ಮಹಾರಾಷ್ಟ್ರದ ವಿವಿಧೆಡೆ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯಾಚರಣೆ: 300 ಕೋಟಿ ಅಕ್ರಮ ನಗದು ಪತ್ತೆ
ಆದಾಯ ತೆರಿಗೆ ಇಲಾಖೆಯು ಮಹಾರಾಷ್ಟ್ರದ ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸಿ ಜಾಲ್ನಾ ಮೂಲದ ನಾಲ್ಕು ಸ್ಟೀಲ್ ರೋಲಿಂಗ್ ಮಿಲ್ಸ್ ಘಟಕಗಳಲ್ಲಿ ಈಚೆಗೆ ಶೋಧ ಕಾರ್ಯಾಚರಣೆ ನಡೆಸಿತು
ಮುಂಬೈ: ಆದಾಯ ತೆರಿಗೆ ಇಲಾಖೆಯು ಮಹಾರಾಷ್ಟ್ರದ ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸಿ ಜಾಲ್ನಾ ಮೂಲದ ನಾಲ್ಕು ಸ್ಟೀಲ್ ರೋಲಿಂಗ್ ಮಿಲ್ಸ್ ಘಟಕಗಳಲ್ಲಿ ಈಚೆಗೆ ಶೋಧ ಕಾರ್ಯಾಚರಣೆ ನಡೆಸಿತು. ಕಬ್ಬಿಣದ ಸ್ಕ್ರಾಪ್ನಿಂದ ಸ್ಟೀಲ್ ಟಿಎಂಟಿ ಕಂಬಿಗಳನ್ನು ತಯಾರಿಸುವ ಘಟಕಗಳನ್ನು ಈ ಕಂಪನಿಗಳು ಹೊಂದಿದ್ದವು. ಜಾಲ್ನಾ, ಔರಂಗಾಬಾದ್, ಪುಣೆ, ಮುಂಬೈ ಮತ್ತು ಕೊಲ್ಕತ್ತಾ ಸೇರಿದಂತೆ 32 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಯಿತು.
ಆದಾಯ ತೆರಿಗೆ ಇಲಾಖೆಯ ಶೋಧ ಕಾರ್ಯಾಚರಣೆಯ ವೇಳೆ ಹಲವು ದಾಖಲೆಗಳು, ಬಿಡಿ ಪತ್ರಗಳು ಡಿಜಿಟಲ್ ದಾಖಲೆಗಳನ್ನು ಸಂಗ್ರಹಿಸಲಾಯಿತು. ಕಂಪನಿಯು ಲೆಕ್ಕಪತ್ರಗಳನ್ನು ನಿರ್ವಹಿಸದೇ ದೊಡ್ಡಮಟ್ಟದಲ್ಲಿ ವ್ಯವಹಾರ ನಡೆಸುತ್ತಿರುವುದು ಪತ್ತೆಯಾಗಿದೆ. ಕೆಲ ಕಚ್ಚಾಸಾಮಗ್ರಿಗಳನ್ನು ಹೆಚ್ಚು ಬೆಲೆ ತೆತ್ತು ಖರೀದಿಸಿದ್ದಾರೆ. ದೊಡ್ಡಮಟ್ಟದ ಹಣಕಾಸು ವಹಿವಾಟುಗಳನ್ನು ಲೆಕ್ಕಪತ್ರದ ಪುಸ್ತಕಗಳಲ್ಲಿ ನಮೂದಿಸದೆ ನಿರ್ವಹಿಸಿದ್ದಾರೆ. ಸಮರ್ಪಕ ರೀತಿಯಲ್ಲಿ ನಮೂದಿಸದೆ ನಗದು ವ್ಯವಹಾರ ನಿರ್ವಹಿಸಿರುವುದು ಪತ್ತೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಶೆಲ್ ಕಂಪನಿಗಳ ಹೆಸರು ಬಳಸಿಕೊಂಡು ದೊಡ್ಡಮಟ್ಟದ ಶೇರ್ ಪ್ರೀಮಿಯಂ ಯಾವುದೇ ಭದ್ರತೆಯಿಲ್ಲದೆ ಕೊಟ್ಟಿರುವ ಸಾಲಗಳಂತೆ ಲೆಕ್ಕ ತೋರಿಸಲಾಗಿದೆ. ₹ 200 ಕೋಟಿಗೂ ದೊಡ್ಡಮೊತ್ತದ ವಹಿವಾಟವನ್ನು ಲೆಕ್ಕಪತ್ರಗಳಲ್ಲಿ ನಮೂದಿಸದೇ ವಹಿವಾಟು ನಡೆಸಲಾಗಿದೆ. ಲೆಕ್ಕದಲ್ಲಿ ನಮೂದಾಗದೆ ಉತ್ಪಾದನೆಯಾಗಿರುವ ದಾಸ್ತಾನು ದೊಡ್ಡಮಟ್ಟದಲ್ಲಿ ಇದ್ದುದು ಸಹ ಈ ಕಂಪನಿಗಳ ಕಾರ್ಖಾನೆ ಆವರಣದಲ್ಲಿ ಪತ್ತೆಯಾಗಿತ್ತು.
ಕಾರ್ಯಾಚರಣೆ ವೇಳೆ 12 ಬ್ಯಾಂಕ್ ಲಾಕರ್ಗಳು ಪತ್ತೆಯಾದವು. ಯಾವುದೇ ಲೆಕ್ಕಕ್ಕೆ ಸಿಗದ ₹ 2.10 ಕೋಟಿ ನಗದು ಮತ್ತು ₹ 1.07 ಕೋಟಿ ಮೊತ್ತದ ಚಿನ್ನಾಭರಣಗಳನ್ನು ಆದಾಯ ತೆರಿಗೆ ಇಲಾಖೆಯು ವಿವಿಧ ಸ್ಥಳಗಳಲ್ಲಿ ವಶಪಡಿಸಿಕೊಂಡಿದೆ. ಪತ್ತೆಯಾಗಿರುವ ಲೆಕ್ಕಪತ್ರವಿಲ್ಲದ ನಗದು ₹ 300 ಕೋಟಿಯಷ್ಟು ಸಿಕ್ಕಿದೆ. ಶೋಧ ಕಾರ್ಯಾಚರಣೆಗೆ ಸಂಬಂಧಿಸಿದಂತೆ ₹ 71 ಕೋಟಿ ಮೊತ್ತದಷ್ಟು ಆದಾಯಕ್ಕೆ ನಾಲ್ಕು ಕಂಪನಿಗಳು ಲೆಕ್ಕ ಕೊಟ್ಟಿವೆ. ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಇನ್ನಷ್ಟು ತನಿಖೆ ಪ್ರಗತಿಯಲ್ಲಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
(Income Tax Department conducts searches in Maharashtra more than 300 crore unaccounted amount found)
ಇದನ್ನೂ ಓದಿ: GST Filing: ಜಿಎಸ್ಟಿ ಮರುಪಾವತಿಗೆ ಕ್ಲೇಮ್ ಮಾಡುವುದಕ್ಕೆ ತೆರಿಗೆದಾರರ ಆಧಾರ್ ದೃಢೀಕರಣ ಕಡ್ಡಾಯಗೊಳಿಸಿದ ಸಿಬಿಐಸಿ
ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31ರ ತನಕ ಕಾಲಾವಧಿ ವಿಸ್ತರಣೆ
Published On - 4:10 pm, Mon, 27 September 21