀತಿಯ ಪ್ರೇಯಸಿ ನಯನಾಳ ಭೇಟಿಗೆ ಬಂದ ಸಪನ್, 3 ಲಕ್ಷ ಮೌಲ್ಯದ 2 ನೆಕ್ಲೆಸ್ ಮತ್ತು ಒಂದು ಬ್ರೇಸ್ ಲೆಟ್ ಕೂಡ ತಂದಿದ್ದ. ಇದನ್ನು ಗಮನಿಸಿದ ಮಾಯಿ ಬಾಯ್ ಫ್ರೆಂಡ್ ಜಾಕಿರ್ ಹುಸೇನ್ ತನ್ನ ಇಬ್ಬರು ಸ್ನೇಹಿತರ ಜೊತೆ ಹೋಗಿ ಸಪನ್ಗೆ ಬೆದರಿಸಿ ಅವನ ಬಳಿ ಇದ್ದ ಚಿನ್ನಾಭರಣ, ಹಣ ಕಿತ್ತು ಪರಾರಿಯಾಗಿದ್ದ. ಇದ್ಯಾವುದೂ ತಿಳಿಯದ, ಗಮನಿಸಿ.. ಇದ್ಯಾವುದೂ ತಿಳಿಯದ ಮಾಯಿ ತನ್ನ ಸ್ನೇಹಿತೆ ನಯನ ಜೊತೆಗೆ ಬಂದು ಚಂದ್ರ ಲೇಔಟ್ ಠಾಣೆಯಲ್ಲಿ ದರೋಡೆ ಸಂಬಂಧ ದೂರು ದಾಖಲಿಸುತ್ತಾರೆ. ಬಳಿಕ ತನಿಖೆಗೆ ಇಳಿದ ಚಂದ್ರ ಲೇಔಟ್ ಠಾಣೆ ಪೊಲೀಸರು ಜಾಕೀರ್ ಹುಸೇನ್ ಸೇರಿ ಮೂವರನ್ನು ಬಂಧಿಸಿದ್ದಾರೆ….
ಶಾಬಾಜ್ ಖಾನ್, ಜಾಕಿರ್ ಹುಸೇನ್, ಫಾಜಿಲ್
ಇದನ್ನೂ ಓದಿ: ಬಾಗಲಗುಂಟೆ ಠಾಣೆ ಪೊಲೀಸರ ಕಾರ್ಯಾಚರಣೆ ಯಶಸ್ವಿ; ಇಬ್ಬರು ದರೋಡೆಕೋರರ ಬಂಧನ