
ಬೆಂಗಳೂರು: ನಗರದಲ್ಲಿ ಸ್ಯಾಂಡಲ್ವುಡ್ ನಶೆ ನಂಟು ಬೆಳಕಿಗೆ ಬರುತ್ತಿದ್ದಂತೆ ಡ್ರಗ್ ಮಾಫಿಯಾದ ವಿರುದ್ಧ ಖಾಕಿ ಪಡೆ ಸಮರ ಸಾರಿದೆ. ಈ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಮೂವರು ವಿದೇಶಿ ಡ್ರಗ್ಸ್ ಪೆಡ್ಲರ್ಸ್ನ ಬಂಧಿಸಲಾಗಿದೆ.
ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಡ್ರಗ್ ಪೆಡ್ಲರ್ಸ್ ಅರೆಸ್ಟ್ ಆಗಿದ್ದು ಬಂಧಿತರನ್ನು ಕಿಜ್ ಪ್ರಿನ್ಸ್, ದೊಸ್ಸಾ ಖಲೀಫಾ ಮತ್ತು ಎಂಜಿಗ್ವೆ ಇಜಿಕೆ ಎಂದು ಗುರುತಿಸಲಾಗಿದೆ.
ನೈಜೀರಿಯಾ ಮೂಲದವರಾಗಿರುವ ಮೂವರು ಆರೋಪಿಗಳಿಂದ ಪೊಲೀಸರು ಪ್ರತಿಷ್ಠಿತರ ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕೊಕೈನ್ ಹಾಗೂ MDMA ಹೈ-ಫೈ ಡ್ರಗ್ಸ್ಗಳನ್ನ ಜಪ್ತಿ ಮಾಡಿದ್ದಾರೆ. ಆರೋಪಿಗಳ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದರು ಎಂದುತಿಳಿದುಬಂದಿದೆ.

Published On - 2:52 pm, Fri, 4 September 20