ನಕಲಿ ಗನ್ ತೋರಿಸಿ ಭಾರಿ ದರೋಡೆ.. ಖತರ್ನಾಕ್​ ಜೋಡಿ ಕೊನೆಗೂ ಅಂದರ್​

ನಕಲಿ ಗನ್ ತೋರಿಸಿ ದರೋಡೆ ಮಾಡಿದ್ದ ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರವಿ ಹಾಗೂ ರಾಜು ಎಂದು ಗುರುತಿಸಲಾಗಿದೆ.

ನಕಲಿ ಗನ್ ತೋರಿಸಿ ಭಾರಿ ದರೋಡೆ.. ಖತರ್ನಾಕ್​ ಜೋಡಿ ಕೊನೆಗೂ ಅಂದರ್​
ಗನ್

Updated on: Dec 16, 2020 | 4:43 PM

ಬೆಂಗಳೂರು: ನಕಲಿ ಗನ್ ತೋರಿಸಿ ದರೋಡೆ ಮಾಡಿದ್ದ ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರವಿ ಹಾಗೂ ರಾಜು ಎಂದು ಗುರುತಿಸಲಾಗಿದೆ.

2014ರಲ್ಲಿ ರಾಮನಗರದಲ್ಲಿ ಜಮೀನಿಗೆ ಸಂಬಂಧಿಸಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಬಿಡುಗಡೆಯಾದ ಬಳಿಕ ಆರೋಪಿ ರವಿ ನಗರದಲ್ಲಿರುವ ಅಕ್ಷಯ ಮೋಟಾರ್ಸ್​ನಲ್ಲಿ ಕೆಲಸಕ್ಕೆ ಸೇರಿದ್ದ. ಈ ನಡುವೆ, ಈ ಖತರ್ನಾಕ್​ ಜೋಡಿ ಕ್ಯಾಶ್ ಕಲೆಕ್ಷನ್ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ್​ ಎಂಬಾತನನ್ನು ಸುಮಾರು ಒಂದು 1 ತಿಂಗಳ ಕಾಲ ಹಿಂಬಾಲಿಸಿ ಆತನ ಚಲನವಲನಗಳನ್ನು ಗಮನಿಸಿದ್ದರು.

ನಂತರ, ಡಿಸೆಂಬರ್ 2ರಂದು ಕೆಂಗೇರಿ ಬಳಿ ಮಲ್ಲಿಕಾರ್ಜುನ್​ನನ್ನು ಅಡ್ಡಗಟ್ಟಿ, ನಕಲಿ ಗನ್​ನಿಂದ ಬೆದರಿಕೆ ಹಾಕಿ ಆತನ ಬಳಿಯಿದ್ದ 79 ಸಾವಿರ ರೂಪಾಯಿಯನ್ನು ದೋಚಿದ್ದರು. ಪ್ರಕರಣದ ಬಳಿಕ ಮಲ್ಲಿಕಾರ್ಜುನ್​ ಕೆಂಗೇರಿ ಠಾಣೆಯಲ್ಲಿ ದೂರು ನೀಡಿದ್ದನು. ಇದೀಗ, ಆತನ ದೂರಿನನ್ವಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಾರ್ಟಿ‌ ಮಾಡೋಣ ಬಾ.. ಎಂದು ಕರೆದು ಯುವತಿ ಮೇಲೆ ಎರಗಿದ ಕಾಮುಕ ಸ್ನೇಹಿತರು! ಒಬ್ಬ ಅರೆಸ್ಟ್

Published On - 3:21 pm, Tue, 15 December 20