Toolkit: ಪರಿಸರ ಹೋರಾಟಗಾರ್ತಿ ದಿಶಾ ರವಿಗೆ 3 ದಿನ ನ್ಯಾಯಾಂಗ ಬಂಧನ

|

Updated on: Feb 19, 2021 | 11:34 PM

ಮುಕುಲ್ ಮತ್ತು ಜೇಕಬ್ ಅವರನ್ನು ಫೆಬ್ರುವರಿ 22ರಂದು ತನಿಖಾ ಏಜೆನ್ಸಿಯೆದುರು ಹಾಜಾರಾಗುವಂತೆ ಸೂಚಿಸಲಾಗಿದೆ ಎಂದು ತನಿಖಾ ಏಜೆನ್ಸಿಯು ಕೋರ್ಟಿನ ಗಮನಕ್ಕೆ ತಂದಿತು. ಆರೋಪಿಗಳ ಪರ ವಕೀಲರು, ಪೊಲೀಸರು ನ್ಯಾಯಾಲಯಕ್ಕೆ ಮಾಡಿದ ಮನವಿಯನ್ನು ವಿರೋಧಿಸಿ ದಿಶಾ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

Toolkit: ಪರಿಸರ ಹೋರಾಟಗಾರ್ತಿ ದಿಶಾ ರವಿಗೆ 3 ದಿನ ನ್ಯಾಯಾಂಗ ಬಂಧನ
ದಿಶಾ ರವಿ
Follow us on

ನವದೆಹಲಿ: ತಿಂಗಳುಗಳಿಂದ ನಡೆಯುತ್ತಿರುವ ರೈತರ ಮಷ್ಕರಕ್ಕೆ ಸಂಬಂಧಿಸಿದಂತೆ ಟೂಲ್​ಕಿಟ್​ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿರುವ ಅರೋಪ ಎದುರಿಸುತ್ತಿರುವ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ದೆಹಲಿಯ ನ್ಯಾಯಾಲಯವೊಂದು ಮೂರು ದಿನಗಳ ಅವಧಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. 21 ವರ್ಷ ವಯಸ್ಸಿನ ದಿಶಾ ಅವರ 5-ದಿನಗಳ ಪೋಲಿಸ್ ಕಸ್ಟಡಿ ಶುಕ್ರವಾರದಂದು ಕೊನೆಗೊಂಡಿದ್ದರಿಂದ ದೆಹಲಿ ಪೊಲೀಸರು ಆಕೆಯನ್ನು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಧೀಶ ಆಕಾಶ್ ಜೈನ್ ಅವರ ಎದುರು ಹಾಜರುಪಡಿಸಿದ್ದರು.

ಸದ್ಯಕ್ಕೆ ದಿಶಾ ಅವರ ವಿಚಾರಣೆಯ ಅವಶ್ಯಕತೆಯಿಲ್ಲವೆಂದು ನ್ಯಾಯಾಲಯಕ್ಕೆ ತಿಳಿಸಿದ ಪೊಲೀಸರು ತನಿಖೆ ನಡೆಸುತ್ತಿರುವ ಏಜೆನ್ಸಿಗೆ ಅಗತ್ಯಬಿದ್ದರೆ, ಸಹ-ಆರೋಪಿಗಳಾಗಿರುವ ಶಂತನು ಮುಕುಲ್ ಮತ್ತು ನಿಕಿತಾ ಜೇಕಬ್ ವಿವಾರಣೆಗೆ ಹಾಜರಾದ ನಂತರ ದಿಶಾ ಅವರನ್ನು ಸಹ ವಿಚಾರಣೆಯ ಭಾಗವನ್ನಾಗಿ ಮಾಡಬಹುದೆಂದು ಹೇಳಿದರು.

ಕಳೆದ ವಿಚಾರಣೆಯಲ್ಲಿ ದಿಶಾ ಅವರಯ ಹಾರಿಕೆಯ ಉತ್ತರಗಳನ್ನು ನೀಡಿದರಲ್ಲದೆ, ದೋಷವನ್ನೆಲ್ಲ ಸಹ-ಆರೋಪಿಗಳ ತಲೆಗೆ ಕಟ್ಟಲು ಪ್ರಯತ್ನಿಸಿದರು ಎಂದು ಪೊಲೀಸರು ಕೋರ್ಟಿಗೆ ತಳಿಸಿದರು.

ಮುಕುಲ್ ಮತ್ತು ಜೇಕಬ್ ಅವರನ್ನು ಫೆಬ್ರುವರಿ 22ರಂದು ತನಿಖಾ ಏಜೆನ್ಸಿಯೆದುರು ಹಾಜಾರಾಗುವಂತೆ ಸೂಚಿಸಲಾಗಿದೆ ಎಂದು ತನಿಖಾ ಏಜೆನ್ಸಿಯು ಕೋರ್ಟಿನ ಗಮನಕ್ಕೆ ತಂದಿತು.

ಗ್ರೆಟಾ ಮತ್ತು ನಿಕಿತಾ

ಆರೋಪಿಗಳ ಪರ ವಕೀಲರು, ಪೊಲೀಸರು ನ್ಯಾಯಾಲಯಕ್ಕೆ ಮಾಡಿದ ಮನವಿಯನ್ನು ವಿರೋಧಿಸಿ ದಿಶಾ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ತಮ್ಮ ವಾದವನ್ನು ಮುಂದುವರಿಸಿ ಹೇಳಿದ ದಿಶಾ ಪರ ವಕೀಲರು, ಪ್ರಕರಣದ ಡೈರಿಯನ್ನು ಸೂಕ್ತವಾಗಿ ಮಾಡಿಲ್ಲದಿರುವುದರಿಂದ ಪೊಲೀಸರು ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆಯಿದೆ ಮತ್ತು ದಿಶಾ ಅವರನ್ನು ನ್ಯಾಯಾಂಗ ಇಲ್ಲವೇ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ಯಾವುದೇ ಆಧಾರವಿಲ್ಲ; ಹಾಗಾಗಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಹೇಳಿದರು.

ಆರೋಪಿಯು ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಸದರಿ ಅರ್ಜಿಯ ವಿಚಾರಣೆಯು ಶನಿವಾರದಂದು ನಡೆಯಲಿದೆ. ಭಾರತ ಸರ್ಕಾರದ ವಿರುದ್ಧ ಭಾರಿ ಪಿತೂರಿ ನಡೆಸಿರುವ ಆರೋಪದ ಹಿನ್ನೆಲೆ ಮತ್ತು ದಿಶಾ ಅವರ ಖಲಿಸ್ತಾನ ಚಳವಳಿಯ ಜೊತೆ ಆರೋಪಿತ ಪಾತ್ರದ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಕಳೆದ ರವಿವಾರದಂದು ಅಭಿಪ್ರಾಯಪಟ್ಟಿದ್ದ ನ್ಯಾಯಾಲಯವು ಅವರನ್ನು 5-ದಿನ ಅವಧಿಗೆ ಪೊಲೀಸ್ ವಶಕ್ಕೆ ಒಪ್ಪಿಸಿತ್ತು.

ದೆಹಲಿ ಪೊಲೀಸ್​ನ ಸೈಬರ್ ವಿಭಾಗದ ಅಧಿಕಾರಿಗಳು ಕಳೆದ ಶನಿವಾರದಂದು ದಿಶಾ ಅವರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಕೋರ್ಟೊಂದರ ಎದುರು ಹಾಜರುಪಡಿಸಿ 7 ದಿನಗಳ ಕಸ್ಟಡಿಯನ್ನು ಕೇಳಿದ್ದರು.

ಫೆಬ್ರುವರಿ 3ರಂದು ದಿಶಾ ಟೂಲ್​ಕಿಟ್​ ಅನ್ನು ಎಡಿಟ್ ಮಾಡಿದ್ದರು ಮತ್ತು ಈ ಪ್ರಕರಣದಲ್ಲಿ ಹಲವಾರು ಜನ ಭಾಗಿಯಾಗಿದ್ದಾರೆ ಎಂದು ಆಕೆಯ ಕಸ್ಟಡಿಯನ್ನು ಕೇಳುವಾಗ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಯಾವುದೇ ಒಂದು ವಿಷಯವನ್ನು ವಿವವರಿಸುವುದಕ್ಕೆ ಸಿದ್ಧಪಡಿಸಿದ ದಾಖಲೆಯನ್ನು ಟೂಲ್​ಕಿಟ್​ ಎನ್ನಲಾಗುತ್ತದೆ. ಅದರಲ್ಲಿರುವ ವಿಷಯವನ್ನು ಹೇಗೆ ಎದುರಿಸುವುದು ಎನ್ನುವ ಮಾಹಿತಿ ಟೂಲ್​ಕಿಟ್​ನಲ್ಲಿರುತ್ತದೆ. ಮನವಿಗಳು, ಜಾರಿಯಲ್ಲಿರುವ ಮುಷ್ಕರಗಳ ಬಗ್ಗೆ ವಿವರಣೆ, ಮತ್ತು ಸಾಮೂಹಿಕ ಚಳಿವಳಿ ನಡೆಸುವ ಕುರಿತು ವಿವರಗಳು ಸಹ ಅದರಲ್ಲಿರುತ್ತವೆ.

ರೈತರ ಮುಷ್ಕರ

ಇದಕ್ಕೆ ಮೊದಲು, ದೆಹಲಿ ಪೊಲೀಸ್, ಸ್ವೀಡನ್ನಿನ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್​ಬರ್ಗ್ ಅವರು ಶೇರ್ ಮಾಡಿದ ಟೂಲ್​ಕಿಟ್​ ಸೃಷ್ಟಿಸದವರ ಈಮೇಲ್ ಐಡಿ, ಯೂಆರ್​ಎಲ್ ಮತ್ತು ಅವರೆಲ್ಲ ಸಂಬಂಧವಿಟ್ಟುಕೊಂಡಿರುವ ಕೆಲ ಸಾಮಾಜಿಕ ಜಾಲತಾಣಗಳ ಅಡ್ರೆಸ್ ಒದಗಿಸುವಂತೆ ಗೂಗಲ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳನ್ನು ಕೋರಿತ್ತು. ರೈತರ ಚಳಿವಳಿಯ ಬಗ್ಗೆ ಟ್ವಿಟ್ಟರ್​ನಲ್ಲಿ ಸಕ್ರಿಯರಾಗಿದ್ದವರ ಬಗ್ಗೆಯೂ ಮಾಹಿತಿಯನ್ನು ಕೇಳಲಾಗಿತ್ತು.

ದೆಹಲಿ ಪೊಲೀಸ್​ನ ಸೈಬರ್ ಸೆಲ್, ಭಾರತ ಸರ್ಕಾರದ ವಿರುದ್ಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಯುದ್ಧ ಸಾರಿರುವ ಖಲಿಸ್ತಾನ್-ಪರ ಟೂಲ್​ಕಿಟ್​ ಸೃಷ್ಟಿಸಿದವರ ವಿರುದ್ಧ ಎಫ್​ಐಆರ್ ಒಂದನ್ನು ದಾಖಲಿಸಿತ್ತು.

ಇಂಡಿಯನ್ ಪೀನಲ್ ಕೋಡ್​ನ ಹಲವಾರು ಸೆಕ್ಷನ್​ಗಳ ಅನ್ವಯ ಅನಾಮಧೇಯು ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಕುತಂತ್ರ, ರಾಜದ್ರೋಹ ಮತ್ತು ಇತರ ಆರೋಪಗಳನ್ನು ಮಾಡಲಾಗಿದೆ.

ಭಾರತ ಸರ್ಕಾರದ ವಿರುದ್ಧ ವೈಷಮ್ಯ, ಮತ್ತು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಪಂಗಡಗಳ ನಡುವೆ ಅಶಾಂತಿ ಹಬ್ಬಿಸಲು ಟೂಲ್​ಕಿಟ್​ ಅನ್ನು ಬಳಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದರು.

ಇದನ್ನೂ ಓದಿToolkit Case: ದಿಶಾ ರವಿ ಪ್ರಕರಣದ ಖಾಸಗಿ ಚಾಟ್ ಸೋರಿಕೆ ಮಾಡದಂತೆ ಮಾಧ್ಯಮಗಳಿಗೆ ದೆಹಲಿ ಹೈಕೋರ್ಟ್ ನೋಟೀಸ್