ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್​ ಹಿನ್ನೆಲೆ ಏನು ಗೊತ್ತಾ? ಈತನಿಗಿದೆ ಹೈಲೆವೆಲ್ ಕಾಂಟ್ಯಾಕ್ಟ್

  • Publish Date - 9:11 am, Fri, 4 September 20
ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್​ ಹಿನ್ನೆಲೆ ಏನು ಗೊತ್ತಾ? ಈತನಿಗಿದೆ ಹೈಲೆವೆಲ್ ಕಾಂಟ್ಯಾಕ್ಟ್

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ವಶದಲ್ಲಿರುವ ರವಿಶಂಕರ್‌ಗೆ ಬಗ್ಗೆ ಕೆಲ ಮಾಹಿತಿಗಳು ಬಹಿರಂಗಗೊಂಡಿವೆ. ರವಿಶಂಕರ್‌ಗೆ ಹೈಲೆವೆಲ್ ಕಾಂಟ್ಯಾಕ್ಟ್ ಇವೆಯಂತೆ. ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳ ಜತೆ ಲಿಂಕ್ ಇದೆ ಎಂಬ ಮಾಹಿತಿ ಸಿಕ್ಕಿದೆ.

ರವಿಶಂಕರ್‌ ಆರ್‌ಟಿಒ ಕಚೇರಿಯಲ್ಲಿ ಕೆಲಸದ ವೇಳೆ ಪ್ರಭಾವಿಗಳ ಸಂಪರ್ಕ ಬೆಳೆಸಿದ್ದನು. ಪ್ರಭಾವಿಗಳಿಗೆ ಬೇಕಾದ ನೋಂದಣಿ ಸಂಖ್ಯೆಗಳನ್ನ ಕೊಡಿಸ್ತಿದ್ದ. ಸಂಖ್ಯಾಶಾಸ್ತ್ರದ ಪ್ರಕಾರ ಕಾರುಗಳಿಗೆ ನಂಬರ್‌ ಕೊಡಿಸುತ್ತಿದ್ದ. ಇದೇ ರೀತಿ ಹಲವು ಗಣ್ಯರ ಜತೆ ಕಾಂಟ್ಯಾಕ್ಟ್ ಬೆಳೆಸಿಕೊಂಡಿದ್ದ. ಜೊತೆಗೆ ರವಿಶಂಕರ್ ಆಪ್ತ ಸಂಬಂಧಿಯೊಬ್ಬರು ಮಾಜಿ ಎಂಎಲ್‌ಸಿ. ಉತ್ತರ ಕರ್ನಾಟಕ ಮೂಲದ ರಾಜಕಾರಣಿಯಾಗಿದ್ದಾರೆ. ರವಿಶಂಕರ್​ ಚಿಕ್ಕಮ್ಮಗೂ ಹೈಲೆವೆಲ್​ ಕಾಂಟ್ಯಾಕ್ಟ್​ ಇತ್ತು.

ರವಿಶಂಕರ್​ ತಂದೆ ಸಾವಿನ ಬಳಿಕ ಅವರ ಚಿಕ್ಕಮ್ಮ ಕೆಲಸ ಕೊಡಿಸಿದ್ದರು. ಅವರಿಂದಲೇ ಹೈಲೆವೆಲ್​ ಕಾಂಟ್ಯಾಕ್ಟ್​ ಎಸ್ಟಾಬ್ಲಿಷ್​ ಆಗಿತ್ತು. ಆರೋಪಿ ರವಿಶಂಕರ್ ಚಿಕ್ಕಮ್ಮಗೆ ಮುಂಬೈ, ಕನ್ನಡ ಚಿತ್ರರಂಗದ ಹಲವರು ಚಿರಪರಿಚಿತರಾಗಿದ್ರು. ಇದರಿಂದಲೇ ರವಿಶಂಕರ್​ ಚಿತ್ರರಂಗದ ನಂಟು ಬೆಳೆಸಿದ್ದ. ಹಲವು ವರ್ಷಗಳಿಂದ RTO ಕಚೇರಿಯ ನಂಬರಿಂಗ್​ ಸೆಕ್ಷನ್​ನಲ್ಲಿ ಕೆಲಸ ಮಾಡ್ತಿದ್ದ. ಆಟೋದಲ್ಲಿ ಆಫೀಸ್​ಗೆ ಬರುವ ರವಿಶಂಕರ್ ಕೆಲಸ ಮುಗಿದ ಬಳಿಕ ಐಷಾರಾಮಿ​ ಕಾರಿನಲ್ಲಿ ಓಡಾಡುತ್ತಿದ್ದ.

Click on your DTH Provider to Add TV9 Kannada