ದೆಹಲಿ: ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ 65 ವರ್ಷದ ವ್ಯಕ್ತಿಯ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡಿದ ದರೋಡೆಕೋರರು ಅವರ ಬಳಿಯಿದ್ದ ಹಣವನ್ನೆಲ್ಲ ದೋಚಿಕೊಂಡು ಓಡಿಹೋಗಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ವ್ಯಕ್ತಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಹಳ ದೂರ ಹಿಂಬಾಲಿಸಿದ ಇಬ್ಬರು ಅಪರಿಚಿತರು ಆ ವ್ಯಕ್ತಿಯ ಕುತ್ತಿಗೆಯನ್ನು ಹಿಡಿದು, ಆತನ ಕೈಲಿದ್ದ ಬ್ಯಾಗ್ನೊಂದಿಗೆ ಪರಾರಿಯಾಗಿದ್ದಾರೆ.
ಈ ಕುರಿತು ಕೇಸ್ ದಾಖಲಿಸಲಾಗಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ. ಬೆಳಗಿನ ಜಾವ 3.30ಕ್ಕೆ ರಾಮ್ ನಿವಾಸ್ ಎಂಬ ವ್ಯಕ್ತಿ ತನ್ನ ಮನೆಗೆ ನಡೆದುಕೊಂಡು ಹೋಗುವಾಗ ಅಪರಿಚಿತರು ದಾಳಿ ನಡೆಸಿದ್ದಾರೆ. ಅವರು ತಮ್ಮ ಮನೆ ತಲುಪುವ ಸ್ವಲ್ಪ ಹೊತ್ತಿನ ಮೊದಲು ಈ ಘಟನೆ ನಡೆದಿದೆ. ಹಿಂದಿನಿಂದ ಬಂದ ಇಬ್ಬರ ರಾಮ್ ಅವರ ಕುತ್ತಿಗೆಯನ್ನು ಹಿಡಿದು, ಅವರ ಕೈಲಿದ್ದ ಬ್ಯಾಗ್ ಕಸಿದುಕೊಂಡು ಓಡಿಹೋಗಿದ್ದಾರೆ.
#JUSTIN: Two men robbed a bag from a 65-year-old man when he was returning home in North-West Delhi’s Jahangirpuri area. An FIR has been registered, but no arrest has been made so far. @IndianExpress, @ieDelhi pic.twitter.com/coK4mARdBt
— Mahender Singh Manral (@mahendermanral) August 27, 2021
ದರೋಡೆಕೋರರ ಕೈಯಿಂದ ಬಿಡಿಸಿಕೊಳ್ಳಲು ರಾಮ್ ಅವರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅವರನ್ನು ಕೆಳಗೆ ತಳ್ಳಿದ ದರೋಡೆಕೋರರು ಎಸ್ಕೇಪ್ ಆಗಿದ್ದಾರೆ. ಪೊಲೀಸ್ ಚೆಕ್ಪೋಸ್ಟ್ನಿಂದ ಕೇವಲ 200 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: Crime News: ಯೂನಿಫಾರ್ಮ್ ಎಲ್ಲಿ ಎಂದ ಪ್ರಿನ್ಸಿಪಾಲ್ ತಲೆಗೆ ಗನ್ ಹಿಡಿದ ವಿದ್ಯಾರ್ಥಿ!
Crime News: ತ್ರಿಶೂಲದಿಂದ ಇರಿದು ಅರ್ಚಕನ ಬರ್ಬರ ಹತ್ಯೆ; ದೇವಸ್ಥಾನದಲ್ಲಿ ಅರೆ ಸುಟ್ಟ ಶವ ಪತ್ತೆ
(Viral Video Senior citizen robbed in Northwest Delhi CCTV Video Viral)