AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gangster Death: ಕೆನಡಾದಲ್ಲಿ ಪಂಜಾಬ್ ಮೂಲದ ಗ್ಯಾಂಗ್​ಸ್ಟರ್​ನನ್ನು ಗುಂಡಿಕ್ಕಿ ಹತ್ಯೆ

ಕೆನಡಾದಲ್ಲಿ ಪಂಜಾಬ್​ ಮೂಲದ ಗ್ಯಾಂಗ್​ಸ್ಟರ್(Gangster)​ನನ್ನು ಹತ್ಯೆ ಮಾಡಲಾಗಿದೆ. ಮದುವೆಯ ರಿಸೆಪ್ಷನ್ ಸಮಯದಲ್ಲಿ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೊಲೆಯಾದ ದರೋಡೆಕೋರನನ್ನು ಅಮರ್‌ಪ್ರೀತ್ ಸಮ್ರಾ (28) ಎಂದು ಗುರುತಿಸಲಾಗಿದೆ.

Gangster Death: ಕೆನಡಾದಲ್ಲಿ ಪಂಜಾಬ್ ಮೂಲದ ಗ್ಯಾಂಗ್​ಸ್ಟರ್​ನನ್ನು ಗುಂಡಿಕ್ಕಿ ಹತ್ಯೆ
ಗ್ಯಾಂಗ್​ಸ್ಟರ್
Follow us
ನಯನಾ ರಾಜೀವ್
|

Updated on:May 29, 2023 | 12:50 PM

ಕೆನಡಾದಲ್ಲಿ ಪಂಜಾಬ್​ ಮೂಲದ ಗ್ಯಾಂಗ್​ಸ್ಟರ್(Gangster)​ನನ್ನು ಹತ್ಯೆ ಮಾಡಲಾಗಿದೆ. ಮದುವೆಯ ರಿಸೆಪ್ಷನ್ ಸಮಯದಲ್ಲಿ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೊಲೆಯಾದ ದರೋಡೆಕೋರನನ್ನು ಅಮರ್‌ಪ್ರೀತ್ ಸಮ್ರಾ (28) ಎಂದು ಗುರುತಿಸಲಾಗಿದೆ. ಪಂಜಾಬ್ ಮೂಲದ ವ್ಯಕ್ತಿಯನ್ನು ಕೆನಡಾದ ವ್ಯಾಂಕೋವರ್ ನಗರದ ಮದುವೆ ಮನೆಯಲ್ಲಿ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸ್ಥಳೀಯ ಪತ್ರಿಕೆ ವ್ಯಾಂಕೋವರ್ ಸನ್‌ನಲ್ಲಿನ ವರದಿಯ ಪ್ರಕಾರ, ಅಮರ್‌ಪ್ರೀತ್ (ಚುಕ್ಕಿ) ಸಮ್ರಾ ಫ್ರೇಸರ್ ಸ್ಟ್ರೀಟ್‌ನಲ್ಲಿ ಪಾರ್ಟಿಯಲ್ಲಿ ಭಾಗವಹಿಸಲು ಹೋಗಿದ್ದರು.

ಘಟನೆ ನಡೆಯುವ ಅರ್ಧ ಗಂಟೆ ಮೊದಲು ಫ್ರೇಸರ್‌ವ್ಯೂ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮದುವೆಗೆ ಬಂದ ಅತಿಥಿಗಳೊಂದಿಗೆ ನೃತ್ಯ ಮಾಡುತ್ತಿದ್ದರು. ಪೊಲೀಸರ ಪ್ರಕಾರ, ಅಮರ್‌ಪ್ರೀತ್ ಸಮ್ರಾ ಅವರ ಹಿರಿಯ ಸಹೋದರ ರವೀಂದರ್ ಕೂಡ ಗ್ಯಾಂಗ್​ಸ್ಟರ್.. ಇಬ್ಬರೂ ಆರತಕ್ಷತೆ ಕಾರ್ಯಕ್ರಮಕ್ಕಾಗಿ ಇಲ್ಲಿಗೆ ಬಂದಿದ್ದರು.

ಸಮ್ರಾ ಮತ್ತು ಅವರ ಅಣ್ಣ, ದರೋಡೆಕೋರ ರವೀಂದರ್ ಇಬ್ಬರೂ ಮದುವೆಗೆ ಅತಿಥಿಗಳಾಗಿ ಆಹ್ವಾನಿತರಾಗಿದ್ದರು. ಕೆಲವು ಅಪರಿಚಿತ ವ್ಯಕ್ತಿಗಳು ಫ್ರೇಸರ್‌ವ್ಯೂ ಬ್ಯಾಂಕ್ವೆಟ್ ಹಾಲ್‌ಗೆ ಪ್ರವೇಶಿಸಿದರು ಮತ್ತು ಸಂಗೀತವನ್ನು ನಿಲ್ಲಿಸಲು ಡಿಜೆಯನ್ನು ಕೇಳಿದರು ಎಂದು ಕೆಲವು ಅತಿಥಿಗಳು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಮತ್ತಷ್ಟು ಓದಿ: Gangster Tillu Tajpuriya Murder: ತಿಹಾರ್ ಜೈಲಿನಲ್ಲಿ ಗ್ಯಾಂಗ್​ಸ್ಟರ್ ತಿಲ್ಲು ತಾಜ್​ಪುರಿಯಾ ಹತ್ಯೆ

ಈ ಸಂದರ್ಭದಲ್ಲಿ, ಸುಮಾರು 60 ಅತಿಥಿಗಳು ಆರತಕ್ಷತೆಯಲ್ಲಿ ಉಪಸ್ಥಿತರಿದ್ದರು. ಅವರಲ್ಲಿ ದುಷ್ಕರ್ಮಿಗಳು ಅಮರಪ್ರೀತ್ ಸಮ್ರಾ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ.

ಫ್ರೇಸರ್ ಸ್ಟ್ರೀಟ್ ಮತ್ತು ಸೌತ್ ಈಸ್ಟ್ ಮೆರೈನ್ ಡ್ರೈವ್ ಬಳಿಯ ಸೌತ್ ವ್ಯಾಂಕೋವರ್ ಬ್ಯಾಂಕ್ವೆಟ್ ಹಾಲ್‌ನ ಹೊರಗೆ ಅಮರ್‌ಪ್ರೀತ್ ಸಮ್ರಾಗೆ 1.30ರ ವೇಳೆಗೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.

ಸ್ಥಳದಲ್ಲಿದ್ದವರು ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿಯ ಮೇರೆಗೆ, ಗಸ್ತು ಅಧಿಕಾರಿಗಳು ಅರೆವೈದ್ಯರು ಬರುವವರೆಗೂ ಸಂತ್ರಸ್ತರಿಗೆ CPR ಕೊಟ್ಟರೂ ಕೂಡ ಉಳಿಸಿಕೊಳ್ಳಲಾಗಲಿಲ್ಲ.

ಕೆನಡಾದ ಪೊಲೀಸರು 11 ಗ್ಯಾಂಗ್​ಸ್ಟರ್​ಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು, ಅದರಲ್ಲಿ ಅಮರ್‌ಪ್ರೀತ್ ಮತ್ತು ಅವರ ಸಹೋದರ ರವೀಂದರ್ ಕೂಡ ಸೇರಿದ್ದಾರೆ. ಪಟ್ಟಿಯಲ್ಲಿರುವ 11 ಗ್ಯಾಂಗ್​ಸ್ಟರ್​ಗಳ ಪೈಕಿ 9 ಮಂದಿ ಪಂಜಾಬ್ ಮೂಲದವರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:49 pm, Mon, 29 May 23