AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gangster Tillu Tajpuriya Murder: ತಿಹಾರ್ ಜೈಲಿನಲ್ಲಿ ಗ್ಯಾಂಗ್​ಸ್ಟರ್ ತಿಲ್ಲು ತಾಜ್​ಪುರಿಯಾ ಹತ್ಯೆ

ತಿಹಾರ್​ ಜೈಲಿನಲ್ಲಿ ಮತ್ತೊಮ್ಮೆ ಗ್ಯಾಂಗ್​ವಾರ್​(Gang War)ನಡೆದಿದ್ದು, ಗ್ಯಾಂಗ್​ಸ್ಟರ್ ತಿಲ್ಲು ತಾಜ್​ಪುರಿಯಾನನ್ನು ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Gangster Tillu Tajpuriya Murder: ತಿಹಾರ್ ಜೈಲಿನಲ್ಲಿ ಗ್ಯಾಂಗ್​ಸ್ಟರ್ ತಿಲ್ಲು ತಾಜ್​ಪುರಿಯಾ ಹತ್ಯೆ
ಗ್ಯಾಂಗ್​ಸ್ಟರ್ ತಿಲ್ಲು
Follow us
ನಯನಾ ರಾಜೀವ್
|

Updated on: May 02, 2023 | 9:08 AM

ತಿಹಾರ್​ ಜೈಲಿನಲ್ಲಿ ಮತ್ತೊಮ್ಮೆ ಗ್ಯಾಂಗ್​ವಾರ್​(Gang War)ನಡೆದಿದ್ದು, ಗ್ಯಾಂಗ್​ಸ್ಟರ್ ತಿಲ್ಲು ತಾಜ್​ಪುರಿಯಾನನ್ನು ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಇಂದು ಬೆಳಗ್ಗೆ 6.15ರ ಸುಮಾರಿಗೆ ಜೈಲಿನ 4 ಕೈದಿಗಳು ತಿಲ್ಲು ತಾಜ್‌ಪುರಿಯ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಎಲ್ಲಾ ದಾಳಿಕೋರರು ಗೋಗಿ ಗ್ಯಾಂಗ್‌ನವರು ಎಂದು ಹೇಳಲಾಗುತ್ತಿದೆ, ವಾಸ್ತವವಾಗಿ ರೋಹಿಣಿ ನ್ಯಾಯಾಲಯದಲ್ಲಿ ಜಿತೇಂದ್ರ ಗೋಗಿಯನ್ನು ಕೊಲೆ ಮಾಡಿದ ಆರೋಪವನ್ನು ತಿಲ್ಲು ಎದುರಿಸುತ್ತಿದ್ದ.

ಹಲ್ಲೆ ಬಳಿಕ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು, ಆದರೆ ವೈದ್ಯರು ಆತ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ತಿಲ್ಲು ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿ ಹೆಸರು ಯೋಗೇಶ್ ತುಂಡ ಎಂದು ಹೇಳಲಾಗಿದೆ, ತಿಲ್ಲು ತಾಜ್‌ಪುರಿಯ ವಿರುದ್ಧ ಕೊಲೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ. ರೋಹಿಣಿ ಕೋರ್ಟ್‌ನ ಕೋರ್ಟ್‌ ಕೊಠಡಿಯಲ್ಲಿ ಗ್ಯಾಂಗ್​ಸ್ಟರ್ ಜಿತೇಂದ್ರ ಗೋಗಿ ಹತ್ಯೆ ಪ್ರಕರಣದಲ್ಲಿ ತಿಲ್ಲು ಕೈವಾಡವಿದೆ.

ಮತ್ತಷ್ಟು ಓದಿ:ಶಿವಮೊಗ್ಗ: ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ; ಒಂದೇ ವಾರದಲ್ಲಿ ಎರಡು ಖೈದಿಗಳ ಸಾವು

ಈ ಸಂದರ್ಭದಲ್ಲಿ, ದೆಹಲಿ ಪೊಲೀಸರು ತಿಲ್ಲು ಗ್ಯಾಂಗ್‌ನ ಇಬ್ಬರು ಶೂಟರ್‌ಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದರು. ಜಿತೇಂದ್ರ ಗೋಗಿ ಮತ್ತು ತಿಲ್ಲು ತಾಜ್‌ಪುರಿಯಾ ಕಾಲೇಜು ದಿನಗಳಿಂದಲೂ ದ್ವೇಷ ಹೊಂದಿದ್ದರು, ಪರಸ್ಪರ ಹಲ್ಲೆ ನಡೆಸುತ್ತಿದ್ದರು.

ದೆಹಲಿ ಕೋರ್ಟ್​ನಲ್ಲಿ ಫೈರಿಂಗ್: ಜೈಲಿನಲ್ಲಿದ್ದೇ ಲೈವ್ ಅಪ್​ಡೇಟ್ಸ್​ ಪಡೆಯುತ್ತಿದ್ದ ಗ್ಯಾಂಗ್​ಸ್ಟರ್​

ಗ್ಯಾಂಗ್ ವಾರ್‌ನಲ್ಲಿ ಎರಡೂ ಗ್ಯಾಂಗ್‌ಗಳ ಹತ್ತಾರು ಜನರು ಪ್ರಾಣ ಕಳೆದುಕೊಂಡಿದ್ದರು. ತಿಲ್ಲು ವಿರುದ್ಧ ಕೊಲೆ, ಅಕ್ರಮ ಆಸ್ತಿ ಮತ್ತು ಸುಲಿಗೆ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳು ದಾಖಲಾಗಿವೆ.

ದರೋಡೆಕೋರ ಜಿತೇಂದ್ರ ಗೋಗಿ ಮತ್ತು ತಿಲ್ಲು ಉತ್ತಮ ಸ್ನೇಹಿತರಾಗಿದ್ದರು ಎಂದು ಹೇಳಲಾಗುತ್ತದೆ. ಆದರೆ, ಕಾಲೇಜು ಚುನಾವಣೆ ವೇಳೆ ಇಬ್ಬರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಇದಕ್ಕೆ ಕಾರಣವೂ ಇತ್ತು. ಏಕೆಂದರೆ ಇಬ್ಬರೂ ಬೇರೆ ಬೇರೆ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದರು. ಕಾಲೇಜು ಬಿಟ್ಟ ಮೇಲೆ ಇಬ್ಬರೂ ಪಾತಕ ಲೋಕಕ್ಕೆ ಕಾಲಿಟ್ಟಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ