ಆನೇಕಲ್: ಆನೇಕಲ್ನಲ್ಲಿ ಕಳ್ಳರ ಕೈ ಚಳಕಕ್ಕೆ ಪೊಲೀಸರೇ ಬೆರಗಾಗಿದ್ದಾರೆ. ಹೌದು ಕಳ್ಳರು ಪೊಲೀಸ್ ಠಾಣೆ ಎದುರಿನ ಅಂಗಡಿಯಲ್ಲಯೇ ಕಳ್ಳತನ ಮಾಡಿದ್ದಾರೆ. ಬನ್ನೇರುಘಟ್ಟದಲ್ಲಿ ಮುಖ್ಯ ಬೀದಿಯಲ್ಲಿರುವ ಬನ್ನೇರುಘಟ್ಟ ಪೊಲೀಸ್ ಠಾಣೆಯ ಎದುರಿನ ಕೋದಂಡರಾಮ ದಿನಸಿ ಅಂಗಡಿಯಲ್ಲಿ ಕಳ್ಳತನವಾಗಿದೆ. ದೀಪಕ್ ಎಂಬುವರಿಗೆ ಸೇರಿದ ದಿನಸಿ ಅಂಗಡಿಯ ಬಾಗಿಲು (ಸೆಟ್ರೆಸ್)ನ್ನು ಹೈಡ್ರಾಲಿಕ್ ಮಷೀನ್ ನಿಂದ ಒಡೆದು 1 ಲಕ್ಷ ನಗದು, ಸೇರಿ ಲಕ್ಷಾಂತರ ಮೌಲ್ಯದ ವಸ್ತು ಕದ್ದು ಪಾರಾರಿಯಾಗಿದ್ದಾರೆ.
ಇನ್ನು ರಾತ್ರಿ ಪಾಳಯದ ಪೊಲೀಸ್ರು ಬೀಟ್ನಲ್ಲಿದ್ದರೂ, ಅದು ಪೊಲೀಸ್ ಠಾಣೆ ಎದುರು ಪೊಲೀಸರ ಕಣ್ತಪ್ಪಿಸಿ ಕಳ್ಳತ ಮಾಡಿರುವುದು ಚಕಿತ ಮೂಡಿಸಿದೆ. ಬೆಳಗ್ಗೆ ಅಂಗಡಿ ಮಾಲೀಕರು ಅಂಗಡಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ: ದುಷ್ಕರ್ಮಿಗಳು 25 ವರ್ಷದ ಯುವಕನನ್ನು ಕೊಂದು ಸುಟ್ಟು ಹಾಕಿದ ಘಟನೆ ಜಿಲ್ಲೆಯ ಅರಸೀಕೆರೆಯ ಶ್ರೀನಗರದ ರೈಲ್ವೆ ಹಳಿ ಸಮೀಪ ನಡೆದಿದೆ. ಘಟನಾ ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಸೀಕೆರೆ ಪೊಲೀಸರು ಮೃತದೇಹದ ಗುರುತು ಪತ್ತೆಗೆ ಮುಂದಾಗಿದ್ದಾರೆ. ಅರಸೀಕೆರೆ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಮಕೂರು:ಕಾರು-ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮಕಾರಿನಲ್ಲಿದ್ದದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗ್ರಾಮದಲ್ಲಿ ನಡೆದಿದೆ. ರಘು(35), ಅನುಷಾ(28) ಮೃತ ದುರ್ದೈವಿಗಳು. ದಂಪತಿ ತಿಗಳನಹಳ್ಳಿಯಿಂದ ಬಳ್ಳಾರಿಗೆ ಮದುವೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ