‘ಕಾಶ್ಮೀರದ ಜನರೀಗ ಸಂತೋಷವಾಗಿದ್ದಾರೆ, ಅವರಿಗೆ ಪ್ರತ್ಯೇಕತಾವಾದಿಗಳ ಆಟ ಅರ್ಥವಾಗಿದೆ‘-ಭಾರತೀಯ ಸೇನೆ ಲೆಫ್ಟಿನೆಂಟ್ ಜನರಲ್
ಮಾಧ್ಯಮಗಳೊಂದಿಗೆ ಮಾತನಾಡುವುದಕ್ಕೂ ಮೊದಲು ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಕಾಶ್ಮೀರದ 10 ಆರ್ಮಿ ಶಾಲೆಗಳಲ್ಲಿ ಡಿಜಿಟಲ್ ತರಗತಿಕೋಣೆಗಳನ್ನು ಉದ್ಘಾಟಿಸಿದರು.
ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಆಡುತ್ತಿರುವ ಆಟವನ್ನು ಇಲ್ಲಿನ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದು ಭಾರತೀಯ ಸೇನೆ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ (Lieutenant General DP Pandey) ಹೇಳಿದ್ದಾರೆ. ಸೇನೆಯ 15 ಕಾರ್ಪ್ಸ್ನ ಜನರಲ್ ಕಮಾಂಡಿಂಗ್ ಅಧಿಕಾರಿಯಾಗಿರುವ ಡಿಪಿ ಪಾಂಡೆ ಇಂದು ಜಮ್ಮು-ಕಾಶ್ಮೀರದ ಬೋನಿಯಾರ್ ಎಂಬಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಶ್ಮೀರದ ಜನರಿಗೆ ಇಲ್ಲಿನ ಪ್ರತ್ಯೇಕತಾವಾದಿಗಳ ಆಟ ಅರ್ಥವಾಗಿದೆ. ಹೀಗಾಗಿ ಎಲ್ಲ ಚಿಂತೆ ಬಿಟ್ಟು ಅವರೂ ಸಂತೋಷವಾಗಿದ್ದಾರೆ. ಅವರ ಮನಸು ಹಾಳುಮಾಡಲು ಈಗ ಯಾವ ಪ್ರತ್ಯೇಕತಾವಾದಿಗಳೂ ಇಲ್ಲ. ಈಗೀಗ ಕಾಶ್ಮೀರದ ಪರಿಸ್ಥಿತಿಯೂ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ.
ಗಡಿ ನಿಯಂತ್ರಣಾ ರೇಖೆ (ಎಲ್ಒಸಿ) ಬಳಿ ಪರಿಸ್ಥಿತಿ ಈಗ ಉತ್ತಮವಾಗಿದೆ. ಅಲ್ಲಿ ಸಾಕಷ್ಟು ಸೈನಿಕರನ್ನು ನಿಯೋಜನೆ ಮಾಡಿ, ಉಗ್ರರ ನುಸುಳುವಿಕೆಯನ್ನು ನಿಯಂತ್ರಿಸಲಾಗಿದೆ. ಎಂತಹ ಪರಿಸ್ಥಿತಿ ಬಂದರೂ ನಾವು ಎದುರಿಸಲು ಸಜ್ಜಾಗಿರುತ್ತೇವೆ. ಕಾಶ್ಮೀರದ ಜನರು ಎಲ್ಒಸಿ ಬಳಿ ಏನಾಗಬಹುದು ಎಂಬ ಚಿಂತೆಯನ್ನು ಬಿಟ್ಟುಬಿಡಬೇಕು ಎಂದು ಹೇಳಿದರು. ಸಣ್ಣಪುಟ್ಟ ದಾಳಿ, ಅವಘಡಗಳು ನಡೆಯುತ್ತಲೇ ಇರುತ್ತವೆ. ಆದರೆ ಕಾಶ್ಮೀರದ ಒಟ್ಟಾರೆ ಪರಿಸ್ಥಿತಿ ಈಗ ಸುಧಾರಿಸಿದೆ. ಇಲ್ಲಿ ಪ್ರವಾಸೋದ್ಯಮವೂ ಅತ್ಯುತ್ತಮವಾಗಿ ಸುಧಾರಿಸಿದೆ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡುವುದಕ್ಕೂ ಮೊದಲು ಕಮಾಂಡರ್ ಕಾಶ್ಮೀರದ 10 ಆರ್ಮಿ ಶಾಲೆಗಳಲ್ಲಿ ಡಿಜಿಟಲ್ ತರಗತಿಕೋಣೆಗಳನ್ನು ಉದ್ಘಾಟಿಸಿದರು. ನಮ್ಮ ಜೀವನದಲ್ಲಿ ಇದೀಗ ಪ್ರತಿ ಕ್ಷೇತ್ರದಲ್ಲೂ ತಂತ್ರಜ್ಞಾನದ ಪ್ರಭಾವ ಆಗುತ್ತಿದೆ. ಹಾಗೇ, ಭಾರತೀಯ ಸೇನೆ ಕೂಡ ತನ್ನ ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ, ಆಧುನಿಕ ಮಾದರಿಯ ಬೋಧನೆ ಮತ್ತು ಕಲಿಕಾ ವಿಧಾನ ಅಳವಡಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ನಿಂದ ಉದ್ಯೋಗ ನಷ್ಟ; ಜೋಗ ಪ್ರವಾಸಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡ ಬಾಗಲಕೋಟೆಯ ಯುವಕರು
IPL 2021: ಮಂಕಾದ ಲಂಕಾ ಸ್ಪಿನ್ನರ್, ಅಬ್ಬರಿಸದ ಟಿಮ್ ಡೇವಿಡ್! ಕೊಹ್ಲಿ ಭರವಸೆಯನ್ನು ಹುಸಿಗೊಳಿಸಿದ ಹೊಸಬರು
(People of Kashmir understood game played by separatists says Indian Army)
Published On - 4:03 pm, Mon, 27 September 21