ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳುವ ಮೊದಲು ನಟಿಯರಾದ ಸಂಜನಾ ಮತ್ತು ರಾಗಿಣಿ ಜನಸಾಮಾನ್ಯರು ಬೆಚ್ಚಿಬೀಳುವಂಥ ಕೃತ್ಯಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ. ಡ್ರಗ್ಸ್, ಮನಿ ಲಾಂಡರಿಂಗ್ ಮೊದಲಾದ ಕುಕೃತ್ಯಗಳ ಜೊತೆ ಅವರು ಭೂಗತ ಲೋಕದೊಂದಿಗೂ ಸಂಬಂಧ ಇಟ್ಟುಕೊಂಡಿರುವ ಭಯಾನಕ ಸಂಗತಿ ಗೊತ್ತಾಗಿದೆ.
ಅಂದಹಾಗೆ, ರಾಗಿಣಿ ಮತ್ತು ಸಂಜನಾ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಭೂಗತ ಲೋಕದ ಲಿಂಕ್ ಇತ್ತೆನ್ನುವ ಮಾಹಿತಿ ಪೊಲೀಸ್ ಮೂಲಗಳಿಂದಲೇ ಹೊರಬಿದ್ದಿದೆ. ನಟಿಯರ ಪಾರ್ಟಿಗಳಲ್ಲಿ ಅಂಡರ್ ವರ್ಲ್ಡ್ ಹಲವಾರು ಸದಸ್ಯರು ಹಾಜರಿರುತ್ತಿದ್ದ, ಲೇಟ್ ನೈಟ್ ಪಾರ್ಟಿಗಳಲ್ಲಿ ನಟೋರಿಯಸ್ ರೌಡಿಗಳ ದಂಡೇ ಭಾಗಿಯಾಗುತ್ತಿದ್ದ ಮಾಹಿತಿ ಲಭ್ಯವಾಗಿದೆ. ಕುಖ್ಯಾತ ರೌಡಿ ಮಸೂರ್ ಅಲಿಯಾಸ್ ಮಸ್ಸಿ, ಇನ್ನೊ
ಇದರ ಜೊತೆಗೆ ರಾಗಿಣಿ ಮತ್ತು ಸಂಜನಾ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಎಲ್ಲೆ ಮೀರಿದ ಸ್ವಚ್ಛಂದತೆಯಿರುತ್ತಿದ್ದ ಮಾಹಿತಿ ಕೂಡ ದೊರಕಿದೆ. ಡ್ರಗ್ಸ್ ಸೇವನೆ ಬಳಿಕ ಪಾರ್ಟಿಗಳಲ್ಲಿ ಭಾಗಿಯಾಗಿದವರು ಲೈಂಗಿಕ ಕ್ರೀಡೆಯಲ್ಲೂ ತೊಡಗುತ್ತಿದ್ದರಂತೆ!