Bharat Bandh: ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಾವು; ಪೋಸ್ಟ್​ಮಾರ್ಟಮ್​ ನಂತರ ಮಾಹಿತಿ ನೀಡುತ್ತೇವೆಂದ ಪೊಲೀಸರು

ರೈತರು ಪ್ರಮುಖ ಹೆದ್ದಾರಿಗಳು, ರೈಲ್ವೆ ಹಳಿಗಳ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅದರಲ್ಲೂ ದೆಹಲಿಯ ಗಡಿಭಾಗಗಳಲ್ಲಿ ಹೆದ್ದಾರಿಗಳೆಲ್ಲ ಬ್ಲಾಕ್ ಆಗಿ, ಜನಸಂಚಾರ ಸಾಧ್ಯವಾಗುತ್ತಿಲ್ಲ.

Bharat Bandh: ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಾವು; ಪೋಸ್ಟ್​ಮಾರ್ಟಮ್​ ನಂತರ ಮಾಹಿತಿ ನೀಡುತ್ತೇವೆಂದ ಪೊಲೀಸರು
ಘಾಜಿಯಾಬಾದ್​ನಲ್ಲಿ ರೈತರ ಪ್ರತಿಭಟನೆ (ಪಿಟಿಐ ಚಿತ್ರ)

ಭಾರತ್​ ಬಂದ್ (Bharat Bandh) ಹಿನ್ನೆಲೆಯಲ್ಲಿ ಹರ್ಯಾಣದ ಸಿಂಘು ಗಡಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತನೊಬ್ಬ ಮೃತಪಟ್ಟಿದ್ದಾರೆ. ಇವರು ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಪೊಲೀಸರು ಹೇಳಿದ್ದಾರೆ.  ಸದ್ಯ ಮೃತದೇಹವನ್ನು ಸಮೀಪದ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಪೋಸ್ಟ್​ಮಾರ್ಟಮ್​ ಬಳಿಕವಷ್ಟೇ ಇನ್ನಷ್ಟು ಮಾಹಿತಿ ನೀಡಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ, ರೈತ ಸಂಘಟನೆಗಳು ಇಂದು ಭಾರತ್​ ಬಂದ್​ ಕರೆದಿದ್ದು, ಅದರ ಹಿನ್ನೆಲೆಯಲ್ಲಿ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 

ಇಂದು ರೈತರು ಪ್ರಮುಖ ಹೆದ್ದಾರಿಗಳು, ರೈಲ್ವೆ ಹಳಿಗಳ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅದರಲ್ಲೂ ದೆಹಲಿಯ ಗಡಿಭಾಗಗಳಲ್ಲಿ ಹೆದ್ದಾರಿಗಳೆಲ್ಲ ಬ್ಲಾಕ್ ಆಗಿ, ಜನಸಂಚಾರ ಸಾಧ್ಯವಾಗುತ್ತಿಲ್ಲ. ಇನ್ನು ಪೊಲೀಸ್ ಬಂದೋಬಸ್ತ್​ ಕೂಡ ಹೆಚ್ಚಿಸಲಾಗಿದೆ. ದೆಹಲಿ-ಹರ್ಯಾಣದ ಸಿಂಘು ಗಡಿಯ 14 ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ರೈತರು ಬಂದ್ ಮಾಡಿದ್ದಾರೆ.  ದೆಹಲಿ-ಗುರುಗ್ರಾಮ ಗಡಿಯಲ್ಲಿ ಟ್ರಾಫಿಕ್ ಜಾಮ್​ ಆಗಿದ್ದು, ಈ ಪ್ರದೇಶದಲ್ಲಿ ಅನೇಕ ವಾಹನಗಳು ಸಿಲುಕಿಕೊಂಡಿವೆ. ಪಂಜಾಬ್​ ಮತ್ತು ಹರ್ಯಾಣದ ರೈಲ್ವೆ ಹಳಿಗಳ ಮೇಲೆ ಕುಳಿತೂ ಕೂಡ ರೈತರು ಪ್ರತಿಭಟನೆ ನಡೆಸುತ್ತಿದ್ದು, ಕೃಷಿ ಕಾಯ್ದೆಗಳ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

ತಮಿಳುನಾಡಿನಲ್ಲಿ ಗಲಾಟೆ
ಇಂದು ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದರಲ್ಲಿ ಚೆನ್ನೈನ ಅಣ್ಣಾ ಸಲೈ ಪ್ರದೇಶದಲ್ಲಿ ಪ್ರತಿಭಟನಾನಿರತರು ಉದ್ವಿಗ್ನಗೊಂಡಿದ್ದರು. ಪೊಲೀಸ್ ಬ್ಯಾರಿಕೇಡ್​ಗಳನ್ನು ಮುರಿದುಹಾಕಿದ್ದಾರೆ. ನಂತರ ಅವರನ್ನೆಲ್ಲ ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಮಮತಾ ಬ್ಯಾನರ್ಜಿಯನ್ನು ಹೊಗಳಿದ ಬೆನ್ನಲ್ಲೇ ಗೋವಾದ ಕಾಂಗ್ರೆಸ್ ನಾಯಕ ರಾಜೀನಾಮೆ

ಶಾಲೆಯ ತರಗತಿಯಲ್ಲಿ ಹಿಂದಿ ಹಾಡಿಗೆ ಭರ್ಜರಿ ಕುಣಿದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಶಿಕ್ಷಕಿಯರು ಅಮಾನತು

(Farmer died during Bhart Bandh protest at Singhu border Of Haryana)

Click on your DTH Provider to Add TV9 Kannada