Delhi murder: ದೆಹಲಿಯಲ್ಲಿ 16ರ ಹರೆಯದ ಬಾಲಕಿಯ ಬರ್ಬರ ಕೊಲೆ ಮಾಡಿದ ಆರೋಪಿ ಸಾಹಿಲ್ ಬಂಧನ
ಅತ್ಯಂತ ಪೈಶಾಚಿಕ ರೀತಿಯಲ್ಲಿ ಬಾಲಕಿಯನ್ನು ಕೊಲೆಗೈದ ನಂತರ ತಲೆಮರೆಸಿಕೊಂಡಿದ್ದ ಈತನನ್ನು ಉತ್ತರ ಪ್ರದೇಶದ ಬುಲಂದ್‌ಶಹರ್‌ನಿಂದ ಬಂಧಿಸಲಾಗಿದೆ. ನಾವು ಆರೋಪಿ ಸಾಹಿಲ್ ಅನ್ನು ಉತ್ತರ ಪ್ರದೇಶದ ಬುಲಂದ್‌ಶಹರ್‌ನಿಂದ ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಭಾನುವಾರ ದೆಹಲಿಯಲ್ಲಿ 16 ವರ್ಷದ ಹುಡುಗಿಯನ್ನು ಬರ್ಬರವಾಗಿ ಇರಿದುಕೊಂದ (Delhi Murder) ಆಕೆಯ ಬಾಯ್ಫ್ರೆಂಡ್ ಎಂದು ಹೇಳಲಾಗುತ್ತಿರುವ 20 ವರ್ಷದ ಯುವಕನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿಯನ್ನು ಸಾಹಿಲ್ ಎಂದು ಗುರುತಿಸಲಾಗಿದೆ. ಅತ್ಯಂತ ಪೈಶಾಚಿಕ ರೀತಿಯಲ್ಲಿ ಬಾಲಕಿಯನ್ನು ಕೊಲೆಗೈದ ನಂತರ ತಲೆಮರೆಸಿಕೊಂಡಿದ್ದ ಈತನನ್ನು ಉತ್ತರ ಪ್ರದೇಶದ (Uttar Pradesh) ಬುಲಂದ್‌ಶಹರ್‌ನಿಂದ ಬಂಧಿಸಲಾಗಿದೆ. ನಾವು ಆರೋಪಿ ಸಾಹಿಲ್ ಅನ್ನು ಉತ್ತರ ಪ್ರದೇಶದ ಬುಲಂದ್‌ಶಹರ್‌ನಿಂದ ಬಂಧಿಸಿದ್ದೇವೆ. ಆತ ಎಸಿ ಮತ್ತು ರೆಫ್ರಿಜರೇಟರ್‌ಗಳಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಹೆಚ್ಚಿನ ತನಿಖೆ ನಡೆಯುತ್ತಿದೆ. ಆರೋಪಿಗೆ ಗರಿಷ್ಠ ಶಿಕ್ಷೆಯನ್ನು ನಾವು ಖಚಿತಪಡಿಸುತ್ತೇವೆ ಎಂದು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಡೆಪ್ಯೂಟಿ ಕಮಿಷನರ್ ಪೊಲೀಸ್ ಸುಮನ್ ನಲ್ವಾ ಹೇಳಿದ್ದಾರೆ.
ಆರೋಪಿ ಸಾಹಿಲ್ ‘ಶಹಬಾದ್ ಡೈರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದಾನೆ’ ಎಂದು ಪೊಲೀಸ್ ಉಪ ಆಯುಕ್ತ (ಹೊರ ಉತ್ತರ) ರವಿಕುಮಾರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
ದೆಹಲಿ ಶಹಬಾದ್ ಡೈರಿ ಹತ್ಯೆ ಪ್ರಕರಣದ ಬಗ್ಗೆ ಇಲ್ಲಿಯವರೆಗೆ ತಿಳಿದಿರುವುದಿಷ್ಟು
ಬಾಲಕಿಯು ಸ್ನೇಹಿತನ ಮಗನ ಹುಟ್ಟುಹಬ್ಬದ ಪಾರ್ಟಿಗೆ ಹೋಗಲು ನಿರ್ಧರಿಸಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಅವಳನ್ನು ಅಡ್ಡಗಟ್ಟಿ ಅನೇಕ ಬಾರಿ ಚೂರಿಯಿಂದ ಇರಿದಿದ್ದಾನೆ. ಆಮೇಲೆ ಅಲ್ಲೇ ಪಕ್ಕದಲ್ಲಿದ್ದ ದೊಡ್ಡ ಕಲ್ಲನ್ನು ಎತ್ತಿ ಆಕೆಯ ಮೇಲೆ ಹಾಕಿದ್ದಾನೆ. ಹಲವಾರು ಬಾರಿ ಇರಿದ ನಂತರ ಪ್ರಾಣ ಕಳೆದುಕೊಂಡು ಬಿದ್ದ ಬಾಲಕಿ ಮೇಲೆ ಆತ ನಾಲ್ಕೈದು ಬಾರಿ ಕಲ್ಲು ಎತ್ತಿ ಹಾಕಿದದೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಆಕೆಯ ದೇಹದ ಮೇಲೆ ಹಲವಾರು ಗಾಯಗಳಿವೆ. ಆರೋಪಿ ಆಕೆಗೆ 20 ಕ್ಕೂ ಹೆಚ್ಚು ಬಾರಿ ಇರಿದಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಉಪ ಕಮಿಷನರ್ ರಾಜಾ ಬಂಥಿಯಾ ಹೇಳಿದ್ದಾರೆ.
ಜನರ ಕಣ್ಮುಂದೆಯೇ ನಡೆದಿತ್ತು ಈ ಭೀಕರ ಕೃತ್ಯ
ಈ ಭೀಕರ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ವಿಡಿಯೊದಲ್ಲಿ ಕಂಡಂತೆ – ಯುವತಿಯನ್ನು ಗೋಡೆಗೆ ಒತ್ತಿ ಹಿಡಿದು ಆರೋಪಿ ಹಲವಾರು ಬಾರಿ ಚಾಕುನಿಂದ ಇರಿದಿದ್ದಾನೆ. ಆ ರಸ್ತೆ ಮೂಲಕ ಹಲವಾರು ಜನರು ಹಾದು ಹೋಗುತ್ತಿದ್ದು ಯಾರೊಬ್ಬರೂ ಹತ್ತಿರ ಸುಳಿಯಲಿಲ್ಲ. ಇರಿತಕ್ಕೊಳಗಾದ ಬಾಲಕಿ ಕುಸಿದು ಬೀಳುತ್ತಾಳೆ. ಆದರೂ ಈತ ಕ್ರೌರ್ಯ ಮುಂದುವರಿಸುತ್ತಾನೆ. ಸುಮಾರು 90 ಸೆಕೆಂಡುಗಳವರೆಗೆ ಈತ ಇರಿದು ಆಕೆಗೆ ಕಾಲಿನಿಂದ ತುಳಿಯುತ್ತಾನೆ. ಆಮೇಲೆ ಅಲ್ಲೇ ಪಕ್ಕದಲ್ಲಿರಿಸಿ ಕಲ್ಲನ್ನು ಎತ್ತಿ ಹಾಕುತ್ತಾನೆ.
ದೆಹಲಿಯ ಶಹಬಾದ್ ಡೈರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದ್ದು, ಪ್ರದೇಶದ ಜೆಜೆ ಕಾಲೋನಿ ನಿವಾಸಿಯಾಗಿರುವ ಬಾಲಕಿಯ ಶವ ಬೀದಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯ ನಂತರ ಇರಿತದ ಗಾಯಗಳ ಸಂಖ್ಯೆ ಮತ್ತು ಇತರ ವೈದ್ಯಕೀಯ ವಿವರಗಳನ್ನು ಹೇಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ ಆರೋಪಿ ಮತ್ತು ಸಂತ್ರಸ್ತೆ ಶನಿವಾರ ಜಗಳವಾಡಿದ್ದರು.
ಇದನ್ನೂ ಓದಿ: ದೆಹಲಿ: 16ರ ಹರೆಯದ ಬಾಲಕಿಯನ್ನು ಇರಿದು ಕೊಂದು ಬಂಡೆ ಕಲ್ಲು ಎತ್ತಿಹಾಕಿದ ಯುವಕ; ಬರ್ಬರ ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಆಮ್ ಆದ್ಮಿ ಪಕ್ಷ ಪ್ರತಿಕ್ರಿಯೆ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸದಸ್ಯರು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ದಿಲ್ಲಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಬಹಿರಂಗವಾಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದು ತುಂಬಾ ದುಃಖ ಮತ್ತು ದುರದೃಷ್ಟಕರವಾಗಿದೆ. ಅಪರಾಧಿಗಳು ನಿರ್ಭೀತರಾಗಿದ್ದಾರೆ, ಪೊಲೀಸರ ಭಯವಿಲ್ಲ, ಎಲ್ಜಿ ಸರ್, ಕಾನೂನು ಮತ್ತು ಸುವ್ಯವಸ್ಥೆ ನಿಮ್ಮ ಜವಾಬ್ದಾರಿ, ಏನಾದರೂ ಮಾಡಿ. ದೆಹಲಿಯ ಜನರ ಸುರಕ್ಷತೆಯೇ ಮುಖ್ಯ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ದೆಹಲಿ ಸಚಿವ ಸೌರಭ್ ಭಾರದ್ವಾಜ್ ಕೂಡ ಟ್ವೀಟ್ ಮಾಡಿ ಎಲ್‌ಜಿ ಸಾಬ್ ತಮ್ಮ ಕೆಲಸವನ್ನು ಮಾಡದಿದ್ದರೆ ಅದರ ಜವಾಬ್ದಾರಿ ಏನು? ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ. ರಸ್ತೆಯಲ್ಲಿ ಕೊಲೆ ನಡೆದಿದೆ, ಇಂದಿಗೂ ಶಹಾಬಾದ ಘಟನೆ ಅತ್ಯಂತ ನಾಚಿಕೆಗೇಡಿನ ಸಂಗತಿ. ಎಲ್ ಜಿ ಸಾಬ್ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದಿದ್ದಾರೆ.
ದುರದೃಷ್ಟಕರ ಎಂದ ದೆಹಲಿ ಬಿಜೆಪಿ ಸಂಸದ
ವಾಯವ್ಯ ದೆಹಲಿಯ ಲೋಕಸಭಾ ಸಂಸದರಾಗಿರುವ ಬಿಜೆಪಿ ನಾಯಕ ಹನ್ಸ್ ರಾಜ್ ಹನ್ಸ್ , “ಇದೊಂದು ದುರದೃಷ್ಟಕರ ಘಟನೆ. ಈ ಹಿಂದೆಯೂ (ಸಹ) ನನ್ನ ಕ್ಷೇತ್ರದಲ್ಲಿ ಇದೇ ರೀತಿಯ ಪ್ರಕರಣಗಳು ನಡೆದಿವೆ. ನಾನುಪೊಲೀಸರು ಮತ್ತು ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇನೆ.ಯುವಕರು ಆಗಾಗ್ಗೆ ಭಾವನೆಗಳಲ್ಲಿ ಸಿಲುಕಿಕೊಳ್ಳುತ್ತಿರುತ್ತಾರೆ ಎಂದು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ ಕೇಸ್: ಸಿಕ್ಕಿಬಿದ್ದ 6 ಆರೋಪಿಗಳು
ಹತ್ಯೆ ಪ್ರಕರಣ ಖಂಡಿಸಿದ ಸ್ವಾತಿ ಮಲಿವಾಲ್
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ನಗರವು ಮಹಿಳೆಯರು ಮತ್ತು ಹುಡುಗಿಯರಿಗೆ ಅತ್ಯಂತ ಅಸುರಕ್ಷಿತವಾಗಿದೆ ಮತ್ತು ಶಾ, ಸಕ್ಸೇನಾ, ಕೇಜ್ರಿವಾಲ್ ಈ ಬಗ್ಗೆ ಉನ್ನತ ಮಟ್ಟದ ಸಭೆಯನ್ನು ಕರೆಯುವಂತೆ ಕೇಂದ್ರಕ್ಕೆ ಕರೆ ನೀಡಿದರು. “16 ವರ್ಷದ ಬಾಲಕಿಗೆ 40-50 ಬಾರಿ ಇರಿದಿದ್ದು, ನಂತರ ಅನೇಕ ಬಾರಿ ಕಲ್ಲಿನಿಂದ ಹೊಡೆದು ಸಾಯಿಸಲಾಗಿದೆ. ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲವಾರು ಜನರು ಇದನ್ನು ನೋಡಿದ್ದಾರೆ ಆದರೆ ಗಮನ ಹರಿಸಲಿಲ್ಲ. ದೆಹಲಿ ಅತ್ಯಂತ ಅಸುರಕ್ಷಿತವಾಗಿದೆ. ಮಹಿಳೆಯರು ಮತ್ತು ಬಾಲಕಿಯರಿಗಾಗಿ, ಕೇಂದ್ರ ಗೃಹ ಸಚಿವರು, ದೆಹಲಿ ಎಲ್‌ಜಿ, ಡಿಸಿಡಬ್ಲ್ಯೂ ಮುಖ್ಯಸ್ಥರು ಮತ್ತು ದೆಹಲಿ ಸಿಎಂ ಅವರೊಂದಿಗೆ ಉನ್ನತ ಮಟ್ಟದ ಸಭೆಯನ್ನು ಕರೆಯುವಂತೆ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Mon, 29 May 23