ಅತ್ಯಾಚಾರವೆಸಗಿ ಜೈಲು ಪಾಲಾಗಿದ್ದ ವ್ಯಕ್ತಿಯಿಂದ ಅದೇ ಹುಡುಗಿ ಮೇಲೆ ಮತ್ತೆ ಅತ್ಯಾಚಾರ

ಎರಡು ವರ್ಷಗಳ ಹಿಂದೆ ಅಪ್ರಾಪ್ತರಾಗಿದ್ದಾಗ ಅದೇ ಆರೋಪಿಗಳಿಂದ ಅತ್ಯಾಚಾರವೆಸಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ತಿಂಗಳ ಹಿಂದೆ ಆರೋಪಿ ತನ್ನ ಸ್ನೇಹಿತನೊಂದಿಗೆ ಬಲವಂತವಾಗಿ ತನ್ನ ಮನೆಗೆ ನುಗ್ಗಿ ಚಾಕು ತೋರಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹುಡುಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅತ್ಯಾಚಾರವೆಸಗಿ ಜೈಲು ಪಾಲಾಗಿದ್ದ ವ್ಯಕ್ತಿಯಿಂದ ಅದೇ ಹುಡುಗಿ ಮೇಲೆ ಮತ್ತೆ ಅತ್ಯಾಚಾರ
ಸಾಂದರ್ಭಿಕ ಚಿತ್ರ
Edited By:

Updated on: Aug 03, 2022 | 1:18 PM

ಮಧ್ಯಪ್ರದೇಶ: 2020 ರ ಅತ್ಯಾಚಾರ ಪ್ರಕರಣದಲ್ಲಿ ಬಂಧನವಾದ ವ್ಯಕ್ತಿ, ಜಾಮೀನಿನ ಮೇಲೆ ಬಿಡುಗಡೆಯಾಗಿ ಅದೇ ಮಹಿಳೆಗೆ ಚಾಕು ಹಿಡಿದು ಅತ್ಯಾಚಾರವೆಸಗಿದ್ದಾನೆ. ಈ ಘಟನೆ ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಈ ಹಿಂದೆ ತನ್ನ ವಿರುದ್ಧ ನೀಡಿದ್ದ ದೂರನ್ನು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮತ್ತು ಆತನ ಸ್ನೇಹಿತನನ್ನು ಸೇರಿ ಈ ಕೃತ್ಯವನ್ನು ಸುಮಾರು ಒಂದು ತಿಂಗಳ ಹಿಂದೆ ನಡೆಸಿದ್ದಾರೆ ಎಂದು ಹುಡುಗಿ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈಗ ಈ ಹುಡುಗಿಗೆ 19 ವರ್ಷ ವಯಸ್ಸು, ಎರಡು ವರ್ಷಗಳ ಹಿಂದೆ ಅಪ್ರಾಪ್ತರಾಗಿದ್ದಾಗ ಅದೇ ಆರೋಪಿಗಳಿಂದ ಅತ್ಯಾಚಾರವೆಸಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ತಿಂಗಳ ಹಿಂದೆ ಆರೋಪಿ ತನ್ನ ಸ್ನೇಹಿತನೊಂದಿಗೆ ಬಲವಂತವಾಗಿ ತನ್ನ ಮನೆಗೆ ನುಗ್ಗಿ ಚಾಕು ತೋರಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹುಡುಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿ ಮತ್ತು ಆತನ ಸ್ನೇಹಿತ ಕೃತ್ಯದ ವಿಡಿಯೋ ಕ್ಲಿಪ್ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅವರು ಸಲ್ಲಿಸಿದ ಹಿಂದಿನ ದೂರನ್ನು ಹಿಂಪಡೆಯದಿದ್ದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗುವುದು ಎಂದು ಬ್ಲಾಕ್​ ಮೇಲ್ ಮಾಡಿದ್ದಾರೆ ಎಂದು ಹೇಳಿದ್ದಾಳೆ.

ಇದನ್ನೂ ಓದಿ
One Day Trip:ಒತ್ತಡ ಬದಿಗಿಟ್ಟು, ಬೆಂಗಳೂರಿನಿಂದ ಈ ಸ್ಥಳಗಳಿಗೆ ಒಂದು ದಿನದ ಟ್ರಿಪ್​ ಹೋಗಿ
World Milk Day 2022: ಹಾಲಿನ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಹೇಗೆ ಇಲ್ಲಿದೆ ಓದಿ
World No Tobacco Day 2022: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ; ವಿಶ್ವ ಧೂಮಪಾನ ರಹಿತ ದಿನವನ್ನು ಏಕೆ ಆಚರಿಸುತ್ತಾರೆ ಇಲ್ಲಿದೆ ಓದಿ
Travel: ಬೇಸಿಗೆ ರಜೆಯಲ್ಲಿ ಅಗ್ಗದ ಕುಟುಂಬ ಪ್ರವಾಸ ಮಾಡಲು ಈ ಸ್ಥಳಗಳಿಗೆ ಭೇಟಿ ನೀಡಿ..!

ಈ ಬಗ್ಗೆ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಬ್ಬರನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ದೂರುದಾರರ ಪ್ರಕಾರ, ಆರೋಪಿ ವಿವೇಕ್ ಪಟೇಲ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ತನ್ನ ಸ್ನೇಹಿತನೊಂದಿಗೆ ಮತ್ತೆ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಆಸಿಫ್ ಇಕ್ಬಾಲ್ ಹೇಳಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು 2020ರಲ್ಲಿ ಬಂಧಿಸಲಾಗಿತ್ತು. ಅವರು ಸುಮಾರು ಒಂದು ವರ್ಷದ ನಂತರ 2021 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದರು ಎಂದು ಹೇಳಿದರು.

Published On - 1:18 pm, Wed, 3 August 22

TV9 Web

TV9 Kannada

Read More
Loading...
Unable to load recommendations.
Follow Us