Crime News: ಬೃಂದಾವನ ಕಾಲೇಜು ಹಾಸ್ಟೆಲ್ನಲ್ಲಿ ನೇಣುಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

TV9 Digital Desk

| Edited By: Ayesha Banu

Updated on: May 23, 2022 | 8:36 PM

ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ತೂಪನಕೊಲ್ಲಿ ಎಸ್ಟೇಟ್ನಲ್ಲಿ ಗೃಹಿಣಿ ಚೈತ್ರಾ(26) ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime News: ಬೃಂದಾವನ ಕಾಲೇಜು ಹಾಸ್ಟೆಲ್ನಲ್ಲಿ ನೇಣುಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ

ಬೆಂಗಳೂರು ಉತ್ತರ ತಾಲೂಕಿನ ಬಾಗಲೂರು ಗ್ರಾಮದಲ್ಲಿರುವ ಬೃಂದಾವನ ಕಾಲೇಜು ಹಾಸ್ಟೆಲ್ನಲ್ಲಿ ನೇಣುಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಓಮನ್ ದೇಶದ ವಿದ್ಯಾರ್ಥಿ ಅಬ್ದುಲ್ ರಶೀದ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಂದ ಆರೋಪಿ ಅರೆಸ್ಟ್ ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿಯಲ್ಲಿ ಮೇ 20ರಂದು ಮದ್ಯ ಸೇವಿಸುವಾಗ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿ ಸ್ನೇಹಿತನನ್ನು ಕೊಲೆಗೈದಿದ್ದ ಘಟನೆ ನಡೆದಿತ್ತು. ಸದ್ಯ ಪೊಲೀಸರು ಬಿಹಾರ ಮೂಲದ ಕಾರ್ಪೆಂಟರ್ ಬೈಜುಶರ್ಮಾನನ್ನು ಬಂಧಿಸಿದ್ದಾರೆ. ತುಮಕೂರಿನ ಪಾವಗಡ ಮೂಲದ ಪಾತಲಿಂಗ (32) ಕೊಲೆಯಾದ ವ್ಯಕ್ತಿ.

ಆರೋಪಿ ಬೈಜುಶರ್ಮಾ ಮತ್ತು ಕೊಲೆಯಾದ ಪಾತಲಿಂಗ ಇಬ್ಬರೂ ಆವಲಹಳ್ಳಿಯ ವುಡ್ ವರ್ಕ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದರು. ಆದ್ರೆ ಕಳೆದ ಶುಕ್ರವಾರ ಸಂಜೆ ಎಣ್ಣೆ ಹೊಡೆಯುವ ವೇಳೆ ಕಿರಿಕ್ ನಡೆದು ಕೊಲೆ ನಡೆದಿದೆ. ಅಂಗಡಿ ಮಾಲೀಕನ ನೂತನ ನಿರ್ಮಾಣ ಹಂತದ ಮನೆ ಮೇಲೆ ಕೊಲೆ ನಡೆದಿದೆ. ಕೊಲೆ ನಂತರ ಆರೋಪಿ ಎಸ್ಕೇಪ್ ಆಗಿ ತಲೆ ಮರೆಸಿಕೊಂಡಿದ್ದ ಇದೀಗ ಆರೋಪಿಯನ್ನ ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಶೂಟಿಂಗ್ ವೇಳೆ ನಡೆಯಿತು ಭೀಕರ ಅವಘಡ; ಸಮಂತಾ-ವಿಜಯ್​ ದೇವರಕೊಂಡಗೆ ಗಾಯ

ಕೊಡಗಿನಲ್ಲಿ ಗೃಹಿಣಿ ನೇಣಿಗೆ ಶರಣು ಕೊಡಗು: ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ತೂಪನಕೊಲ್ಲಿ ಎಸ್ಟೇಟ್ನಲ್ಲಿ ಗೃಹಿಣಿ ಚೈತ್ರಾ(26) ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಷರ್ ವಿಚಾರದಲ್ಲಿನ ಕೋಪ ಕೊಲೆಯಲ್ಲಿ ಅಂತ್ಯ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನರಗಲು ಗ್ರಾಮದ ಮೋಹನ್ ಕಿಡ್ನ್ಯಾಪ್, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಿಂಡಿಗನವಿಲೆ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ರಾಜು, ಕುಮಾರ್ ಹಾಗೂ ತೇಜಸ್ ಬಂಧಿತ ಆರೋಪಿಗಳು. ಕೊಲೆ ಹಿಂದೆ ಕುಣಿಗಲ್ ಮೂಲದ ರೌಡಿಶೀಟರ್ ಕೈವಾಡವಿದ್ದು ರೌಡಿಶೀಟರ್ ಸೇರಿ 6 ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಬಂಧಿತ ಕ್ರಷರ್ ಮಾಲೀಕ ರಾಜು ಲೈಮ್ ಲೈನ್ ಕ್ರಷರ್ ಕಾವಲಿಗೆ ರೌಡಿಶೀಟರ್ಗಳನ್ನು ನೇಮಿಸಿದ್ದ. ಅಕ್ರಮ ಗಣಿಗಾರಿಕೆಗೆ ಅಡ್ಡಿ ಹಿನ್ನೆಲೆಯಲ್ಲಿ ಮೇ 15ರಂದು ನರಗಲು ಗ್ರಾಮದ ಮೋಹನ್ ಕೊಲೆ ಮಾಡಲಾಗಿತ್ತು. ಆರೋಪಿ ಕುಮಾರ್ ಮೋಹನ್ ಮೃತ ದೇಹದ ಹಿಮ್ಮಡಿ ಕತ್ತರಿಸಿದ್ದ. ಸತ್ತ ಬಳಿಕ ದೆವ್ವವಾಗಿ ಕಾಡಬಾರದೆಂದು ಹಿಮ್ಮಡಿಗೆ ಕತ್ತರಿ ಹಾಕಿದ್ದ. ಬಳಿಕ ಬಂಟರ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಬಂಟರ ತಾಳಾಳುನಲ್ಲಿ ದಫನ್ ಮಾಡಿದ್ದರು. ಇದನ್ನೂ ಓದಿ: ಹಾಟ್ ಅವತಾರಕ್ಕೂ ಸೈ, ಸಾಂಪ್ರದಾಯಿಕ ಉಡುಗೆಗೂ ಜೈ

ಕೊಲೆಗೆ ಕಾರಣವೇನು? ಆರೋಪಿ ಕುಮಾರ್ ಜಮೀನಿನಲ್ಲಿ ಆರೋಪಿ ರಾಜು ಕ್ರಷರ್ ತೆರೆದಿದ್ದ. ಮೇ 10ರಂದು ಗಣಿ, ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಬಳಿಕ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ಮುಚ್ಚಿಸಿದ್ದರು. ಇದರ ಹಿಂದೆ ಮೃತ ಮೋಹನ್ ಪಾತ್ರವಿದೆ ಎಂದು ಕುಮಾರ್ ಶಂಕಿಸಿದ್ದ. ಹೀಗಾಗಿ ಮೋಹನ್ನನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು. ಬಿಂಡಿಗನವಿಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಶಿರೂರಿನಲ್ಲಿ ಆಸ್ತಿಗಾಗಿ ಪತ್ನಿಯ ತಮ್ಮನನ್ನೇ ಕೊಂದ ಮಾವ ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದಲ್ಲಿ ಆಸ್ತಿಗಾಗಿ ಪತ್ನಿಯ ತಮ್ಮನನ್ನೇ ಕೊಂದ ಘಟನೆ ನಡೆದಿದೆ. ಅಕ್ಕನ ಗಂಡ ರಮೇಶ್ನಿಂದ ಹತ್ಯೆಯಾದ ಸಂಗಪ್ಪ ಕೋಟಿ. ಮಾವ ರಮೇಶ್ ಅಂಗಡಿ, ಅಳಿಯ ಸಂಗಪ್ಪನ ಮಧ್ಯೆ ಕಳೆದ ಎರಡು ವರ್ಷಗಳಿಂದ ಆಸ್ತಿಗಾಗಿ ಕಲಹ ನಡೆಯುತ್ತಿತ್ತು. ಹೊಲದಿಂದ ಬರುವಾಗ ಕಲ್ಲಿನಿಂದ ಜಜ್ಜಿ ಕೊಲೆಗೈದು ರಮೇಶ್ ಪರಾರಿಯಾಗಿದ್ದಾನೆ. ಬಾಗಲಕೋಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ರಮೇಶ್ಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಕೊಲೆಯಾದ ಸಂಗಪ್ಪ ವಿಕಲಚೇತನ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada