AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಕೋರ್ಟ್​ನಲ್ಲಿ ಫೈರಿಂಗ್: ಜೈಲಿನಲ್ಲಿದ್ದೇ ಲೈವ್ ಅಪ್​ಡೇಟ್ಸ್​ ಪಡೆಯುತ್ತಿದ್ದ ಗ್ಯಾಂಗ್​ಸ್ಟರ್​

ಶೂಟೌಟ್​ಗೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಕುಖ್ಯಾತ ಗ್ಯಾಂಗ್​ಸ್ಟರ್ ತಿಲ್ಲು ತಾಜ್​ಪುರಿಯಾ ತನ್ನ ಸಹಚರರಿಂದ ಲೈವ್ ಅಪ್​ಡೇಟ್ಸ್​ ಪಡೆದುಕೊಳ್ಳುತ್ತಿದ್ದ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.

ದೆಹಲಿ ಕೋರ್ಟ್​ನಲ್ಲಿ ಫೈರಿಂಗ್: ಜೈಲಿನಲ್ಲಿದ್ದೇ ಲೈವ್ ಅಪ್​ಡೇಟ್ಸ್​ ಪಡೆಯುತ್ತಿದ್ದ ಗ್ಯಾಂಗ್​ಸ್ಟರ್​
ಕುಖ್ಯಾತ ಗ್ಯಾಂಗ್​ಸ್ಟರ್ ತಿಲ್ಲು ತಾಜ್​ಪುರಿಯಾ ಹಾಗೂ ಹತ ಜಿತೇಂದರ್ ಮಾನ್ ಗೋಗಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Sep 27, 2021 | 5:27 PM

Share

ದೆಹಲಿ: ದೆಹಲಿಯ ರೋಹಿಣಿ ನ್ಯಾಯಾಲಯ ಸಮುಚ್ಚಯದಲ್ಲಿ ಶುಕ್ರವಾರ ನಡೆದ ಶೂಟೌಟ್​ಗೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಕುಖ್ಯಾತ ಗ್ಯಾಂಗ್​ಸ್ಟರ್ ತಿಲ್ಲು ತಾಜ್​ಪುರಿಯಾ ತನ್ನ ಸಹಚರರಿಂದ ಲೈವ್ ಅಪ್​ಡೇಟ್ಸ್​ ಪಡೆದುಕೊಳ್ಳುತ್ತಿದ್ದ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ. 30ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಜಿತೆಂದರ್ ಮಾನ್ ಗೋಗಿ ಈ ಶೂಟೌಟ್​ನಲ್ಲಿ ಮೃತಪಟ್ಟಿದ್ದ. ವಕೀಲರ ವೇಷದಲ್ಲಿ ನ್ಯಾಯಾಲಯದ ಆವರಣ ಪ್ರವೇಶಿಸಿದ್ದ ಹಂತಕರು ವಿಶೇಷ ಭದ್ರತೆಯಲ್ಲಿ ಕರೆತಂದಿದ್ದ ಗೋಗಿಯ ಮೇಲೆ ಗುಂಡು ಹಾರಿಸಿದ್ದರು. ಈ ವೇಳೆ ಪೊಲೀಸರು ಹಾರಿಸಿದ್ದ ಗುಂಡಿಗೆ ಹಂತಕರು ಬಲಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ನಂತರ ಬಂಧಿಸಿದ್ದರು.

ರೋಹಿಣಿ ಕೋರ್ಟ್​ನಲ್ಲಿ ಹತ್ಯೆ ನಡೆಯುವಾಗ ತಿಲ್ಲು ತಾಜ್​ಪುರಿಯಾ ತನ್ನ ಸಹಚರರಾದ ರಾಹುಲ್ ತ್ಯಾಗಿ ಮತ್ತು ಜಗದೀಪ್ ಜಗ್ಗ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಅತಿ ಹೆಚ್ಚು ಭದ್ರತೆ ಹೊಂದಿರುವ ದೆಹಲಿಯ ತಿಹಾರ್ ಜೈಲಿನಲ್ಲಿ ತಿಲ್ಲುಗೆ ಫೋನ್ ಸಿಕ್ಕಿತ್ತು, ಅದನ್ನು ಬಳಸಿ ಅವನು ಕೊಲೆಯನ್ನು ನಿರ್ವಹಿಸಿದ ಎನ್ನುವುದು ಕೋರ್ಟ್​ನಲ್ಲಿ ನಡೆದ ಶೂಟೌಟ್​ಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿರೋಧಿಯನ್ನು ಕೊಲ್ಲಲು ಹೋಗಿದ್ದ ಹಂತಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ತಿಲ್ಲು ಪ್ರತಿ ನಿಮಿಷಕ್ಕೊಮ್ಮೆ ಫೋನ್ ಮೂಲಕ ಅಪ್​ಡೇಟ್ಸ್​ ಪಡೆಯುತ್ತಿದ್ದ. ರೋಹಿಣಿ ಕೋರ್ಟ್​ನಿಂದ ಅವರು ಎಷ್ಟು ದೂರದಲ್ಲಿದ್ದಾರೆ ಎಂದು ಪ್ರಶ್ನಿಸಿದ್ದ. ಇದೀಗ ಬಂಧನದಲ್ಲಿರುವ ವಿನಯ್ ಮತ್ತು ಉಮಂಗ್ ಎಂಬ ಇನ್ನಿಬ್ಬರೊಂದಿಗೂ ತಿಲ್ಲು ಸಂಪರ್ಕದಲ್ಲಿದ್ದ. ತಿಲ್ಲುಗೆ ತಾಜಾ ಅಪ್​ಡೇಟ್ಸ್​ ಕೊಡಲೆಂದೇ ಇವರಿಬ್ಬರು ನ್ಯಾಯಾಲಯಕ್ಕೆ ಬಂದಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ

ಶೂಟರ್​ಗಳ ಸುತ್ತಲೂ ಪೊಲೀಸರು ಇದ್ದಾರೆ ಎಂದು ತಿಳಿದ ನಂತರ ತಿಲ್ಲು ಹೆದರಿದ್ದ. ಕೊಲ್ಲಲು ಹೋಗಿದ್ದ ತನ್ನ ಸಹಚರರು ಹೊರಬರುವುದು ಕಷ್ಟ ಎಂದು ಅರಿವಾದ ನಂತರ, ನ್ಯಾಯಾಲಯದ ಆವರಣದಲ್ಲಿದ್ದ ಇನ್ನಿಬ್ಬರಿಗೆ ಅಲ್ಲಿಂದ ಹೊರಗೆ ಬರುವಂತೆ ಸೂಚಿಸಿದ್ದ. ರೋಹಿಣಿ ಕೋರ್ಟ್​ನ ಪಾರ್ಕಿಂಗ್​ ಲಾಟ್​ ಹತ್ತಿರಕ್ಕೆ ಬಂದಿದ್ದೇವೆ ಎಂದು ಅವರು ಹೇಳಿದಾಗ, ತಕ್ಷಣ ಅಲ್ಲಿಂದ ಓಡಿಹೋಗುವಂತೆ ಸೂಚಿಸಿದ್ದ.

ನ್ಯಾಯಾಲಯದ ಆವರಣಕ್ಕೆ ಶಸ್ತ್ರದೊಂದಿಗೆ ರೌಡಿಗಳು ಪ್ರವೇಶಿಸಿದ್ದ ಸಂಗತಿ ಭದ್ರತೆಯ ಲೋಪ ಎನಿಸಿಕೊಂಡಿದೆ. ರೌಡಿ ಗುಂಪಿನ ನಾಯಕನೊಬ್ಬ ಹೀಗೆ ಹತ್ಯೆಯನ್ನು ಯೋಜಿಸಿ ಫೋನ್ ಮೂಲಕ ಅದನ್ನು ಜೈಲಿನಿಂದಲೇ ನಿರ್ವಹಿಸಿದ್ದ ಸಂಗತಿ ಪೊಲೀಸರ ವೈಫಲ್ಯದತ್ತ ಬೊಟ್ಟುಮಾಡಿ ತೋರಿಸಿದೆ. ಏಷ್ಯಾದ ಅತಿದೊಡ್ಡ ಜೈಲಿನಲ್ಲಿ ಭದ್ರತಾ ಲೋಪವಾಗಿರುವ ಸಂಗತಿ ಎಲ್ಲರ ಗಮನ ಸೆಳೆದಿದೆ.

ಗ್ಯಾಂಗ್​​ಸ್ಟರ್​ ಬಳಿಯಿದ್ದ ಮೊಬೈಲ್ ಫೋನ್ ಅನ್ನು ಕೊಲೆಗೆ ಮೊದಲೇ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರೆ ಈ ದುಷ್ಕೃತ್ಯ ತಡೆಯಬಹುದಿತ್ತು. ಕಾಲೇಜಿನಲ್ಲಿ ಸ್ನೇಹಿತರಾಗಿದ್ದ ಗೊಗಿ ಮತ್ತು ತಿಲ್ಲು ನಂತರದ ದಿನಗಳಲ್ಲಿ ಹಫ್ತಾ ವಸೂಲಿ ದಂಧೆಗೆ ಇಳಿದಿದ್ದರು. ಹತ್ತಾರು ವರ್ಷಗಳಿಂದ ಚಾಲ್ತಿಯಲ್ಲಿದ್ದ ಎರಡೂ ಗುಂಪುಗಳ ವೈಷಮ್ಯ ಹಲವು ಜೀವಗಳನ್ನು ಬಲಿ ಪಡೆದುಕೊಂಡಿತ್ತು.

(Jailed Gangster Got Live Updates On murder Of Rival Delhi Court Firing Rivalary between Tillu Tajpuriya and Jitender Maan Gogi)

ಇದನ್ನೂ ಓದಿ: ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ: ಎದುರಾಳಿಯಿಂದ ಗ್ಯಾಂಗ್​​ಸ್ಟರ್ ಜಿತೇಂದರ್ ಗೋಗಿ ಹತ್ಯೆ, 3 ಸಾವು

ಇದನ್ನೂ ಓದಿ: Crime News: ತಂದೆ, ತಾಯಿ, ದೊಡ್ಡಪ್ಪನಿಂದಲೇ ಮಗಳ ಹತ್ಯೆ; ಪರ್ವಿನಾ ಕೊಲೆ ರಹಸ್ಯ ಬಯಲು ಮಾಡಿದ ಪೊಲೀಸರು

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ