ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯತಮನ ಮೇಲೆ ಬಿಸಿ ನೀರು ಎರಚಿದ ಮಹಿಳೆ

|

Updated on: May 30, 2023 | 9:47 PM

ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯತಮನ ಮೇಲೆ ಮಹಿಳೆಯೊಬ್ಬಳು ಬಿಸಿ ನೀರು ಎರಚಿದ ಘಟನೆ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯತಮನ ಮೇಲೆ ಬಿಸಿ ನೀರು ಎರಚಿದ ಮಹಿಳೆ
ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯತಮನ ಮೇಲೆ ಬಿಸಿ ನೀರು ಎರಚಿದ ಮಹಿಳೆ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಅದೊಂಥರ ವಿಚಿತ್ರ ಪ್ರೇಮ ಕಥೆ (Love Story). ಪ್ರಿಯತಮೆಯ ಮೊದಲನೇ ಮದುವೆ ವಿಚಾರ ಪ್ರಿಯತಮನಿಗೆ ಗೊತ್ತಿರಲಿಲ್ಲ. ಆಕೆಯ ವಿಚಾರ ಗೊತ್ತಾಗುತ್ತಿದ್ದಂತೆ ಆಕೆಯನ್ನ ಬಿಟ್ಟು ಬೇರೊಂದು ವಿವಾಹ ಆಗಿದ್ದ. ಹೀಗಿದ್ದರೂ ಆತ ಪ್ರಿಯತಮೆಯ ಸಹವಾಸ ಬಿಟ್ಟಿರಲಿಲ್ಲ. ಸದ್ಯ ಬರ್ತ್ ಡೇ ಪ್ರಿಪರೇಷನ್​ಗೆ ಅಂತಾ ಪ್ರೇಯಸಿಯ ಅರಸಿ ಹೋದವನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.

ಮೇ 25 ರಂದು ಮಾತನಾಡಬೇಕು ಎಂದು ಭೀಮಾಶಂಕರನನ್ನ ತನ್ನ ರೂಮಿಗೆ ಕರೆದಿದ್ದಳು. ಸಂಜೆ ಏಳು ಗಂಟೆ ಸುಮಾರಿಗೆ ರೂಮಿಗೆ ಬಂದಿದ್ದ ಭೀಮಾಶಂಕರನ ಜೊತೆ ಮಹಿಳೆ ಮಾತನಾಡುತ್ತಿದ್ದಳು. ಈ ವೇಳೆ ಭೀಮಾಶಂಕರ ತಾನು ಮದುವೆಯಾದ ವಿಚಾರ ಪ್ರಸ್ತಾಪಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಆಕೆ, ಸೈಲೆಂಟಾಗಿ ಬಿಸಿ ನೀರು ಕಾಯಿಸಿ ತಂದು ಭೀಮಾಶಂಕರನ ಮುಖಕ್ಕೆ ಎರಚಿದ ಬಿಯರ್ ಬಾಟಲ್​ನಿಂದ ಮುಖಕ್ಕೆ ಹೊಡೆದು ಮನೆ ಲಾಕ್ ಮಾಡಿ ಕಾಲ್ಕಿತ್ತಿದ್ದಾಳೆ.

ಇದನ್ನೂ ಓದಿ: Delhi murder: ದೆಹಲಿಯಲ್ಲಿ 16ರ ಹರೆಯದ ಬಾಲಕಿಯ ಬರ್ಬರ ಕೊಲೆ ಮಾಡಿದ ಆರೋಪಿ ಸಾಹಿಲ್ ಬಂಧನ

ತೀವ್ರ ಗಾಯಗೊಂಡ ಭೀಮಾಶಂಕರ ಕಿರುಚಾಡ ತೊಡಗಿದ್ದ. ಇದನ್ನು ಗಮನಿಸಿದ ಮನೆ ಮಾಲೀಕ ಸೈಯದ್, ಮನೆಗೆ ಆಗಮಿಸಿ ನೋಡಿದಾಗ ಭೀಮಾಶಂಕರ ಗಾಯಗೊಂಡು ಹೊರಳಾಡುತ್ತಿರುವುದನ್ನು ನೋಡಿದ್ದಾರೆ. ಕೂಡಲೇ ಗಾಯಾಳವನ್ನು ವಿಕ್ಟೋರಿಯಾ ಅಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಬಿಸಿ ನೀರು ಬಿದ್ದು ಭೀಮಾಶಂಕರನ ಶೇಕಡಾ 40-50 ರಷ್ಟು ದೇಹಕ್ಕೆ ಗಾಯಗಳಾಗಿವೆ. ಈ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಭೀಮಾಶಂಕರ ದೂರು ನೀಡಿದ್ದು, ಇದರ ಅನ್ವಯ ಮಹಿಳೆ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ ಆರೋಪಿ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.

ಕ್ರೈಂ ನ್ಯೂಸ್​ ಓದಲು ಇಲ್ಲಿ ಕ್ಲಿಕ್ ಮಾಡಿ