Digital Health ID Card 2021: ಡಿಜಿಟಲ್ ಹೆಲ್ತ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ವಿವರ ಇಲ್ಲಿದೆ

NDHM Card: ಆರೊಗ್ಯ ಐಡಿಯನ್ನು 14 ಅಂಕಿಗಳಿಂದ ಜನರೇಟ್ ಮಾಡಲಾಗುತ್ತದೆ. ಈ ಸಂಖ್ಯೆ ಮೂಲಕ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ದಾಖಲಿಸಲಾಗುತ್ತದೆ.

Digital Health ID Card 2021: ಡಿಜಿಟಲ್ ಹೆಲ್ತ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ವಿವರ ಇಲ್ಲಿದೆ
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on:Sep 27, 2021 | 2:30 PM

ಭಾರತೀಯರು ಸಂಪೂರ್ಣ ಆರೋಗ್ಯ ದಾಖಲೆಗಳನ್ನು ಪಡೆಯಲು ಅನುವು ಮಾಡಿಕೊಡುವ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್​ಅನ್ನು (NDHM) ಪ್ರಧಾನಿ ಮೋದಿ ರಾಷ್ಟ್ರವ್ಯಾಪಿ ಇಂದು ಚಾಲನೆ ನೀಡಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಭಾರತೀಯನು 14 ಅಂಕಿಗಳು ಹೊಂದಿರುವ ಆರೋಗ್ಯ ಗುರುತಿನ ಚೀಟಿ (ID) ಪಡೆಯುತ್ತಾನೆ. ಇದು ಆ ನಿರ್ದಿಷ್ಟ ವ್ಯಕ್ತಿಯ ಎಲ್ಲಾ ಆರೋಗ್ಯ ದಾಖಲೆಗಳನ್ನು ಹೊಂದಿರುತ್ತದೆ.

ಆರೋಗ್ಯ ಗುರುತಿನ ಚೀಟಿ ಎಂದರೇನು? ಆರೋಗ್ಯ ಐಡಿ ಏಕೆ ಅವಶ್ಯಕ? ಆರೋಗ್ಯ ಐಡಿಯನ್ನು 14 ಅಂಕಿಗಳಿಂದ ಜನರೇಟ್ ಮಾಡಲಾಗುತ್ತದೆ. ಈ ಸಂಖ್ಯೆ ಮೂಲಕ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ದಾಖಲಿಸಲಾಗುತ್ತದೆ. ಆರೋಗ್ಯ ಐಡಿಯನ್ನು ಬಳಸುವುದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ಪಡೆಯುವ ಮೊದಲ ಹೆಜ್ಜೆಯಾಗಿದೆ. ನಿಮ್ಮ ಒಪ್ಪಿಗೆಯ ಮೇರೆಗೆ ನಿಮ್ಮ ಸಂಪೂರ್ಣ ಆರೋಗ್ಯ ದಾಖಲೆಗಳನ್ನು ಪಡೆಯಲು ಸಹಾಯವಾಗುತ್ತದೆ.

ಆರೋಗ್ಯ ಐಡಿಯನ್ನು ಪಡೆಯುವುದು ಹೇಗೆ? ನೀವು ಹೆಲ್ತ್ ಐಡಿ ವೆಬ್ ಪೋರ್ಟಲ್​ನಲ್ಲಿ ಸ್ವಯಂ ನೋಂದಣಿಯ ಮೂಲಕ ಅಥವಾ ಗೂಗಲ್ ಪ್ಲೇಸ್ಟೋರ್​ನಲ್ಲಿ ಎಬಿಡಿಎಂ (ABDM) ಹೆಲ್ತ್ ರೆಕಾರ್ಡ್ಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮೂಲಕ ಆರೋಗ್ಯ ಐಡಿಯನ್ನು ಪಡೆಯಬಹುದು. ಇಲ್ಲಿ ನೀವು ABDM ಆರೊಗ್ಯ ಐಡಿಯನ್ನು ನೋಂದಾಯಿಸಬಹುದು ಅಥವಾ ಮೊಬೈಲ್ ಅಪ್ಲಿಕೇಶನ್ಅನ್ನು ಡೌನ್​ಲೋಡ್​ ಮಾಡಬಹುದು. ಭಾರತದಾದ್ಯಂತ ಸಾರ್ವಜನಿಕ/ ಖಾಸಗಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಒಳಗೊಂಡಂತೆ ಆರೋಗ್ಯ ಸೌಲಭ್ಯ ನೀಡುವ ಕಡೆ ಆರೋಗ್ಯ ಐಡಿಯನ್ನು ರಚಿಸಲು ಅವಕಾಶವಿದೆ.

ಆರೋಗ್ಯ ಐಡಿ ರಚಿಸಲು ಬೇಕಾದ ಮಾಹಿತಿಗಳು ಮೊಬೈಲ್ ನಂಬರ್ ಮೂಲಕ ಆರೋಗ್ಯ ಐಡಿ: ಹೆಸರು, ಹುಟ್ಟಿದ ವರ್ಷ, ಲಿಂಗ, ವಿಳಾಸ, ಮೊಬೈಲ್ ಸಂಖ್ಯೆ ಗೊತ್ತಿರಬೇಕು.

ಆಧಾರ್ ಮೂಲಕ ಆರೋಗ್ಯ ಐಡಿ: ಹೆಸರು, ಹುಟ್ಟಿದ ವರ್ಷ, ಲಿಂಗ, ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ (ಸಂಖ್ಯೆ)

ಆರೋಗ್ಯ ಐಡಿ ರಚಿಸಲು ಆಧಾರ್ ಕಡ್ಡಾಯವೇ?

ನಿಮ್ಮ ಸಂಪೂರ್ಣ ಮಾಹಿತಿಯೊಂದಿಗೆ ನೀವು ನಿಮ್ಮ ಮೊಬೈಲ್ ಸಂಖ್ಯೆ ಸಹ ಬಳಸಬಹುದು. ನಿಮ್ಮ ಮೊಬೈಲ್ ಸಂಖ್ಯೆ ಆಧಾರ್​ಗೆ ಲಿಂಕ್ ಆಗದೇ ಇದ್ದಲ್ಲಿ, ಆಧಾರ್ ಸಂಖ್ಯೆಯನ್ನು ಬಯೋಮೆಟ್ರಿಕ್​ನಲ್ಲಿ ದೃಢಪಡಿಸಿಕೊಂಡು ಬಳಿಕ ನೀವು ಸೌಲಭ್ಯದಲ್ಲಿ ಆರೋಗ್ಯ ಐಡಿ ಯನ್ನು ಪಡೆಯಬಹುದು.

ಆರೋಗ್ಯ ಐಡಿ ರಚಿಸಲು ಆಧಾರ್ ಹೊರತುಪಡಿಸಿ ಬೇರೆ ಐಡಿ ದಾಖಲೆಗಳನ್ನು ಬಳಸಬಹುದೇ? ಪ್ರಸ್ತುತದಲ್ಲಿ ನೀವು ನಿಮ್ಮ ಆರೋಗ್ಯ ಐಡಿ ಪಡೆಯಲು ಮೊಬೈಲ್ ಅಥವಾ ಆಧಾರ್ ಬಳಸಿ ರಚಿಸಬಹುದು. ಪಾನ್ ಕಾರ್ಡ್, ಚಾಲನಾ ಪರವಾನಗಿಯಂತಹ ಇತರ ಐಡಿ ದಾಖಲೆಗಳೊಂದಿಗೆ ಆರೋಗ್ಯ ಐಡಿ ರಚನೆಗೆ ಸರ್ಕಾರ ಶೀರ್ಘ್ರದಲ್ಲೇ ವೈಶಿಷ್ಟ್ಯಗಳನ್ನು ಬೆಂಬಲ ನೀಡಲಿದೆ.

ನೋಂದಣಿಗೆ ಎಷ್ಟು ಸಮಯ ಬೇಕು? ನಿಮ್ಮ ಮೂಲ ವಿವರಗಳನ್ನು ಪಡೆಯಲು ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಮಖ್ಯೆಯನ್ನು ದೃಢೀಕರಿಸಲು ಮಾತ್ರ ಸಮಯ ಹಿಡಿಯುತ್ತದೆಯೇ ಹೊರತಾಗಿ 10 ನಿಮಿಷಗಳಲ್ಲಿ ನೋಂದಣಿ ಪ್ರತಿಕ್ರಿಯೆ ಮಾಡಿಕೊಳ್ಳಬಹುದು.

ನಿಮ್ಮ ಪಾಸ್ವರ್ಡ್ ಮರೆತರೆ ಮಾಡಬೇಕಾದದ್ದೇನು? ನಿಮ್ಮ ಆರೋಗ್ಯ ಐಡಿಗೆ ಮೊಬೈಲ್ ಒಟಿಪಿ ಅಥವಾ ಆಧಾರ್ ಲಿಂಕ್ ಮಾಡಿದ ಮೊಬೈಲ್ ಒಟಿಪಿ ಮೂಲಕ ಲಾಗಿನ್ ಆಗಿ. ನಂತರ ಹೊಸ ಪಾಸ್ವರ್ಡ್ಅನ್ನು ಅನ್ವಯಿಸಬಹುದು. ಸಮಸ್ಯೆಗಳು ಎದುರಾದರೆ, ndhm@nha.gov.in ನಲ್ಲಿ ಸಂಪರ್ಕಿಸಿ ಅಥವಾ – 1800-11-4477 / 14477 ಈ ಸಂಖ್ಯೆಗೆ ಕರೆ ಮಾಡಿ.

ಪಾಸ್ವರ್ಡ್ ಮೂಲಕ ನಿಮ್ಮ ಆರೋಗ್ಯ ಐಡಿ ಖಾತೆಯಿಂದ ನೀವು ಲಾಕ್ ಆಗಿದ್ದರೆ, ಲಾಗಿನ್ ಮಾಡಲು ನೀವು ದೃಢೀಕರಣ ವಿಧಾನಗಳನ್ನು ಪ್ರಯತ್ನಿಸಬಹುದು. ಮೂರು ಬಾರಿಯೂ ಪ್ರಯತ್ನಿಸಿದ ಬಳಿಕವೂ ತಪ್ಪುಗಳಾಗಿದ್ದರೆ ದೃಢೀಕರಣ ವಿಧಾನ 12 ಗಂಟೆಗಳ ಕಾಲ ನಿಷ್ಕ್ರಿಯಗೊಳ್ಳುತ್ತದೆ. ಬಳಕೆದಾರರು ತಮ್ಮ ಆರೋಗ್ಯ ಐಡಿಯನ್ನು ಶಾಶ್ವತವಾಗಿ ಅಳಿಸಬಹುದು ಅಥವಾ ತಾತ್ಕಾಲಿಕವಾಗಿ ನಿಷ್ಕ್ರಿಯೆಗೊಳಿಸಬಹುದು. ನಿಷ್ಕ್ರಿಯೆಗೊಳಿಸಿದ ಬಳಿಕ ಪುನಃ ಆರೋಗ್ಯ ಐಡಿಯನ್ನು ಸಕ್ರಿಯೆಗೊಳಿಸಲು ಆಯ್ಕೆ ಮಾಡಬಹುದಾಗಿದೆ.

ಆನ್​ಲೈನ್​ ಅರ್ಜಿ ಸಲ್ಲಿಸಲು ಹೀಗೆ ಮಾಡಿ *ಅಧಿಕೃತ ವೆಬ್​ಸೈಟ್​ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಆಯ್ಕೆ ಮಾಡಿ. https://nha.gov.in/

*NDHM ID ಆ್ಯಪ್ ತೆರೆಯಿರಿ. ನೋಂದಣಿ ಪುಟವು ತೆರೆಯುತ್ತದೆ

*ಹೆಸರು ಮತ್ತು ಫೋನ್ ಸಂಖ್ಯೆಯನ್ನು ಜತೆಗೆ ಕೇಳಿದ ವಿವರಗಳನ್ನು ತುಂಬಿ

*ರಿಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ

*ಇದೀಗ ಒಟಿಪಿ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಬರುತ್ತದೆ. ಆ ಸಂಖ್ಯೆಯನ್ನು ಟೈಪ್ ಮಾಡಿ.

*ಅರ್ಜಿಯ ಅಂತಿಮ ಸಲ್ಲಿಕೆಗೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ:

Digital Health Mission 2021: ಆರೋಗ್ಯ ಕ್ಷೇತ್ರ ಸುಧಾರಣೆಯ ಅತ್ಯಂತ ಮಹತ್ವದ ಘಟ್ಟ ಈ ಡಿಜಿಟಲ್​ ಹೆಲ್ತ್​ ಮಿಷನ್​: ಪ್ರಧಾನಿ ಮೋದಿ

Digital Health Mission Launch: ಆಯುಷ್ಮಾನ್​ ಆರೋಗ್ಯ ಡಿಜಿಟಲ್​ ಮಿಷನ್​ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

(Digital Health ID Card 2021 how to apply registration and its benefits check in kannada)

Published On - 2:23 pm, Mon, 27 September 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್