ಟ್ರೈನಿ ವೈದ್ಯೆಗೆ ಲೈಂಗಿಕ ಕಿರುಕುಳ, ವಾರ್ಡ್​ ಬಾಯ್​ಗೆ ಸಿಕ್ತು ಪೊಲೀಸ್ ‘ಟ್ರೀಟ್​ಮೆಂಟ್’

ಮುಂಬೈ: ವಾಣಿಜ್ಯ ನಗರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹಳೆಯ ವಾರ್ಡ್​ ಬಾಯ್​ ಆತ. ವಯಸ್ಸು ಇನ್ನೂ 30 ದಾಟಿಲ್ಲ. ಅವನಿಗಿರುವ ರೋಗ ಎಂಥದ್ದು ಅಂದ್ರೆ ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿಯ ಮೇಲೆ ಕಾಮಮೃಗದಂತೆ ಬೀಳುವುದು. ಮೊನ್ನೆಯೂ ಹಾಗೆಯೇ ಆಗಿದೆ. ಯುವ ಟ್ರೈನಿ ವೈದ್ಯೆಯೊಬ್ಬರು ಆಸ್ಪತ್ರೆಯಲ್ಲಿ ರೌಂಡ್ಸ್​ನಲ್ಲಿದ್ದರು. ಈ ಕಾಮುಕ ವಾರ್ಡ್​ ಬಾಯ್​ ಅದೆಲ್ಲಿದ್ದನೋ ಆಕೆಯ ಮೇಲೆ ಬಿದ್ದಿದ್ದಾನೆ. ಕಾಮ ಚೇಷ್ಟೆ ಆರಂಭಿಸಿದ್ದಾನೆ. ತಕ್ಷಣ ಎಚ್ಚೆತ್ತ ಆ ವೈದ್ಯೆ ಅದು ಹೇಗೋ ಅವನಿಂದ ತಪ್ಪಿಸಿಕೊಂಡಿದ್ದಾರೆ. ಮುಂದೆ ಪ್ರಕರಣ ಸ್ಥಳೀಯ ಪೊಲೀಸ್​ ಠಾಣೆ […]

ಟ್ರೈನಿ ವೈದ್ಯೆಗೆ ಲೈಂಗಿಕ ಕಿರುಕುಳ, ವಾರ್ಡ್​ ಬಾಯ್​ಗೆ ಸಿಕ್ತು ಪೊಲೀಸ್ ‘ಟ್ರೀಟ್​ಮೆಂಟ್’
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​

Updated on: Jun 29, 2020 | 11:11 AM

ಮುಂಬೈ: ವಾಣಿಜ್ಯ ನಗರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹಳೆಯ ವಾರ್ಡ್​ ಬಾಯ್​ ಆತ. ವಯಸ್ಸು ಇನ್ನೂ 30 ದಾಟಿಲ್ಲ. ಅವನಿಗಿರುವ ರೋಗ ಎಂಥದ್ದು ಅಂದ್ರೆ ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿಯ ಮೇಲೆ ಕಾಮಮೃಗದಂತೆ ಬೀಳುವುದು.

ಮೊನ್ನೆಯೂ ಹಾಗೆಯೇ ಆಗಿದೆ. ಯುವ ಟ್ರೈನಿ ವೈದ್ಯೆಯೊಬ್ಬರು ಆಸ್ಪತ್ರೆಯಲ್ಲಿ ರೌಂಡ್ಸ್​ನಲ್ಲಿದ್ದರು. ಈ ಕಾಮುಕ ವಾರ್ಡ್​ ಬಾಯ್​ ಅದೆಲ್ಲಿದ್ದನೋ ಆಕೆಯ ಮೇಲೆ ಬಿದ್ದಿದ್ದಾನೆ. ಕಾಮ ಚೇಷ್ಟೆ ಆರಂಭಿಸಿದ್ದಾನೆ. ತಕ್ಷಣ ಎಚ್ಚೆತ್ತ ಆ ವೈದ್ಯೆ ಅದು ಹೇಗೋ ಅವನಿಂದ ತಪ್ಪಿಸಿಕೊಂಡಿದ್ದಾರೆ. ಮುಂದೆ ಪ್ರಕರಣ ಸ್ಥಳೀಯ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.

ಪೊಲೀಸರು ಆರೋಪಿಯನ್ನು ನೋಡಿದವರೆ.. ಇವನಿಗೆ ಪಾಸ್ಟ್ ಹಿಸ್ಟರಿಯೂ ಇದೆ. ಹೀಗೆ ಅನೇಕ ಬಾರಿ ಮಹಿಳೆಯರ ಮೇಲೆ ಇಂತಹ ಕುಕೃತ್ಯಗಳನ್ನು ಎಸಗಿದ್ದಾನೆ. ಮುಂದೆ ನಾವು ಇವನನ್ನು ವಿಚಾರಿಸಿಕೊಳ್ಳುತ್ತೇವೆ, ಬಿಡಿ ಎಂದಿದ್ದಾರೆ. ಜೊತೆಗೆ ಅವನನ್ನು ಅರೆಸ್ಟ್ ಮಾಡಿ, ಇದೀಗ ಪೊಲೀಸ್ ಟ್ರೀಟ್​ಮೆಂಟ್​ ಕೊಡ್ತಿದ್ದಾರೆ.

Published On - 11:10 am, Mon, 29 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us