Amazon: ಅಮೆಜಾನ್ ಅಂದರೆ ಈಸ್ಟ್ ಇಂಡಿಯಾ 2.0: ಆರ್​ಎಸ್​ಎಸ್​ ಮುಖವಾಣಿ ಪಾಂಚಜನ್ಯ ಆರೋಪ

Panchajanya: ಅಮೆಜಾನ್ ವಿರುದ್ಧ ಕಠಿಣ ತನಿಖೆಗೂ ಸಹ ಆರ್​ಎಸ್​ಎಸ್​ ಮುಖವಾಣಿ ಪಾಂಚಜನ್ಯ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಆಗ್ರಹಿಸಿದೆ.

Amazon: ಅಮೆಜಾನ್ ಅಂದರೆ ಈಸ್ಟ್ ಇಂಡಿಯಾ 2.0: ಆರ್​ಎಸ್​ಎಸ್​ ಮುಖವಾಣಿ ಪಾಂಚಜನ್ಯ ಆರೋಪ
ಅಮೆಜಾನ್ ಕಂಪೆನಿ ಸಹ ಸಂಸ್ಥಾಪಕ ಜೆಫ್​ ಬೆಜೋಸ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Oct 01, 2021 | 6:10 PM

ಮುಂಬೈ: ಅಮೆಜಾನ್ ಕಂಪನಿಯನ್ನು ‘ಈಸ್ಟ್ ಇಂಡಿಯಾ ಕಂಪನಿ 2.0’ ಎಂದು ಹೋಲಿಕೆ ಮಾಡಿ ಆರ್​ಎಸ್​ಎಸ್​ ಮುಖವಾಣಿ ಪಾಂಚಜನ್ಯ ಪತ್ರಿಕೆಯಲ್ಲಿ ಕವರ್ ಸ್ಟೋರಿ ಪ್ರಕಟಿಸಲಾಗಿದೆ. ಅಕ್ಟೋಬರ್ 3ರಂದು ಮಾರುಕಟ್ಟೆಗೆ ಬರಲಿರುವ ಸಂಚಿಕೆಯಲ್ಲಿ ಈ ಲೇಖನ ಪ್ರಕಟಿಸಲಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಲು ಅಮೆಜಾನ್ ಯತ್ನಿಸುತ್ತಿದೆ. ಅಮೆಜಾನ್ ಪ್ರೈಮ್​ ವೇದಿಕೆಯಲ್ಲಿ ಭಾರತದ ಸಂಸ್ಕೃತಿಗೆ ವಿರುದ್ಧವಾದ ಸಿನಿಮಾಗಳಿಗೆ ಅವಕಾಶ ಮಾಡಿಕೊಡುತ್ತಿದೆ ಎಂದು ಲೇಖನದಲ್ಲಿ ಆರೋಪಿಸಲಾಗಿದೆ.

ಅಮೆಜಾನ್ ಭಾರತದಲ್ಲಿ ತನಗೆ ಅನುಕೂಲವಾಗುವಂತಹ ನೀತಿಗಳನ್ನು ರೂಪಿಸಲು ಕೋಟಿಗಟ್ಟಲೇ ಲಂಚ ನೀಡಿದೆ ಎಂದು ಲೇಖನದಲ್ಲಿ ದೂರಲಾಗಿದೆ.   18 ನೇ ಶತಮಾನದಲ್ಲಿ ಈಸ್ಟ್ ಇಂಡಿಯಾ ಕಂಪನಿ ಭಾರತ ಆಕ್ರಮಿಸಿಕೊಳ್ಳಲು ಮಾಡಿದ್ದನ್ನೇ ಈಗ ಆಮೆಜಾನ್ ಕಂಪನಿ ಮಾಡುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿನ ಬಹುಸ್ವಾಮ್ಯವನ್ನು ಮುರಿದು ಏಕಸ್ವಾಮ್ಯ ಸಾಧಿಸಲು ಯತ್ನಿಸುತ್ತಿದೆ ಎಂದು ಪಾಂಚಜನ್ಯ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಆರೋಪಿಸಲಾಗಿದೆ. ಅಲ್ಲದೇ ಅಮೆಜಾನ್ ವಿರುದ್ಧ ಕಠಿಣ ತನಿಖೆಗೂ ಸಹ ಆರ್​ಎಸ್​ಎಸ್​ ಮುಖವಾಣಿ ಪಾಂಚಜನ್ಯ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಆಗ್ರಹಿಸಿದೆ.

ಇನ್ಫೋಸಿಸ್ ಮೇಲೂ ಆರೋಪಿಸಿದ್ದ ಪಾಂಚಜನ್ಯ ಬೆಂಗಳೂರು ಮೂಲದ ಸಾಫ್ಟ್​ವೇರ್​ ಕಂಪೆನಿಯಾದ ಇನ್ಫೋಸಿಸ್ ಕಳೆದ ಕೆಲ ತಿಂಗಳಿಂದ ಸುದ್ದಿಯಲ್ಲಿದೆ. ಅದರಲ್ಲೂ ಆದಾಯ ತೆರಿಗೆ ಪೋರ್ಟಲ್ ಮತ್ತು ಜಿಎಸ್​ಟಿ ಪೋರ್ಟಲ್​ನ ಹೊಸ ವೆಬ್​ಸೈಟ್​ನಲ್ಲಿ ತಾಂತ್ರಿಕ ಸಮಸ್ಯೆ ಮೊದಲ ದಿನದಿಂದಲೇ ಕಾಣಿಸಿಕೊಂಡ ಮೇಲೆ ಇದು ಉದ್ಭವಿಸಿದೆ. ಏಕೆಂದರೆ ಆ ವೆಬ್​ಪೋರ್ಟಲ್ ಅಭಿವೃದ್ಧಿಯ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದು ಇನ್ಫೋಸಿಸ್ ಕಂಪೆನಿ. ಅದಕ್ಕಾಗಿ ಭಾರತ ಸರ್ಕಾರ ಕೋಟ್ಯಂತರ ರೂಪಾಯಿಯ ಒಪ್ಪಂದ ಸಹ ಮಾಡಿಕೊಂಡಿತ್ತು. ಆದರೆ ಆ ವೆಬ್​ಪೋರ್ಟಲ್ ಬಳಕೆಗೆ ಬಿಡುಗಡೆಯಾದ ದಿನದಿಂದಲೇ ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ. ಇದು ಒತ್ತಟ್ಟಿಗಿರಲಿ, ಈಗ ಅದಕ್ಕೆ ರಾಜಕೀಯ ಬಣ್ಣ ಬಂದಿದೆ. ರಾಷ್ಟ್ರೀಯ ಸ್ವಯಂ ಸೇವಕ್ ಸಂಘ್ (ಆರೆಸ್ಸೆಸ್) ಮುಖವಾಣಿ ಪಾಂಚಜನ್ಯದಿಂದ ಇನ್ಫೋಸಿಸ್ ಕಂಪೆನಿಯನ್ನು ಸಿಕ್ಕಾಪಟ್ಟೆ ಟೀಕಿಸಲಾಗಿದೆ. ಭಾರತದ ಆರ್ಥಿಕ ಹಿತಾಸಕ್ತಿಗೆ ಧಕ್ಕೆ ತರುವ ಉದ್ದೇಶದಿಂದ ದೇಶದ್ರೋಹಿ ಶಕ್ತಿಗಳ ಜತೆಗೂಡಿ ಇನ್ಫೋಸಸ್ ಹೀಗೆ ಮಾಡಿದೆ ಎಂದು ಪಾಂಚಜನ್ಯದಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್, ಈ ಲೇಖನವೇ ದೇಶವಿರೋಧಿ ಹಾಗೂ ಅತಿರೇಕದ್ದು ಎಂದಿದ್ದಾರೆ.

ಇದನ್ನೂ ಓದಿ: 

Amazon: ಅಮೆಜಾನ್​ನಿಂದ ಎರಡು ವರ್ಷಗಳಲ್ಲಿ ಕಾನೂನು ವ್ಯಾಜ್ಯಗಳಿಗೆ 8546 ಕೋಟಿ ರೂ. ಖರ್ಚು ಎನ್ನುತ್ತಿದೆ ವರದಿ

Infosys: ಆರ್ಥಿಕತೆ ಅಸ್ಥಿರಗೊಳಿಸಲು ದೇಶದ್ರೋಹಿಗಳ ಜತೆ ಕೈ ಜೋಡಿಸಿದ ಇನ್ಫೋಸಿಸ್ ಎಂದ ಪಾಂಚಜನ್ಯ; ಏನಿದು ವಿವಾದ?

(Amazon is East India 2.0 wrote RSS linked Panchajanya)

Published On - 2:52 pm, Mon, 27 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ