ತಪಾಸಣೆ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರ ಸ್ಥಳದಲ್ಲೇ ಸಾವು ಪ್ರಕರಣಕ್ಕೆ ಟ್ವಿಸ್ಟ್.. ಹಿಂಬದಿ ಸವಾರ ಬಿಚ್ಚಿಟ್ಟ ನಿಜವಾದ ಸತ್ಯ

ಪೊಲೀಸರ ತಪಾಸಣಾ ಸ್ಥಳದಲ್ಲಿ ನಿನ್ನೆ ಸಂಭವಿಸಿದ ಅಪಘಾತ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ನಿನ್ನೆ ನಡೆದ ಅಪಘಾತಕ್ಕೆ ಪೊಲೀಸರು ಕಾರಣರಲ್ಲ. ಪೊಲೀಸರ ತಪಾಸಣೆಯ ವೇಳೆ ನಮ್ಮ ಬೈಕ್ ತಡೆದಿರಲಿಲ್ಲ ಎಂದು ಅಪಘಾತಕ್ಕೀಡಾದ ಬೈಕ್ ಹಿಂಬದಿ ಕುಳಿತಿದ್ದ ಸವಾರ ಸುರೇಶ್ ಮಾಹಿತಿ ನೀಡಿದ್ದಾರೆ.

ತಪಾಸಣೆ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರ ಸ್ಥಳದಲ್ಲೇ ಸಾವು ಪ್ರಕರಣಕ್ಕೆ ಟ್ವಿಸ್ಟ್.. ಹಿಂಬದಿ ಸವಾರ ಬಿಚ್ಚಿಟ್ಟ ನಿಜವಾದ ಸತ್ಯ
Follow us
|

Updated on: Mar 23, 2021 | 10:25 AM

ಮೈಸೂರು: ಪೊಲೀಸರ ತಪಾಸಣಾ ಸ್ಥಳದಲ್ಲಿ ನಿನ್ನೆ ಸಂಭವಿಸಿದ ಅಪಘಾತ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ನಿನ್ನೆ ನಡೆದ ಅಪಘಾತಕ್ಕೆ ಪೊಲೀಸರು ಕಾರಣರಲ್ಲ. ಪೊಲೀಸರ ತಪಾಸಣೆಯ ವೇಳೆ ನಮ್ಮ ಬೈಕ್ ತಡೆದಿರಲಿಲ್ಲ ಎಂದು ಅಪಘಾತಕ್ಕೀಡಾದ ಬೈಕ್ ಹಿಂಬದಿ ಕುಳಿತಿದ್ದ ಸವಾರ ಸುರೇಶ್ ಮಾಹಿತಿ ನೀಡಿದ್ದಾರೆ. ಈ ಅಪಘಾತದಲ್ಲಾದ ಸಾವಿಗೂ ಪೊಲೀಸರಿಗೂ ಯಾವುದೇ ಸಂಬಂಧವಿಲ್ಲ ಎಂದು ಸುರೇಶ್ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ನಡೆದ ಅಪಘಾತಕ್ಕೆ ಪೊಲೀಸರು ಕಾರಣರಲ್ಲ. ಪೊಲೀಸರ ತಪಾಸಣೆಯ ವೇಳೆ ನಮ್ಮ ಬೈಕ್ ತಡೆದಿರಲಿಲ್ಲ. ತಪಾಸಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ದೇವರಾಜ್ ಬೈಕ್ ಸ್ಲೋ ಮಾಡಿದ್ರು. ಈ ವೇಳೆ ಹಿಂಬದಿಯಿಂದ ಬಂದ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೀತು. ಟಿಪ್ಪರ್ ಡಿಕ್ಕಿ ಹೊಡೆದ ಹಿನ್ನೆಲೆ ನಾವು ಕೆಳಗೆ ಬಿದ್ದೆವು. ನಂತರ ನಾನು ಪ್ರಜ್ಞೆ ತಪ್ಪಿಬಿದ್ದೆ, ಕೆಲಕಾಲದ ಬಳಿಕ ನನಗೆ ಎಚ್ಚರವಾದಾಗ ಸ್ಥಳದಲ್ಲಿ ಹಲವರು ನೆರೆದಿದ್ದರು ಎಂದು ಬೈಕ್ ಹಿಂಬದಿ ಕುಳಿತಿದ್ದ ಸವಾರ ಸುರೇಶ್ ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನಲೆ ಮೈಸೂರಿನ ಹಿನಕಲ್ ಬಳಿಯ ರಿಂಗ್ ರಸ್ತೆಯಲ್ಲಿ ನಿನ್ನೆ (ಮಾರ್ಚ್ 23) ಸಂಚಾರ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಆ ದಾರಿಯಲ್ಲಿ ಬರುತ್ತಿದ್ದ ಬೈಕ್ ಸವಾರ ಪೊಲೀಸರ ತಪಾಸಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬೈಕ್ ಸ್ಲೋ ಮಾಡಿದ್ದಾನೆ. ಆದ್ರೆ ಹಿಂದೆ ಬಂದ ಟಿಪ್ಪರ್, ಬೈಕ್​ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸವಾರ ಎಚ್.ಡಿ.ಕೋಟೆ ತಾಲೂಕಿನ ಕನ್ನೇನಹಳ್ಳಿ ನಿವಾಸಿ, ಸಿವಿಲ್ ಇಂಜಿನಿಯರ್ ದೇವರಾಜು(46) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ ಹಿಂಬದಿ ಸವಾರ ಸುರೇಶ್ ಪ್ರಜ್ಞೆ ತಪ್ಪಿದ್ದು ಸದ್ಯ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದ್ರೆ ಅಪಘಾತ ಸ್ಥಳದಲ್ಲಿ ನೆರೆದಿದ್ದ ಜನ ಈ ಘಟನೆಯನ್ನು ತಪ್ಪಾಗಿ ಅರ್ಧೈಸಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಪೊಲೀಸ್ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಬೈಕ್ ಸವಾರ ಮೃತಪಟ್ಟಿದ್ದಾನೆಂದು ಭಾವಿಸಿ ಸಾರ್ವಜನಿಕರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರನ್ನು ಕಂಡು ಗಾಬರಿಯಾಗಿದ್ದ ದೇವರಾಜು, ಪೇದೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ರು. ಎಎಸ್‌ಐ, ಪೊಲೀಸ್ ಕಾನ್ಸ್‌ಟೇಬಲ್ ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದರು. ಸದ್ಯ ಈಗ ಈ ಅಪಘಾತಕ್ಕೂ ಪೊಲೀಸರಿಗೂ ಯಾವುದೇ ಸಂಬಂಧವಿಲ್ಲ. ದೇವರಾಜು ಸಾವಿಗೆ ಪೊಲೀಸರು ಕಾರಣರಲ್ಲ ಎಂದು ಸುರೇಶ್ ಸ್ಪಷ್ಟಪಡಿಸಿದ್ದಾರೆ. ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ತಪಾಸಣೆ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರ ಸ್ಥಳದಲ್ಲೇ ಸಾವು; ಪೊಲೀಸರ ಮೇಲೆ ಸಾರ್ವಜನಿಕರಿಂದ ಹಲ್ಲೆ

‘ಯಾರೂ ಉಳಿಯಲ್ಲ’; ತೊಡೆ ತಟ್ಟಿದ ಉಗ್ರಂ ಮಂಜು
‘ಯಾರೂ ಉಳಿಯಲ್ಲ’; ತೊಡೆ ತಟ್ಟಿದ ಉಗ್ರಂ ಮಂಜು
ಬುಡಕಟ್ಟು ಜನರೊಂದಿಗೆ ನೃತ್ಯ ಮಾಡಿದ ಸಿಎಂ ಸಿದ್ದರಾಮಯ್ಯ
ಬುಡಕಟ್ಟು ಜನರೊಂದಿಗೆ ನೃತ್ಯ ಮಾಡಿದ ಸಿಎಂ ಸಿದ್ದರಾಮಯ್ಯ
ಊಟ ಮಾಡುವಾಗ ಅರ್ಧಕ್ಕೆ ಎದ್ದು ಹೋಗಬಾರದು ಯಾಕೆ? ವಿಡಿಯೋ ನೋಡಿ
ಊಟ ಮಾಡುವಾಗ ಅರ್ಧಕ್ಕೆ ಎದ್ದು ಹೋಗಬಾರದು ಯಾಕೆ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ತಮಿಳು, ತೆಲುಗಿನಲ್ಲೂ ಶಿವರಾಜ್​ಕುಮಾರ್ ಬ್ಯುಸಿ; ಇಲ್ಲಿದೆ ಮಾಹಿತಿ..
ತಮಿಳು, ತೆಲುಗಿನಲ್ಲೂ ಶಿವರಾಜ್​ಕುಮಾರ್ ಬ್ಯುಸಿ; ಇಲ್ಲಿದೆ ಮಾಹಿತಿ..
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ