ಐಷಾರಾಮಿ ಹೋಟೆಲ್ owner ನಿಶೆಯಲ್ಲಿ drug ಪೆಡ್ಲರ್! ಅಂದು ತಪ್ಪಿಸ್ಕೊಂಡ.. ಇಂದು ಸಿಕ್ಕಿಬಿದ್ದ
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿರುವ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ CCB ಇಂದು ಡ್ರಗ್ ಪೆಡ್ಲರ್ ಕಾರ್ತಿಕ್ ರಾಜ್ ಎಂಬಾತನನ್ನು ಬಂಧಿಸಿದೆ. ಅಂದ ಹಾಗೆ, Drug peddler ಕಾರ್ತಿಕ್ ರಾಜ್ ನಟಿ ರಾಗಿಣಿ ಆಪ್ತ ಎಂದು ಹೇಳಲಾಗುವ ರವಿಶಂಕರ್ನ ಸಂಬಂಧಿ. ಕಾರ್ತಿಕ್ ರಾಜ್ ಸದ್ಯ CCB ವಶದಲ್ಲಿರುವ ರವಿಶಂಕರ್ನ ಮಾಜಿ ಪತ್ನಿಯ ತಂಗಿಯ ಗೆಳೆಯ ಎಂದು ತಿಳಿದುಬಂದಿದೆ. ಈ ಹಿಂದೆ CCB ಪೊಲೀಸರು ಪ್ರತೀಕ್ ಶೆಟ್ಟಿ ಎಂಬ ಡ್ರಗ್ ಪೆಡ್ಲರ್ನನ್ನು ಬಂಧಿಸಿದ್ದರು. ಪ್ರತೀಕ್ ಮತ್ತು ಕಾರ್ತಿಕ್ ರಾಜ್ […]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿರುವ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ CCB ಇಂದು ಡ್ರಗ್ ಪೆಡ್ಲರ್ ಕಾರ್ತಿಕ್ ರಾಜ್ ಎಂಬಾತನನ್ನು ಬಂಧಿಸಿದೆ. ಅಂದ ಹಾಗೆ, Drug peddler ಕಾರ್ತಿಕ್ ರಾಜ್ ನಟಿ ರಾಗಿಣಿ ಆಪ್ತ ಎಂದು ಹೇಳಲಾಗುವ ರವಿಶಂಕರ್ನ ಸಂಬಂಧಿ. ಕಾರ್ತಿಕ್ ರಾಜ್ ಸದ್ಯ CCB ವಶದಲ್ಲಿರುವ ರವಿಶಂಕರ್ನ ಮಾಜಿ ಪತ್ನಿಯ ತಂಗಿಯ ಗೆಳೆಯ ಎಂದು ತಿಳಿದುಬಂದಿದೆ. ಈ ಹಿಂದೆ CCB ಪೊಲೀಸರು ಪ್ರತೀಕ್ ಶೆಟ್ಟಿ ಎಂಬ ಡ್ರಗ್ ಪೆಡ್ಲರ್ನನ್ನು ಬಂಧಿಸಿದ್ದರು. ಪ್ರತೀಕ್ ಮತ್ತು ಕಾರ್ತಿಕ್ ರಾಜ್ ಸೇರಿ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಆದರೆ ಆಗ, ಕಾರ್ತಿಕ್ ರಾಜ್ CCB ಪೊಲೀಸರ ಕೈಗೆ ಸಿಕ್ಕಿಬಿದ್ದಿರಲಿಲ್ಲ. ಸದ್ಯ ಕಾರ್ತಿಕ್ ರಾಜ್ ಬಳಿ ವಿಚಾರಣೆ ವೇಳೆ ಮಹತ್ವದ ಮಾಹಿತಿ ಸಂಗ್ರಹಿಸ್ತಿರುವ ಸಿಸಿಬಿ ಪೊಲೀಸರು ಈತ ರವಿಶಂಕರ್ ಹೇಳಿದಂತೆ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ನೀಡಿದ್ದಾರೆ. ಯಾರು ಈ ಕಾರ್ತಿಕ್ ರಾಜ್? ಕಾರ್ತಿಕ್ ರಾಜ್ ಮೂಲತಃ ಹೋಟೆಲ್ ಉದ್ಯಮಿ. ಕಾರ್ತಿಕ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ CCB ಅಧಿಕಾರಿಗಳಿಗೆ ಈತ ಕೋರಮಂಗಲದಲ್ಲಿರುವ ಐಷಾರಾಮಿ ಹೋಟೆಲ್ ಒಂದನ್ನು ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಕಾರ್ತಿಕ್ ರಾಜ್ ನಿವಾಸ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿದ್ದು ಈತನ ತಂದೆ ವೃತ್ತಿಯಲ್ಲಿ ವೈದ್ಯರಾಗಿರುವ ಮಾಹಿತಿಯೂ ದೊರೆತಿದೆ. ಹಲವು ಪಾರ್ಟಿಗಳಲ್ಲಿ ಭಾಗಿಯಾಗಿದ್ದ ಕಾರ್ತಿಕ್ ರಾಜ್ ಈ ಮೂಲಕ ಹಲವು ಸ್ಟಾರ್ ನಟಿಯರ ಸಂಪರ್ಕ ಬೆಳೆಸಿದ್ದ ಎಂದು CCB ಮಾಹಿತಿ ಕಲೆಹಾಕಿದೆ.
2018ರಿಂದಲೇ ನಡೆದಿತ್ತಾ ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ? ಈ ಪ್ರಕರಣದಿಂದ ಮತ್ತೊಂದು ರೋಚಕ ವಿಷಯ ಬೆಳಕಿಗೆ ಬಂದಿದೆ. ಅದೇನೆಂದರೆ, 2018ರಿಂದಲೇ ಸ್ಯಾಂಡಲ್ವುಡ್ಗೆ ಡ್ರಗ್ಸ್ ಮಾಫಿಯಾ ನಂಟಿತ್ತ ಎಂಬುದು. ಹೌದು, 2018ರ ನವೆಂಬರ್ 3ರಂದು CCB ಅಧಿಕಾರಿಗಳು 1.5 ಕೆಜಿ ಕೊಕೇನ್ ವಶ ಪಡಿಸಿಕೊಂಡಿದ್ದರು. ಒಂದು ಗ್ರಾಂ ಕೊಕೇನ್ 8 ಸಾವಿರಕ್ಕೆ ಮಾರಾಟವಾಗುತ್ತಿರುವ ಬಗ್ಗೆ ಅಂದಿನ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಸುದ್ದಿಗೋಷ್ಠಿ ಮಾಡಿ ಮಾಹಿತಿ ನೀಡಿದ್ದರು.
ಈ ಕೊಕೇನ್ ಅನ್ನು ಬೆಂಗಳೂರಿನಲ್ಲಿ ಪಾರ್ಟಿ ಆಯೋಜನೆ ಮಾಡಿ ಮಾರಲಾಗುತ್ತಿತ್ತು ಅಂತಾ ಸಹ ತಿಳಿದುಬಂದಿತ್ತು. ಆಗ ಸಾಫ್ಟ್ವೇರ್ ಕಂಪನಿಯ ಉದ್ಯೋಗಿಯಾಗಿದ್ದ ಪ್ರತೀಕ್ ಶೆಟ್ಟಿ ಹಾಗೂ ಕೆಲವು ನೈಜೀರಿಯಾ ಪ್ರಜೆಗಳು ಸಹ ಅರೆಸ್ಟ್ ಆಗಿದ್ದರು. ಅಲೋಕ್ ಕುಮಾರ್ ಅಂದಿನ CCB ಮುಖ್ಯಸ್ಥರಾಗಿದ್ದರು. ಆ ವೇಳೆಯಲ್ಲಿ ಸಹ ಸೆಲೆಬ್ರಿಟಿಗಳ ನಂಟಿರುವುದು ಕೇಳಿಬಂದಿತ್ತು.
ಆದರೆ, ಪ್ರತೀಕ್ ಅಂಡ್ ಟೀಂ ಅರೆಸ್ಟ್ ಆದ ಬಳಿಕ ಆ ಸೆಲೆಬ್ರಿಟಿಗಳಿಗೆ CCB ಅಧಿಕಾರಿಗಳು ಕರೆದು ವಾರ್ನಿಂಗ್ ಮಾಡಿದ್ದರಂತೆ. ನೀವೆಲ್ಲಾ ಡ್ರಗ್ಸ್ ಜಾಲದ ಕಡೆ ವಾಲುತ್ತಿದ್ದೀರಾ. ಒಳ್ಳೆಯ ಜೀವನದ ಕಡೆ ಗಮನ ಕೊಡುವಂತೆ ಅವರಿಗೆಲ್ಲಾ ವಾರ್ನ್ ಮಾಡಲಾಗಿತ್ತು. ಇದಾದ, ನಂತರ ಸೆಲೆಬ್ರಿಟಿಗಳ ಹೆಸರು ಡ್ರಗ್ಸ್ ಕೇಸ್ನಲ್ಲಿ ಕೇಳಿ ಬಂದಿರಲಿಲ್ಲ. ಇದೀಗ, CCB ಅಧಿಕಾರಿಗಳು ಈ ಹಳೇ ಪ್ರಕರಣದ ಕೇಸ್ ಫೈಲ್ ಮತ್ತೆ ಹೊರತೆಗೆದು ವಿಚಾರಣೆ ನಡೆಸಲು ಮುಂದಾಗಿದ್ದಾರಂತೆ.