Lucknow Court Firing :ಲಖನೌನ ಕೋರ್ಟ್‌ನಲ್ಲಿ ಫೈರಿಂಗ್, ಗ್ಯಾಂಗ್‌ಸ್ಟರ್‌ ಸಂಜೀವ್‌ ಜೀವಾ ಹತ್ಯೆ

ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಗ್ಯಾಂಗ್‌ಸ್ಟರ್‌ ಸಂಜೀವ್‌ ಜೀವಾ ಮೇಲೆ ಗುಂಡು ಹಾರಿಸಲಾಗಿದೆ. ಗುಂಡಿನ ದಾಳಿಯಲ್ಲಿ ಓರ್ವ ಯುವತಿಗೆ ಗಂಭೀರ ಗಾಯವಾಗಿದೆ.

Lucknow Court Firing :ಲಖನೌನ ಕೋರ್ಟ್‌ನಲ್ಲಿ ಫೈರಿಂಗ್, ಗ್ಯಾಂಗ್‌ಸ್ಟರ್‌ ಸಂಜೀವ್‌ ಜೀವಾ ಹತ್ಯೆ
ಲಖನೌ ಕೋರ್ಟ್
Edited By:

Updated on: Jun 07, 2023 | 5:11 PM

ಬುಧವಾರ ಲಕ್ನೋ ನ್ಯಾಯಾಲಯದ (Lucknow Civil Court) ಹೊರಗೆ ಕೆಲವು ಅಪರಿಚಿತ ದುಷ್ಕರ್ಮಿಗಳು ಗ್ಯಾಂಗ್​​ಸ್ಟರ್ ಸಂಜೀವ್ ಜೀವಾ (Sanjeev Jeeva) ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ನ್ಯಾಯಾಲಯದ ಆವರಣದೊಳಗೆ ಈ ಘಟನೆ ನಡೆದಿದ್ದು ಗುಂಡಿನ ದಾಳಿಯಲ್ಲಿ ಯುವತಿಯೊಬ್ಬಳಿಗೆ ಗಾಯವಾಗಿದೆ. ವಕೀಲರ ಸೋಗಿನಲ್ಲಿ ಬಂದು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಮುಖ್ತಾರ್ ಅನ್ಸಾರಿಯ (Mukhtar Ansari) ಆಪ್ತನಾಗಿದ್ದಾನೆ ಜೀವಾ. ಗುಂಡು ತಗಲಿದ ಜೀವಾ ನೆಲಕ್ಕೆ ಬಿದ್ದಿದ್ದು, ಗಂಭೀರ ಗಾಯಗಳಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ

ಗ್ಯಾಂಗ್ ಸ್ಟರ್-ರಾಜಕಾರಣಿ ಮುಕ್ತಾರ್ ಅನ್ಸಾರಿ ಅವರ ಆಪ್ತ ಸಹಾಯಕ ಸಂಜೀವ್ ಮಹೇಶ್ವರಿ ಜೀವಾ, ಬಿಜೆಪಿ ಶಾಸಕ ಬ್ರಹ್ಮದತ್ ದ್ವಿವೇದಿ ಹತ್ಯೆ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದು, ಇದೇ ಆರೋಪದಲ್ಲಿ ಮುಖ್ತಾರ್ ಅನ್ಸಾರಿ ಕೂಡ ಆರೋಪಿಯಾಗಿದ್ದಾರೆ.

ದಾಳಿಯಲ್ಲಿ ಓರ್ವ ಪೊಲೀಸ್ ಪೇದೆಯೂ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಪರಿಹಾರ ಧನ ಪಡೆಯಲು ರೈಲು ಅಪಘಾತದಲ್ಲಿ ಪತಿ ಸಾವಿಗೀಡಾಗಿದ್ದಾನೆ ಎಂದು ಸುಳ್ಳು ಹೇಳಿದ ಮಹಿಳೆ; ಗಂಡನಿಂದಲೇ ದೂರು

ಕಾಂಪೌಂಡರ್ ಆಗಿದ್ದ ಸಂಜೀವ್ ಜೀವಾ ಭೂಗತ ಜಗತ್ತಿನೊಂದಿಗ ನಂಟು ಹೊಂದಿದ್ದ.2018 ರಲ್ಲಿ ಬಾಗ್ಪತ್ ಜೈಲಿನಲ್ಲಿ ಕೊಲ್ಲಲ್ಪಟ್ಟ ಮುನ್ನಾ ಬಜರಂಗಿಯ ಆಪ್ತನಾಗಿದ್ದ ಈ ಜೀವಾ ಎಂದು ಹೇಳಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:38 pm, Wed, 7 June 23