ಲಾಕ್​ಡೌನ್​ನಿಂದ ಉದ್ಯೋಗ ನಷ್ಟ; ಜೋಗ ಪ್ರವಾಸಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡ ಬಾಗಲಕೋಟೆಯ ಯುವಕರು

ಮೃತಪಟ್ಟ ಇಬ್ಬರು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಕೊವಿಡ್ ಲಾಕ್​ಡೌನ್ ಅವಧಿಯಲ್ಲಿ ಉದ್ಯೋಗ ನಷ್ಟವುಂಟಾಗಿ ಸ್ವಂತ ಊರಾದ ಬನಹಟ್ಟಿಗೆ ಹಿಂದಿರುಗಿದ್ದರು.

ಲಾಕ್​ಡೌನ್​ನಿಂದ ಉದ್ಯೋಗ ನಷ್ಟ; ಜೋಗ ಪ್ರವಾಸಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡ ಬಾಗಲಕೋಟೆಯ ಯುವಕರು
ಎಂತಹುದೇ ಪರಿಸ್ಥಿತಿಯಲ್ಲೂ ಆತ್ಮಹತ್ಯೆಯ ಆಯ್ಕೆ ಬೇಡ
TV9kannada Web Team

| Edited By: guruganesh bhat

Sep 27, 2021 | 3:53 PM

ಶಿವಮೊಗ್ಗ: ಜೋಗ ಜಲಪಾತ ವೀಕ್ಷಿಸಲು ಬಂದಿದ್ದ ಬಾಗಲಕೋಟೆ ಜಿಲ್ಲೆಯ ಇಬ್ಬರು ನಿವಾಸಿಗಳು ಸಾಗರದ ಖಾಸಗಿ ವಸತಿ ಗೃಹವೊಂದರಲ್ಲಿ ಸೆಪ್ಟೆಂಬರ್ 26ರಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಂತೋಷ್ (23) ಮತ್ತು ಬನಹಟ್ಟಿ ಮೂಲದ ಹನುಮಂತ (28) ಮೃತಪಟ್ಟವರು. ಸಾಗರದ ಜೋಗ ಜಲಪಾತ, ಸಿಗಂಧೂರು ಮತ್ತು ಇನ್ನಿತರ ಸ್ಥಳಗಳಿಗೆ ಪ್ರವಾಸಕ್ಕೆಂದು ಇಬ್ಬರು ಆಗಮಿಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.

ಸೆಪ್ಟೆಂಬರ್ 25ರಂದು ಸಾಗರದ ಖಾಸಗಿ ವಸತಿ ಗೃಹಕ್ಕೆ ಆಗಮಿಸಿದ್ದ ಸಂತೋಷ್ ಮತ್ತು ಹನುಮಂತ ತಂಗಿದ್ದ ಕೊಠಡಿಯ ಬಾಗಿಲನ್ನು ವಸತಿ ಗೃಹದ ಸಿಬ್ಬಂದಿ ತಟ್ಟಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅನುಮಾನಗೊಂಡ ವಸತಿ ಗೃಹದ ಸಿಬ್ಬಂದಿ ಪೊಲೀಸರನ್ನು ಸಂಪರ್ಕಿಸಿದಾಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೃತಪಟ್ಟ ಇಬ್ಬರು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಕೊವಿಡ್ ಲಾಕ್​ಡೌನ್ ಅವಧಿಯಲ್ಲಿ ಉದ್ಯೋಗ ನಷ್ಟವುಂಟಾಗಿ ಸ್ವಂತ ಊರಾದ ಬನಹಟ್ಟಿಗೆ ಹಿಂದಿರುಗಿದ್ದರು. ಆನಂತರ ಜೋಗ ಜಲಪಾತಕ್ಕೆ ಪ್ರವಾಸಕ್ಕೆ ತೆರಳುವುದಾಗಿ ಮನೆಯಲ್ಲಿ ತಿಳಿಸಿ ಸಾಗರಕ್ಕೆ ಆಗಮಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: 

ಅಕ್ಟೋಬರ್ 3ಕ್ಕೆ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ; ಪ್ರಶಸ್ತಿ ಪಡೆಯುವ ಹಿರಿಯ ಪತ್ರಕರ್ತರ ಹೆಸರು ಇಲ್ಲಿದೆ

ದೇಸಾಯಿವಾಡೆ: ಶಂಕರ್ ನಾಗ್ ಅವರ ಜೋಕುಮಾರ ಸ್ವಾಮಿ ಚಿತ್ರ ಶೂಟಿಂಗ್ ನಡೆದದ್ದು ಇಲ್ಲೇ

(Shivamogga 2 friends found dead in Sagar who lost jobs in Covid Lockdown)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada