Digital Health Mission 2021: ಆರೋಗ್ಯ ಕ್ಷೇತ್ರ ಸುಧಾರಣೆಯ ಅತ್ಯಂತ ಮಹತ್ವದ ಘಟ್ಟ ಈ ಡಿಜಿಟಲ್​ ಹೆಲ್ತ್​ ಮಿಷನ್​: ಪ್ರಧಾನಿ ಮೋದಿ

ಆಯುಷ್ಮಾನ್​ ಭಾರತ್​ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಮೂಲಕ ಬಡವರ ಆರೋಗ್ಯದ ಕಾಳಜಿ ವಹಿಸಲಾಗಿದೆ. ಇದುವರೆಗೆ ಸುಮಾರು 2 ಕೋಟಿ ಜನರು ಆಯುಷ್ಮಾನ್​ ಭಾರತ್​ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ವೈದ್ಯಕೀಯ ವ್ಯವಸ್ಥೆ ಪಡೆದಿದ್ದಾರೆ ಎಂದು ಪಿಎಂ ಮೋದಿ ತಿಳಿಸಿದರು.

Digital Health Mission 2021: ಆರೋಗ್ಯ ಕ್ಷೇತ್ರ ಸುಧಾರಣೆಯ ಅತ್ಯಂತ ಮಹತ್ವದ ಘಟ್ಟ ಈ ಡಿಜಿಟಲ್​ ಹೆಲ್ತ್​ ಮಿಷನ್​: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
TV9 Web
| Updated By: Lakshmi Hegde

Updated on:Sep 27, 2021 | 12:35 PM

ದೆಹಲಿ: ಭಾರತದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲ ಶಕ್ತಿ ಆಯುಷ್ಮಾನ್​ ಡಿಜಿಟಲ್ ಆರೋಗ್ಯ ಮಿಷನ್​ ಗೆ ನಿಶ್ಚಿತವಾಗಿಯೂ ಇದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಜಿಟಲ್​ ಆರೋಗ್ಯ ಮಿಷನ್​ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಮೂರುವರ್ಷಗಳ ಹಿಂದೆ ಸೆಪ್ಟೆಂಬರ್​ 27ರಂದು, ಪಂಡಿತ್​ ದೀನ್ ದಯಾಳ್​ ಉಪಾಧ್ಯಾಯರ ಜನ್ಮ ವಾರ್ಷಿಕೋತ್ಸವದಂದು ಆಯುಷ್ಮಾನ್​ ಭಾರತ್​ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಯಿತು. ಅದರ ಭಾಗವಾದ ಆಯುಷ್ಮಾನ್​ ಡಿಜಿಟಲ್​ ಮಿಷನ್​ ಇಂದಿನಿಂದ ರಾಷ್ಟ್ರಾದ್ಯಂತ ಅನ್ವಯ ಆಗುತ್ತಿದೆ. ಕಳೆದ ಏಳುವರ್ಷಗಳಿಂದ ದೇಶದ ಆರೋಗ್ಯ ಕ್ಷೇತ್ರ ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಆ ಪ್ರಯತ್ನ ಇಂದು ಒಂದು ಮಹತ್ವದ ಘಟ್ಟ ತಲುಪಿದೆ ಎಂದು ಹೇಳಿದರು. 

ಆರೋಗ್ಯ ಸೇತು ಮತ್ತು ಕೊವಿನ್​ ಆ್ಯಪ್​ಗಳ ಬಗ್ಗೆ ಉಲ್ಲೇಖ ಮಾಡಿದ ಅವರು, ಕೊವಿಡ್ 19 ಸಾಂಕ್ರಾಮಿಕ ಬಂದ ಹೊತ್ತಲ್ಲಿ ಹೊರಬಂದ ಆರೋಗ್ಯ ಸೇತು ಆ್ಯಪ್​ ಕೊರೊನಾ ಪ್ರಸರಣವನ್ನು ತಡೆಯಲು ಸಹಾಯ ಮಾಡಿದೆ. ಹಾಗೇ, ಇಂದು ಕೊರೊನಾ ಲಸಿಕಾ ಅಭಿಯಾನ ದೊಡ್ಡ ಮಟ್ಟದಲ್ಲಿ ಆಗುತ್ತಿದ್ದು, ಇದುವರೆಗೆ 90 ಕೋಟಿ ಡೋಸ್​ಗಳಷ್ಟು ಲಸಿಕೆ ಹಾಕಲಾಗಿದೆ. ಈ ಲಸಿಕಾ ಅಭಿಯಾನದಲ್ಲಿ ಕೊವಿನ್​ ಆ್ಯಪ್ ಬಹುಮುಖ್ಯ ಪಾತ್ರ ವಹಿಸಿದೆ ಎಂದು ಹೇಳಿದರು.

ಇ-ಸಂಜೀವಿನಿ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ದೇಶದ ದುರ್ಗಮ ಪ್ರದೇಶಗಳ ನಿವಾಸಿಗಳಿಗೆ ಸಹಾಯ ಮಾಡುವ ಇ-ಸಂಜೀವಿನಿಯಡಿ ಇದುವರೆಗೆ 125 ಕೋಟಿಗಳಷ್ಟು ಸಮಾಲೋಚನೆ ನಡೆಸಲಾಗಿದೆ. ಅಂದರೆ ದುರ್ಗಮ, ದೂರದ ಪ್ರದೇಶದ ಜನರು ಮನೆಯಲ್ಲೇ ಕುಳಿತು ಇ-ಸಂಜೀವಿನಿ ವ್ಯವಸ್ಥೆ ಮೂಲಕ ದೊಡ್ಡದೊಡ್ಡ ಆಸ್ಪತ್ರೆಗಳ ತಜ್ಞರ ಜತೆ ತಮ್ಮ ಆರೋಗ್ಯದ ಬಗ್ಗೆ ಸಮಾಲೋಚನೆ ನಡೆಸಬಹುದು. ವೈದ್ಯಕೀಯ ವ್ಯವಸ್ಥೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಆಯುಷ್ಮಾನ್​ ಭಾರತ್​ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಮೂಲಕ ಬಡವರ ಆರೋಗ್ಯದ ಕಾಳಜಿ ವಹಿಸಲಾಗಿದೆ. ಇದುವರೆಗೆ ಸುಮಾರು 2 ಕೋಟಿ ಜನರು ಆಯುಷ್ಮಾನ್​ ಭಾರತ್​ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ವೈದ್ಯಕೀಯ ವ್ಯವಸ್ಥೆ ಪಡೆದಿದ್ದಾರೆ. ಉಚಿತ ಚಿಕಿತ್ಸೆ ಪಡೆದಿದ್ದಾರೆ. ಈ ಯೋಜನೆಯ ಅರ್ಧದಷ್ಟು ಫಲಾನುಭವಿಗಳು ಮಹಿಳೆಯರಾಗಿದ್ದಾರೆ. ಇನ್ನು ನಮ್ಮಲ್ಲಿ 130 ಕೋಟಿ ಆಧಾರ್​ ನಂಬರ್​ಗಳು, 118 ಕೋಟಿ ಮೊಬೈಲ್​ ಚಂದಾದಾರರು, 80 ಕೋಟಿ ಇಂಟರ್​ನೆಟ್​ ಬಳಕೆದಾರರು, 43 ಕೋಟಿ ಜನ್​ಧನ್​ ಬ್ಯಾಂಕ್​ ಅಕೌಂಟ್​ ಹೊಂದಿರುವ ಜನರು ಇದ್ದಾರೆ. ಇಡೀ ಜಗತ್ತಿನಲ್ಲಿ ಎಲ್ಲಿಯೂ ಸಂಪರ್ಕ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಮಟ್ಟದ ಮೂಲಸೌಕರ್ಯ ವ್ಯವಸ್ಥೆಯಿಲ್ಲ. ಈ ಡಿಜಿಟಲ್​ ಮೂಲಸೌಕರ್ಯಗಳು ಪಡಿತರ, ಅಗತ್ಯ ಸೇವೆಗಳನ್ನು ಸರ್ಕಾರದಿಂದ ಅತ್ಯಂತ ವೇಗವಾಗಿ ಮತ್ತು ಪಾರದರ್ಶಕವಾಗಿ ಸಾಮಾನ್ಯ ಜನರಿಗೆ ಸಾಗಿಸುತ್ತಿವೆ ಎಂದೂ ಪ್ರಧಾನಿ ಹೇಳಿದರು. ಹಾಗೇ, ಡಿಜಿಟಲ್ ಆರೋಗ್ಯ ಮಿಷನ್​​ನಡಿ ಪ್ರತಿಯೊಬ್ಬ ಭಾರತೀಯನೂ ಒಂದು ಆರೋಗ್ಯ ಐಡಿ ಪಡೆಯುತ್ತಾರೆ. ಆ ನಾಗರಿಕ ಆರೋಗ್ಯ ದಾಖಲೆಗಳು ಡಿಜಿಟಲೀಕರಣಗೊಂಡು, ಸುರಕ್ಷಿತವಾಗಿರುತ್ತವೆ ಎಂದೂ ಹೇಳಿದರು.

ಇದನ್ನೂ ಓದಿ: Digital Health Mission Launch: ಆಯುಷ್ಮಾನ್​ ಆರೋಗ್ಯ ಡಿಜಿಟಲ್​ ಮಿಷನ್​ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

National Digital Health Mission: ಆರೋಗ್ಯ ಕಾರ್ಡ್​ ಹೇಗೆ ಕಾರ್ಯ ನಿರ್ವಹಿಸುತ್ತೆ? ಜನರು ತಿಳಿದುಕೊಳ್ಳಲೇಬೇಕಾದ ಅಂಶಗಳೇನು?

(Digital Health Mission will bring revolutionary change in healthcare facilities Of India Says PM Modi)

Published On - 12:26 pm, Mon, 27 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ