Digital Health Mission Launch: ಆಯುಷ್ಮಾನ್ ಆರೋಗ್ಯ ಡಿಜಿಟಲ್ ಮಿಷನ್ಗೆ ಚಾಲನೆ ನೀಡಿದ ಪ್ರಧಾನಿ ಮೋದಿ
Digital Health Mission 2021: ಆರೋಗ್ಯ ಕ್ಷೇತ್ರದಲ್ಲಿ ಈ ಡಿಜಿಟಲ್ ಆರೋಗ್ಯ ಮಿಷನ್ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂಬ ನಂಬಿಕೆ ನನಗೆ ಖಂಡಿತ ಇದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ಭಾಷಣ ಮಾಡುವಾಗ ಘೋಷಿಸಿದ್ದ ಡಿಜಿಟಲ್ ಆರೋಗ್ಯ ಮಿಷನ್ (National Digital Health Mission (NDHM)ಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಈ ಬಗ್ಗೆ ನಿನ್ನೆ ಸಂಜೆ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ನಾಳೆ ಸೆಪ್ಟೆಂಬರ್ 27ರಂದು ಭಾರತದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ದಿನವಾಗಿದೆ. ಬೆಳಗ್ಗೆ 11ಗಂಟೆಗೆ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಉದ್ಘಾಟನೆಯಾಗಲಿದೆ. ಈ ಯೋಜನೆ ಆರೋಗ್ಯ ಕ್ಷೇತ್ರದ ಸುಧಾರಣೆಗೆ ತಂತ್ರಜ್ಞಾನವನ್ನು ಒದಗಿಸುತ್ತದೆ ಮತ್ತು ಆರೋಗ್ಯ ವಲಯದಲ್ಲಿ ಹೊಸ ಹೊಸ ಅನ್ವೇಷಣೆಗೆ ದಾರಿಯಾಗುತ್ತದೆ ಎಂದಿದ್ದರು.
ಇಂದು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಾತನಾಡಿ, ಇಂದು ಡಿಜಿಟಲ್ ಆರೋಗ್ಯ ಮಿಷನ್ ಉದ್ಘಾಟನೆಯಾಗಿದ್ದು ನನಗೆ ತುಂಬ ಖುಷಿಯಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಇದು ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂಬ ನಂಬಿಕೆ ನನಗೆ ಖಂಡಿತ ಇದೆ ಎಂದು ಹೇಳಿದರು.
On 15th August 2020, PM had announced the mission (Ayushman Bharat Digital Mission) from the ramparts of the Red Fort. I am happy that he is launching it today. I believe that this will bring a revolutionary change in the health sector: Union Health Minister Mansukh Mandaviya pic.twitter.com/wPvbafl68N
— ANI (@ANI) September 27, 2021
ಪ್ರಧಾನಿ ಮೋದಿ ಮಾತು ಇಂದು ಡಿಜಿಟಲ್ ಆರೋಗ್ಯ ಮಿಷನ್ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ನರೇಂದ್ರ ಮೋದಿಯವರು, ಈ ದಿನ ತುಂಬ ಮಹತ್ವದ್ದಾಗಿದೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನದಂದೇ ಆಯುಷ್ಮಾನ್ ಭಾರತ್ ಡಿಜಿಟಲ್ ಆರೋಗ್ಯ ಮಿಷನ್ ಉದ್ಘಾಟಿಸಲಾಗಿದೆ. ಇದು ಪಂಡಿತ್ ಜೀ ಅವರಿಗೆ ಸಮರ್ಪಿತ. ಇಂದಿನಿಂದಲೇ ಇಡೀ ರಾಷ್ಟ್ರಕ್ಕೆ ಈ ಯೋಜನೆ ಅನ್ವಯ ಆಗಲಿದೆ ಎಂದು ತಿಳಿಸಿದರು.
ಡಿಜಿಟಲ್ ಆರೋಗ್ಯ ಮಿಷನ್ನಿಂದ ದೇಶದ ಆರೋಗ್ಯ ಕ್ಷೇತ್ರ ಖಂಡಿತವಾಗಿಯೂ ಸಶಕ್ತಗೊಳ್ಳಲಿದೆ. ಕಳೆದ 7 ವರ್ಷಗಳಿಂದಲೂ ನಮ್ಮ ಸರ್ಕಾರ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನದಲ್ಲಿ ನಿರಂತರವಾಗಿ ತೊಡಗಿಕೊಂಡಿದೆ. ಆ ಪ್ರಯತ್ನದ ಒಂದು ಭಾಗವಾಗಿ ಇಂದು ಅತ್ಯಂತ ಮಹತ್ವದ, ಮುಖ್ಯವಾದ ಹಂತಕ್ಕೆ ಕಾಲಿಡಲಾಗಿದೆ. ಇದು ಒಂದು ಸಾಮಾನ್ವಯ ಹಂತವಲ್ಲ..ಅಸಾಧಾರಣವಾದ ಹಂತ ಎಂದು ಪ್ರಧಾನಿ ಹೇಳಿದರು.
ಡಿಜಿಟಲ್ ಆರೋಗ್ಯ ಮಿಷನ್ ಒಂದು ಮಹತ್ವದ ಯೋಜನೆಯಾಗಿದ್ದು, ಇದರಡಿ ಪ್ರತಿ ಭಾರತೀಯನಿಗೂ ಒಂದು ಆರೋಗ್ಯ ಐಡಿ ನೀಡಲಾಗುತ್ತದೆ. ಇದು ಆ ವ್ಯಕ್ತಿಯ ಆರೋಗ್ಯ ಅಕೌಂಟ್ನಂತೆಯೂ ಕೆಲಸ ಮಾಡುತ್ತದೆ. ಮೊಬೈಲ್ ಆ್ಯಪ್ನಲ್ಲಿ ಹೆಲ್ತ್ ಅಕೌಂಟ್ ರಚಿಸಿಕೊಂಡು, ಪ್ರತಿಯೊಬ್ಬರೂ ಅದರಲ್ಲಿ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಲಿಂಕ್ ಮಾಡಿಕೊಳ್ಳಬಹುದು. ನಂತರ ಮೊಬೈಲ್ ಆ್ಯಪ್ ಮೂಲಕವೇ ಅದನ್ನು ನೋಡಬಹುದಾಗಿದೆ.
ಇದನ್ನೂ ಓದಿ: National Digital Health Mission: ಆರೋಗ್ಯ ಕಾರ್ಡ್ ಹೇಗೆ ಕಾರ್ಯ ನಿರ್ವಹಿಸುತ್ತೆ? ಜನರು ತಿಳಿದುಕೊಳ್ಳಲೇಬೇಕಾದ ಅಂಶಗಳೇನು?
ಕ್ರಿಕೆಟ್ಗೆ ವಿದಾಯ ಹೇಳಿದ ಇಂಗ್ಲೆಂಡ್ ಆಲ್ ರೌಂಡರ್ ಮೊಯೀನ್ ಅಲಿ
(Digital Health Mission Launched By PM Modi Through Video Conference)
Published On - 11:07 am, Mon, 27 September 21