ಬೆಂಗಳೂರು: ಅಪರಿಚಿತ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿ, ಆರೋಪಿ ಎಸ್ಕೇಪ್ ಆದಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನರಸಿಂಹಮೂರ್ತಿ ಎಂಬುವವನಿಂದ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಅಕ್ರಮವಾಗಿ ಕೆಲ ದಿನಗಳಿಂದ ಮಹಿಳೆಯೋರ್ವಳನ್ನ ಮನೆಯಲ್ಲಿ ಜೊತೆಯಲ್ಲಿಟ್ಟುಕೊಂಡು ಸಂಸಾರ ಮಾಡುದ್ದು, ಈ ವೇಳೆ ನೆನ್ನೆ ಇಬ್ಬರ ನಡುವೆ ಗಲಾಟೆ ನಡೆದು ಕೊಲೆ ಮಾಡಿರುವುದಾಗಿ ಶಂಕಿಸಲಾಗಿದೆ. ಮೃತಳ ವಿಳಾಸ, ಹೆಸರು ಪತ್ತೆಯಾಗಿಲ್ಲ. ಸೂಲಿಬೆಲೆ ಪೊಲೀಸರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಗುಟ್ಕಾ ವಿಚಾರಕ್ಕೆ ಶುರುವಾದ ಜಗಳ: ಕೊಲೆಯಲ್ಲಿ ಅಂತ್ಯ
ಹುಬ್ಬಳ್ಳಿ: ಗುಟ್ಕಾ ವಿಚಾರಕ್ಕೆ ಶುರುವಾದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ನಗರದ ಆನಂದ ನಗರದ ಖೋಡೆ ಬಾರ್ನಲ್ಲಿ ನಡೆದಿದೆ. ಮೆಹಬೂಬ್ ಕಳಸ ಕೊಲೆಯಾದ ವ್ಯಕ್ತಿ. ಮೆಹಬೂಬ್ ಕಳಸ ಸ್ನೇಹಿತನ ಜೊತೆ ಮದ್ಯ ಸೇವಿಸಲು ತೆರಳಿದ್ದು, ವಿಮಲ್ ಗುಟ್ಕಾ ವಿಚಾರಕ್ಕೆ ಸ್ನೇಹಿತ ಮಹ್ಮದ್ ಗೌಸ್ ಜೊತೆಗೆ ಕಿರಿಕ್ ಆಗಿದೆ. ಜಗಳ ವಿಕೋಪಕ್ಕೆ ತಿರುಗಿ ಹತ್ಯೆ ಮಾಡಲಾಗಿದೆ. ಹಳೆ ಹುಬ್ಬಳ್ಳಿ ಪೊಲೀಸರು ಶವವನ್ನು ಕಿಮ್ಸ್ಗೆ ರವಾನಿಸಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ; ಕಲಬುರಗಿ ಬಹಮನಿ ಕೋಟೆಯಲ್ಲಿ ಸೋಮೇಶ್ವರ ದೇಗುಲದ ಕುರುಹು ವಿಚಾರ; ಟಿವಿ9ಗೆ ಮಾಹಿತಿ ನೀಡಿದ ಇತಿಹಾಸ ಪ್ರಾಧ್ಯಾಪಕ
ಗೋಡೆ ಕುಸಿದು ವ್ಯಕ್ತಿಯೋರ್ವ ಸಾವು
ಕಲಬುರಗಿ: ಗೋಡೆ ಕುಸಿದು ಬಿದ್ದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಅಲ್ಲಾಪೂರ(ಜೆ) ಗ್ರಾಮದಲ್ಲಿ ಸಂಭವಿಸಿದೆ. ಸೋಮಲಿಂಗ ಚಿಕ್ಕಳಕರ(25) ಮೃತ ದುರ್ದೈವಿ. ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಗೋಡೆ ತೇವಗೊಂಡಿತ್ತು. ಕಳೆದ ರಾತ್ರಿ ಗೋಡೆ ಕುಸಿದು ಬಿದ್ದ ಹಿನ್ನಲೆ ಸೋಮಲಿಂಗ ಮೃತಪಟ್ಟಿದ್ದಾನೆ. ಮಾದನಹಿಪ್ಪರಗಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಗದ್ದೆಯಲ್ಲಿ ಗಾಂಜಾ ಬೆಳೆದಿದ್ದವನ ಬಂಧನ
ಬೆಳಗಾವಿ: ಗದ್ದೆಯಲ್ಲಿ ಗಾಂಜಾ ಬೆಳೆದಿದ್ದ ಓರ್ವನನ್ನು ಪೊಲೀಸರು ಬಂಧಿಸಿರುವಂತಹ ಘಟನೆ ಜಿಲ್ಲೆ ಗೋಕಾಕ್ ತಾಲೂಕಿನ ಮಿಡಕನಟ್ಟಿ ಗ್ರಾಮದಲ್ಲಿ ನಡೆದಿದೆ. ಪರಪ್ಪ ಸವಸುದ್ದಿ ಬಂಧಿತ ಆರೋಪಿ. ಮಿಡಕನಟ್ಟಿಯಲ್ಲಿ 2.58 ಲಕ್ಷ ಮೌಲ್ಯದ 25 ಕೆಜಿ 800 ಗ್ರಾಂ ಗಾಂಜಾ ಬೆಳೆ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಡಿಸಿಆರ್‌ಬಿ, ಸಿಇಎನ್ ಹಾಗೂ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ಮಾಡಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.