ಕೇರಳ ಸರ್ಕಾರದ ಉದ್ದೇಶಿತ ಆನ್​​ಲೈನ್ ರಮ್ಮಿ ನಿಷೇಧವನ್ನು ರದ್ದುಗೊಳಿಸಿದ ಹೈಕೋರ್ಟ್

Kerala high court: ರಾಜ್ಯದಲ್ಲಿ ಆನ್‌ಲೈನ್ ರಮ್ಮಿಯನ್ನು ನಿಷೇಧಿಸಲು ಕೋರಿರುವ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌ನ ಏಕ ನ್ಯಾಯಾಧೀಶರ ಪೀಠವು ಕೇರಳದ ಗೇಮಿಂಗ್ ಕಾಯಿದೆ, 1960 ರ ಸೆಕ್ಷನ್ 14 ಎ ಅಡಿಯಲ್ಲಿ ಕೇರಳ ಸರ್ಕಾರವು ಹೊರಡಿಸಿದ ಅಧಿಸೂಚನೆಯ ತಿದ್ದುಪಡಿಯನ್ನು ರದ್ದುಗೊಳಿಸಿದೆ.

ಕೇರಳ ಸರ್ಕಾರದ ಉದ್ದೇಶಿತ ಆನ್​​ಲೈನ್ ರಮ್ಮಿ ನಿಷೇಧವನ್ನು ರದ್ದುಗೊಳಿಸಿದ ಹೈಕೋರ್ಟ್
ಕೇರಳ ಹೈಕೋರ್ಟ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 27, 2021 | 3:53 PM

ದೆಹಲಿ: ಕರ್ನಾಟಕ ಸರ್ಕಾರವು ಬೆಟ್ಟಿಂಗ್ ಮತ್ತು ಬಾಜಿ ಕಟ್ಟುವುದನ್ನುಒಳಗೊಂಡಿರುವ ಆನ್‌ಲೈನ್ ಆಟಗಳನ್ನು ನಿಷೇಧಿಸಲು ಹೊಸ ಶಾಸನವನ್ನು ಸಿದ್ಧಪಡಿಸುತ್ತಿರುವಾಗ, ಕೇರಳ ಹೈಕೋರ್ಟ್ ರಾಜ್ಯದಲ್ಲಿ ಆನ್‌ಲೈನ್ ರಮ್ಮಿಯನ್ನು(online rummy) ನಿಷೇಧಿಸುವ ಕ್ರಮವನ್ನು ರದ್ದುಗೊಳಿಸಿತು.  ರಾಜ್ಯದಲ್ಲಿ ಆನ್‌ಲೈನ್ ರಮ್ಮಿಯನ್ನು ನಿಷೇಧಿಸಲು ಕೋರಿರುವ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌ನ ಏಕ ನ್ಯಾಯಾಧೀಶರ ಪೀಠವು ಕೇರಳದ ಗೇಮಿಂಗ್ ಕಾಯಿದೆ, 1960 ರ ಸೆಕ್ಷನ್ 14 ಎ ಅಡಿಯಲ್ಲಿ ಕೇರಳ ಸರ್ಕಾರವು ಹೊರಡಿಸಿದ ಅಧಿಸೂಚನೆಯ ತಿದ್ದುಪಡಿಯನ್ನು ರದ್ದುಗೊಳಿಸಿದೆ.

ಸೋಮವಾರ ತೆರೆದ ನ್ಯಾಯಾಲಯದಲ್ಲಿ ಪ್ರಕಟವಾದ ತೀರ್ಪನ್ನು ಇನ್ನೂ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿಲ್ಲ. ಗೇಟ್ ವೇ ಟು ಗೇಮಿಂಗ್, ವೆಬ್‌ಸೈಟ್ ನಡೆಸುತ್ತಿರುವ ಗೇಮಿಂಗ್ ಲಾಯರ್ ಜಯ್ ಸಾಯ್ತಾ, ವರ್ಚುವಲ್ ಕೋರ್ಟ್ ಸೆಶನ್‌ನಲ್ಲಿ ಹಾಜರಿದ್ದರು. ಸಂಪೂರ್ಣ ಆದೇಶವನ್ನು ಸದ್ಯಕ್ಕೆ ನಿರೀಕ್ಷಿಸಲಾಗಿದೆ ಎಂದು ಮೂಲವೊಂದು ಹೇಳಿದೆ.

ನ್ಯಾಯಮೂರ್ತಿ ಟಿ.ಆರ್ ರವಿ ಅವರು ಜಂಗ್ಲೀ ಗೇಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಪ್ಲೇ ಗೇಮ್ಸ್ 24×7 ಪ್ರೈ. ಲಿಮಿಟೆಡ್, ಹೆಡ್ ಡಿಜಿಟಲ್ ವರ್ಕ್ಸ್ ಪ್ರೈ. ಲಿಮಿಟೆಡ್, ಮತ್ತು ಗೇಮ್ಸ್ ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಸೇರಿದಂತೆ ನಾಲ್ಕು ಗೇಮಿಂಗ್ ಕಂಪನಿಗಳ ರಿಟ್ ಅರ್ಜಿಗಳನ್ನು ಪರಿಗಣಿಸಿದ ನಂತರ ತೀರ್ಪು ಪ್ರಕಟಿಸಿದರು. ಈ ಕಂಪನಿಗಳು Ace2Three, Junglee Rummy, RummyCircle ಮತ್ತು RummyCulture ವೇದಿಕೆಗಳನ್ನು ನಡೆಸುತ್ತಾರೆ.

ಕೇರಳ ಹೈಕೋರ್ಟ್ ತೀರ್ಪು ಬೇರೆಡೆ ತೀರ್ಪುಗಳ ಮೇಲೆ ಪರಿಣಾಮ ಬೀರದಿದ್ದರೂ, ಆ ರಾಜ್ಯಗಳಲ್ಲಿನ ಮೊಕದ್ದಮೆಗಳಲ್ಲಿ ಕಂಪನಿಗಳು ತಮ್ಮ ವಾದಗಳನ್ನು ದೃಢೀಕರಿಸಲು ಇದನ್ನು ಬಳಸಬಹುದು ಎಂದು ಸಾಯ್ತಾ ಹೇಳಿದರು. ಸೆಪ್ಟೆಂಬರ್ 24 ರಂದು, ಕರ್ನಾಟಕ ಸರ್ಕಾರವು ಕರ್ನಾಟಕ ಪೋಲಿಸ್ ಕಾಯಿದೆಗೆ ತಿದ್ದುಪಡಿ ತರುವ ಪ್ರಸ್ತಾಪವನ್ನು ಮಾಡಿತು ” ಕೌಶಲ್ಯದ ಆಟವನ್ನು ಒಳಗೊಂಡಂತೆ, ಈವೆಂಟ್‌ನ ಅಜ್ಞಾತ ಫಲಿತಾಂಶದ ಮೇಲೆ ಹಣವನ್ನು ಅಪಾಯಕ್ಕೆ ಒಳಪಡಿಸುವ ಯಾವುದೇ ಕ್ರಿಯೆಯನ್ನು ನಿಷೇಧಿಸಲು ಕರ್ನಾಟಕ ಸರ್ಕಾರ ಕೋರಿತ್ತು. ಆಗಸ್ಟ್ 3 ರಂದು, ಮದ್ರಾಸ್ ಹೈಕೋರ್ಟ್ ತಮಿಳುನಾಡು ಗೇಮಿಂಗ್ ಕಾಯಿದೆಗೆ ತಿದ್ದುಪಡಿ ತಳ್ಳಿಹಾಕಿತು. ಇದು ರಾಜ್ಯದಲ್ಲಿ ಆನ್ಲೈನ್ ಗೇಮಿಂಗ್ ಅನ್ನು ನಿಷೇಧಿಸಲು ಪ್ರಯತ್ನಿಸಿತು. ಆದಾಗ್ಯೂ, ನಿಷೇಧದ ಒಂದು ದಿನದ ನಂತರ, ತಮಿಳುನಾಡು ಕಾನೂನು ಸಚಿವ ಎಸ್. ರಘುಪತಿ, ರಾಜ್ಯದಲ್ಲಿ ಆನ್‌ಲೈನ್ ಜೂಜಾಟವನ್ನು ನಿಷೇಧಿಸುವ ಹೊಸ ಕಾನೂನನ್ನು ಸರ್ಕಾರ ರೂಪಿಸಲಿದೆ ಎಂದು ಹೇಳಿದರು.

ತಮಿಳುನಾಡಿನಂತೆ, ಕೇರಳ ಸರ್ಕಾರವು ರಮ್ಮಿ ಸೇರಿದಂತೆ ಆನ್‌ಲೈನ್ ಜೂಜಾಟವನ್ನು ನಿಷೇಧಿಸುವ ಹೊಸ ಶಾಸನವನ್ನು ಪರಿಚಯಿಸಲು ಆಯ್ಕೆ ಮಾಡಬಹುದು. ಇದು ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಬಹುದಾಗಿದೆ.

ಇದನ್ನೂ ಓದಿ: ಆನ್​ಲೈನ್​ನಲ್ಲಿ ರಮ್ಮಿ ಆಡಿದರೆ ಬೀಳತ್ತೆ ಭಾರೀ ದಂಡ, ಜೈಲು ಶಿಕ್ಷೆ!

Published On - 3:21 pm, Mon, 27 September 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ