ದೃಶ್ಯಂ ಸಿನಿಮಾ ನೋಡಿ ದರೋಡೆಗೆ ಪ್ಲ್ಯಾನ್.. ಇದು ನಿಮ್ಮ ಊಹೆಗೂ ನಿಲುಕದಂಥ ‘ಶೂ’ ಮ್ಯಾನ್ ಥ್ರಿಲ್ಲರ್!

ಇದು ನಿಮ್ಮ ಊಹೆಗೂ ನಿಲುಕದಂಥ ಥ್ರಿಲ್ಲರ್ ಸ್ಟೋರಿ. ಸಸ್ಪೆನ್ಸ್ ಸಿನಿಮಾಗಳನ್ನೂ ಮೀರಿಸುವಂಥ ರಣರೋಚಕ ಕಥೆ. ಹೌದು, ನಿಮ್ಮ ಸುದ್ದಿವಾಹಿನಿ ಟಿವಿ9 ನಿಮಗೋಸ್ಕರ ಬಿಚ್ಚಿಟ್ಟಿದೆ ಸಿಲಿಕಾನ್​ ಸಿಟಿಯ ಅತಿದೊಡ್ಡ ಎಕ್ಸ್ ಕ್ಲೂಸಿವ್ ‘ಕ್ರೈಂ’ ಸ್ಟೋರಿ!

  • TV9 Web Team
  • Published On - 17:56 PM, 20 Feb 2021
ದೃಶ್ಯಂ ಸಿನಿಮಾ ನೋಡಿ ದರೋಡೆಗೆ ಪ್ಲ್ಯಾನ್.. ಇದು ನಿಮ್ಮ ಊಹೆಗೂ ನಿಲುಕದಂಥ ‘ಶೂ’ ಮ್ಯಾನ್ ಥ್ರಿಲ್ಲರ್!
ದೃಶ್ಯಂ ಸಿನಿಮಾ ನೋಡಿ ದರೋಡೆಗೆ ಪ್ಲ್ಯಾನ್ ಇದು ನಿಮ್ಮ ಊಹೆಗೂ ನಿಲುಕದಂಥ ‘ಶೂ’ ಮ್ಯಾನ್ ಥ್ರಿಲ್ಲರ್ ಸ್ಟೋರಿ!

ಬೆಂಗಳೂರು: ಇದು ನಿಮ್ಮ ಊಹೆಗೂ ನಿಲುಕದಂಥ ಥ್ರಿಲ್ಲರ್ ಸ್ಟೋರಿ. ಸಸ್ಪೆನ್ಸ್ ಸಿನಿಮಾಗಳನ್ನೂ ಮೀರಿಸುವಂಥ ರಣರೋಚಕ ಕಥೆ. ಹೌದು, ನಿಮ್ಮ ಸುದ್ದಿವಾಹಿನಿ ಟಿವಿ9 ನಿಮಗೋಸ್ಕರ ಬಿಚ್ಚಿಟ್ಟಿದೆ ಸಿಲಿಕಾನ್​ ಸಿಟಿಯ ಅತಿದೊಡ್ಡ ಎಕ್ಸ್ ಕ್ಲೂಸಿವ್ ‘ಕ್ರೈಂ’ ಸ್ಟೋರಿ!

ನಕಲಿ ಕೀ ಬಳಸಿ.. ಕೋಟಿ ಕೋಟಿ ದುಡ್ಡು, ಕೈಗೆ ಸಿಕ್ಕಷ್ಟು ಆಭರಣ ಎಗರಿಸಿದ್ರು!
ಅಂದ ಹಾಗೆ, ಈ ರೋಚಕ ರಿಯಲ್​ ಕ್ರೈಂ ಕಥೆಯ ಮುಖ್ಯ ಪಾತ್ರಧಾರಿಗಳೇ ಈ ಇಬ್ಬರು ಖತರ್ನಾಕ್​ ಚೋರರು; ಸ್ಟ್ಮೊಹಮ್ಮದ್ ಶಫೀವುಲ್ಲಾ ಮತ್ತು ನಜೀಮ್ ಶರೀಫ್.

BNG PULIKESHINAGAR ROBBERY ARREST 13

ಸ್ಟ್ಮೊಹಮ್ಮದ್ ಶಫೀವುಲ್ಲಾ

BNG PULIKESHINAGAR ROBBERY ARREST 14

ನಜೀಮ್ ಶರೀಫ್

ಅಂದ ಹಾಗೆ, ಈ ಇಬ್ಬರು ಖದೀಮರು ನಕಲಿ ಕೀ ಬಳಸಿ ಮನೆಯೊಂದನ್ನ ದೋಚಿದ್ದದ್ರು. ಕೋಟಿ ಕೋಟಿ ದುಡ್ಡು ಮತ್ತು ಕೈಗೆ ಸಿಕ್ಕಷ್ಟು ಆಭರಣ ಎಗರಿಸಿದ್ರು. ಬೈ ದಿ ಬೈ, ಈ ಪ್ರಕರಣದಲ್ಲಿ ಇನ್ವಾಲ್ವ್​ ಆಗಿದ್ದ ಆಸಾಮಿಗಳು ಒಂದೂ ಕುರುಹು ಸಿಗದಂತೆ ತಮ್ಮ ಕೈಚಳಕ ತೋರಿ ಪರಾರಿಯಾಗಿದ್ದರು. ಆದರೂ, ಈ ಕಿರಾತಕರು ಕೊನೆಗೂ ಖಾಕಿ ಬಲೆಗೆ ಸಿಕ್ಕಿಬಿದ್ದಿದ್ದೇ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್​!

ಹೌದು, ಆ 1 ಹಿಂಟ್​ನಿಂದಲೇ ಸಿಲಿಕಾನ್​ ಸಿಟಿ ಖಾಕಿ ಪಡೆ ಚೋರರನ್ನ ಪತ್ತೆಹಚ್ಚಿ ಲಾಕ್ ಮಾಡಿದರು. ಖತರ್ನಾಕ್ ಕಳ್ಳರನ್ನ ಖಾಕಿ ಬೇಟೆಯಾಡಿದ್ದೇ ರೋಚಕ ಸ್ಟೋರಿ.

ಮನೆ ದೋಚಲು ಕಿಲಾಡಿಗಳು ಮಾಡಿದ ಪ್ಲ್ಯಾನೇ ಭಯಾನಕ!
ಅಂದ ಹಾಗೆ, ದರೋಡೆಗೂ ಮುನ್ನ ಈ ಕಿಲಾಡಿಗಳು ಮಾಡಿದ ಪ್ಲ್ಯಾನೇ ಭಯಾನಕ! ಕೃತ್ಯ ಎಸಗಲು 10ಕ್ಕೂ ಹೆಚ್ಚು ಆಟೋ ಬದಲಿಸಲು ಸ್ಕೆಚ್​ ಹಾಕಿದ್ದ ಕಳ್ಳರು ಆಟೋದಲ್ಲೇ ಬಂದು ಮನೆ ದೋಚಿ ಪರಾರಿಯಾಗಲು ಪ್ಲ್ಯಾನ್​ ಮಾಡಿದ್ದರು.

BNG PULIKESHINAGAR ROBBERY ARREST 16

ಕೃತ್ಯಕ್ಕೆ ಬಳಸಿದ ಆಟೋ

ಪುಲೆಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಕಣ್ಣಿಗೆ ಬಿದ್ದ ಆ ಒಂದು ಮನೆಯನ್ನು ದೋಚಲು 2 ತಿಂಗಳು ಪ್ಲ್ಯಾನ್ ಮಾಡಿದ್ರು. ಅಂದ ಹಾಗೆ, ಈ ಐನಾತಿಗಳಿಗೆ ಐಡಿಯಾ ಹೊಳೆದಿದ್ದು ದೃಶ್ಯಂ ಸಿನಿಮಾ ನೋಡಿ. ಯೆಸ್​, ದೃಶ್ಯಂ ಸಿನಿಮಾದಿಂದ ಪ್ರೇರಣೆ ಪಡೆದ ಕಳ್ಳರು ಕೊನೆಗೂ ದರೋಡೆಗೆ ಸ್ಕೆಚ್​​ ಹಾಕಿ ಜನವರಿ 14ರಂದು ಮನೆಗಳ್ಳತನ ಮಾಡಿಯೇ ಬಿಟ್ಟರು. ಮನೆಯಲ್ಲಿದ್ದ ಕೋಟಿ ಕೋಟಿ ಹಣ ಹಾಗೂ ಚಿನ್ನಾಭರಣ ಸೇರಿ ಯಾವುದನ್ನು ಬಿಡದೆ ದೋಚಿ ಆಟೋದಲ್ಲಿ ಪರಾರಿಯಾಗಿದ್ದರು.

BNG PULIKESHINAGAR ROBBERY ARREST 10

ಹಣ, ಚಿನ್ನಾಭರಣ ದೋಚಿದ ಕಳ್ಳರು

ಕೊರೊನಾ ಕಾಲದಲ್ಲಿ ಮುಂಜಾಗ್ರತಾ ಕ್ರಮವಾಗಿಯೋ ಏನೋ ಅಥವಾ ತಮ್ಮ ಚಹರೆ ಯಾರಿಗೂ ಕಾಣಿಸಬಾರದಕ್ಕೋ ಏನೋ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಧರಿಸಿ ಕಳ್ಳತನ ಮಾಡಿದ್ರು. ಇಷ್ಟೆಲ್ಲಾ ಕೇರ್​ ತಗೊಂಡು ಕಳ್ಳತನ ಮಾಡಿದ್ದ ಕಿಲಾಡಿಗಳು ಇನ್ನು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್​ ಆಗಲು ಪ್ಲ್ಯಾನ್​ ಮಾಡಿರಲ್ವಾ? ಅಫ್​ ಕೋರ್ಸ್​, ಖಂಡಿತ ಮಾಡಿದ್ರು.

BNG PULIKESHINAGAR ROBBERY ARREST 8

ಮನೆಯಲ್ಲಿ ಖಾರದ ಪುಡಿ ಎರಚಿ ಎಸ್ಕೇಪ್​ ಆಗಿದ್ದ ಖದೀಮರು

ಯೆಸ್​, ಈ ಖತರ್ನಾಕ್​ ಖದೀಮರು ಕಳ್ಳತನ ಮಾಡಿದ ಸ್ಥಳದಲ್ಲಿ ಖಾರದ ಪುಡಿ ಎರಚಿ ಎಸ್ಕೇಪ್​ ಆಗಿದ್ದರು. ಇದಕ್ಕೆ ಕಾರಣ, ಪೊಲೀಸ್​ ಶ್ವಾನಗಳ ದಿಕ್ಕುತಪ್ಪಿಸುವುದು. ಪೊಲೀಸ್ ಶ್ವಾನಗಳಿಗೆ ತಮ್ಮ ವಾಸನೆ ಪತ್ತೆಯಾಗಬಾರದೆಂದು ಕಿಲಾಡಿಗಳು ಈ ಪ್ಲ್ಯಾನ್​ ಮಾಡಿದ್ದರು.

ಕಳ್ಳರ ಎಸ್ಕೇಪ್​ ಪ್ಲ್ಯಾನ್​ ಇಲ್ಲಿದೆ ನೋಡಿ!
ಕಳ್ಳತನ ಮಾಡಿದ ಬಳಿಕ ಮತ್ತೆ ಆಟೋದಲ್ಲಿ ಹೋಗಿದ್ದ ಚೋರರು ಸುಮಾರು 6 ಕಿ.ಮೀ. ಇದ್ದ ಪ್ರಯಾಣವನ್ನು ಬರೋಬ್ಬರಿ 18 ಕಿ.ಮೀ. ಬೆಳೆಸಿ ಸುತ್ತಾಡಿದ್ದರು. ಈ ನಡುವೆ, ದಾರಿ ಮಧ್ಯದಲ್ಲೆ ಆರೋಪಿಗಳು ಬಟ್ಟೆ ಬದಲಾಯಿಸಿ ಮುಂದೆ ಸಾಗಿದ್ದರು. ತಮ್ಮ ವೇಷ ಬದಲಿಸುವ ಜೊತೆಗೆ ಇಷ್ಟೆಲ್ಲಾ ಪ್ರಿಕಾಶನ್​ ತೆಗೆದುಕೊಂಡ ಐನಾತಿ ಕಿಲಾಡಿಗಳು ಮಾಡಿದ್ದು ಮಾತ್ರ ಒಂದು ಸಣ್ಣ ತಪ್ಪು. ಆ ಒಂದು ಚಿಕ್ಕ ಎಡವಟ್ಟು ಇವರ ಕೈಗೆ ಕೋಳ ಬೀಳುವಂತೆ ಮಾಡಿತು.

BNG PULIKESHINAGAR ROBBERY ARREST 9

6 ಕಿ.ಮೀ. ಇದ್ದ ಪ್ರಯಾಣವನ್ನ ಬರೋಬ್ಬರಿ 18 ಕಿ.ಮೀ. ಬೆಳೆಸಿ ಸುತ್ತಾಡಿದ್ದರು

ಯೆಸ್​, ಖದೀಮರು ಡ್ರೆಸ್​ ಬದಲಾಯಿಸಿದರೂ ತೊಟ್ಟ ಶೂಗಳನ್ನ ಚೇಂಜ್​ ಮಾಡಿಕೊಳ್ಳಲಿಲ್ಲ. ಇದೊಂದೇ ಗುರುತಿನಿಂದ ಖಾಕಿ ಕೈಗೆ ತಗ್ಲಾಕ್ಕೊಂಡ ಈಗ ಕಂಬಿ ಎಣಿಸುತ್ತಿದ್ದಾರೆ.

BNG PULIKESHINAGAR ROBBERY ARREST 7

ಡ್ರೆಸ್​ ಬದಲಾಯಿಸಿದರೂ ತೊಟ್ಟ ಶೂಗಳನ್ನ ಚೇಂಜ್​ ಮಾಡಿಕೊಳ್ಳಲಿಲ್ಲ

ಕಳ್ಳರಿಗಾಗಿ 250 CCTV ದೃಶ್ಯ ಜಾಲಾಡಿದ್ದ ಪೊಲೀಸರು
ಇತ್ತ, ದೂರು ಸಿಕ್ಕ ಕೂಡಲೇ ಕಾರ್ಯಪ್ರವೃತ್ತರಾದ ಪುಲಿಕೇಶಿನಗರ ಪೊಲೀಸರು ಕಳ್ಳರಿಗಾಗಿ ಒಂದಲ್ಲ, ಎರಡಲ್ಲ ಸರಿಸುಮಾರು 250 CCTV ದೃಶ್ಯಾವಳಿಗಳನ್ನು ಜಾಲಾಡಿದ್ದರು. ಆಗ, ಆರೋಪಿಗಳ ಬೇಟೆಗಿಳಿದ ಖಾಕಿಗೆ ಸಿಕ್ಕಿದ್ದೇ ಅದೊಂದು ಗುರುತು.

ಶೂ ಗುರುತಿನಿಂದಲೇ ಕಳ್ಳರ ಬೇಟೆಯಾಡಿದ ಪೊಲೀಸರು ಅಂತೂ ಕೊನೆಗೆ ಸ್ಟ್ಮೊಹಮ್ಮದ್ ಶಫೀವುಲ್ಲಾ ಮತ್ತು ನಜೀಮ್ ಶರೀಫ್​ನನ್ನು ಅರೆಸ್ಟ್​ ಮಾಡಿದರು. ಸದ್ಯ, ಆರೋಪಿಗಳಿಂದ ಭಾರತ ಮತ್ತು ವಿದೇಶಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಸುಮಾರು, 1 ಕೋಟಿ ನಗದು ಮತ್ತು ಅಪಾರ ಪ್ರಮಾಣದ ಚಿನ್ನಾಭರಣವನ್ನು ಸಹ ಜಪ್ತಿ ಮಾಡಲಾಗಿದೆ.

BNG PULIKESHINAGAR ROBBERY ARREST 12

ಪ್ರಕರಣ ಭೇದಿಸಿದ ಖಾಕಿ ಪಡೆ

BNG PULIKESHINAGAR ROBBERY ARREST 11

ಆರೋಪಿಗಳು ಕದ್ದ ನಗದನ್ನು ವಶಪಡಿಸಿಕೊಂಡ ಪೊಲೀಸರು

BNG PULIKESHINAGAR ROBBERY ARREST 6

ಜಪ್ತಿ ಮಾಡಲಾದ ವಿದೇಶಿ ನೋಟುಗಳು

BNG PULIKESHINAGAR ROBBERY ARREST 5

ಜಪ್ತಿ ಮಾಡಲಾದ ನೋಟುಗಳು

BNG PULIKESHINAGAR ROBBERY ARREST 4

ವಶಕ್ಕೆ ಪಡೆದ ನೋಟುಗಳು

BNG PULIKESHINAGAR ROBBERY ARREST 3

ಜಪ್ತಿ ಮಾಡಲಾದ ಭಾರತದ ನೋಟುಗಳು

BNG PULIKESHINAGAR ROBBERY ARREST 2

ಜಪ್ತಿ ಮಾಡಲಾದ ನೋಟುಗಳನ್ನು ವೀಕ್ಷಿಸಿದ DCP ಶರಣಪ್ಪ

BNG PULIKESHINAGAR ROBBERY ARREST 1

ಪುಲಿಕೇಶಿನಗರ ಠಾಣೆ ಪೊಲೀಸರನ್ನು ಅಭಿನಂದಿಸಿದ DCP ಶರಣಪ್ಪ