AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಮತಾ ಬ್ಯಾನರ್ಜಿಯನ್ನು ಹೊಗಳಿದ ಬೆನ್ನಲ್ಲೇ ಗೋವಾದ ಕಾಂಗ್ರೆಸ್ ನಾಯಕ ರಾಜೀನಾಮೆ

Luizinho Faleiro: ಬ್ಯಾನರ್ಜಿ ಅವರನ್ನು ಬೀದಿ ಹೋರಾಟಗಾರರು ಎಂದು ವಿವರಿಸಿದ ಫಲೆರೊ "ಒಂದೇ ಪಕ್ಷದ ಸಿದ್ಧಾಂತ, ನೀತಿಗಳು, ತತ್ವಗಳು ಮತ್ತು ಕಾರ್ಯಕ್ರಮಗಳಲ್ಲಿರುವ ಇಂತಹ ಹೋರಾಟಗಾರರು ನಮಗೆ ಬೇಕಾಗಿದ್ದಾರೆ. ಬಿಜೆಪಿಯ ವಿರುದ್ಧ ಹೋರಾಡಲು ಎಲ್ಲಾ ಕಾಂಗ್ರೆಸ್ ಪಕ್ಷಗಳು ಒಟ್ಟಾಗಬೇಕೆಂದು ನಾನು ಬಯಸುತ್ತೇನೆ ಎಂದಿದ್ದರು.

ಮಮತಾ ಬ್ಯಾನರ್ಜಿಯನ್ನು ಹೊಗಳಿದ ಬೆನ್ನಲ್ಲೇ ಗೋವಾದ ಕಾಂಗ್ರೆಸ್ ನಾಯಕ ರಾಜೀನಾಮೆ
ಲುಯಿಜಿನೊ ಫಲೆರೊ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 27, 2021 | 1:48 PM

Share

ಪಣಜಿ: ಹಿರಿಯ ಗೋವಾ ಕಾಂಗ್ರೆಸ್ ನಾಯಕ ಲುಯಿಜಿನೊ ಫಲೆರೊ (Luizinho Faleiro) ಅವರು ಮಮತಾ ಬ್ಯಾನರ್ಜಿಯ (Mamata Banerjee) ತೃಣಮೂಲ ಕಾಂಗ್ರೆಸ್‌ಗೆ ಸೇರುತ್ತಿದ್ದಾರೆ ಎಂಬ ವರದಿಗಳ ನಡುವೆ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಫಲೆರೊ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ 40 ವರ್ಷಗಳ ಅನುಭವವಿದೆ. ಸೋಮವಾರ ಫಲರೊ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಹೊಗಳಿದ್ದು ಬಿಜೆಪಿಯನ್ನು ಕಠಿಣ ಹೋರಾಟ ನೀಡಬಲ್ಲ “ಬೀದಿ ಹೋರಾಟಗಾರರು ” ಎಂದು ಹೇಳಿದ್ದರು. 

“ಮಮತಾ ಬ್ಯಾನರ್ಜಿ ನರೇಂದ್ರ ಮೋದಿಯವರಿಗೆ ಕಠಿಣ ಹೋರಾಟ ನೀಡಿದ್ದಾರೆ. ಮಮತಾ ಸೂತ್ರವು ಬಂಗಾಳದಲ್ಲಿ ಗೆದ್ದಿದೆ” ಎಂದು ಫಲೆರೊ ಸುದ್ದಿಗಾರರಿಗೆ ಹೇಳಿದರು. ನೀವು ಪಕ್ಷ ಬದಲಿಸುತ್ತೀರಾ ಎಂದು ಮಾಧ್ಯಮದವರು ಕೇಳಿದಾಗ ಅವರು “ದೊಡ್ಡ ಕಾಂಗ್ರೆಸ್ ಕುಟುಂಬದ ಕಾಂಗ್ರೆಸ್ಸಿಗ” ಆಗಿ ಮುಂದುವರಿಯುವುದಾಗಿ ಫಲೆರೊ ಹೇಳಿದ್ದಾರೆ. ಅದೇ ವೇಳೆ, ಬಿಜೆಪಿಯ ವಿರುದ್ಧ ಹೋರಾಡಲು ತೃಣಮೂಲವನ್ನು ಸೂಕ್ಷ್ಮವಾಗಿ ನೋಡುತ್ತಿದ್ದೇನೆ ಎಂದಿದ್ದಾರೆ.

“ನಾನು ಕೆಲವು ಜನರನ್ನು ಭೇಟಿಯಾದೆ. ನಾನು 40 ವರ್ಷದ ಕಾಂಗ್ರೆಸ್ಸಿಗ ಎಂದು ಅವರು ಹೇಳಿದರು. ನಾನು ಕಾಂಗ್ರೆಸ್ ಕುಟುಂಬದ ಕಾಂಗ್ರೆಸ್ಸಿಗನಾಗಿ ಮುಂದುವರಿಯುತ್ತೇನೆ. ಎಲ್ಲಾ ನಾಲ್ಕು ಕಾಂಗ್ರೆಸ್‌ಗಳಲ್ಲಿ ಮಮತಾ ಅವರು ಪ್ರಧಾನಿ ಮೋದಿಗೆ ಕಠಿಣ ಹೋರಾಟ ನೀಡಿದ್ದಾರೆ. ಪ್ರಧಾನಿ ಮೋದಿ ಬಂಗಾಳದಲ್ಲಿ 200 ಸಭೆಗಳನ್ನು ನಡೆಸಿದ್ದರು. ಅಮಿತ್ ಶಾ 250 ಸಭೆಗಳನ್ನು ನಡೆಸಿದ್ದರು. ನಂತರ ಇಡಿ, ಸಿಬಿಐ ಇತ್ತು. ಆದರೆ ಮಮತಾ ಸೂತ್ರ ಗೆದ್ದಿದೆ “ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

ಬ್ಯಾನರ್ಜಿ ಅವರನ್ನು ಬೀದಿ ಹೋರಾಟಗಾರರು ಎಂದು ವಿವರಿಸಿದ ಫಲೆರೊ “ಒಂದೇ ಪಕ್ಷದ ಸಿದ್ಧಾಂತ, ನೀತಿಗಳು, ತತ್ವಗಳು ಮತ್ತು ಕಾರ್ಯಕ್ರಮಗಳಲ್ಲಿರುವ ಇಂತಹ ಹೋರಾಟಗಾರರು ನಮಗೆ ಬೇಕಾಗಿದ್ದಾರೆ. ಬಿಜೆಪಿಯ ವಿರುದ್ಧ ಹೋರಾಡಲು ಎಲ್ಲಾ ಕಾಂಗ್ರೆಸ್ ಪಕ್ಷಗಳು ಒಟ್ಟಾಗಬೇಕೆಂದು ನಾನು ಬಯಸುತ್ತೇನೆ ಎಂದಿದ್ದರು.

ಸುಶ್ಮಿತಾ ದೇಬ್ ನಂತರ ಇದು ತೃಣಮೂಲಕ್ಕೆ ಎರಡನೇ ಪ್ರಮುಖ ಪಕ್ಷಾಂತರವಾಗಿದೆ. ಮುಂದಿನ ವರ್ಷ ಚುನಾವಣೆಗೆ ಮುಂಚಿತವಾಗಿ ತ್ರಿಪುರಾದಲ್ಲಿ ದೇಬ್‌ಗೆ ದೊಡ್ಡ ಪಾತ್ರವನ್ನು ನೀಡಲಾಗಿದ್ದರೂ ಫಲೆರೊ ಅವರು ಗೋವಾದಲ್ಲಿ ತೃಣಮೂಲವನ್ನು ಬಲಪಡಿಸುವ ಸಾಧ್ಯತೆಯಿದೆ. ಅಲ್ಲಿ ಕಾಂಗ್ರೆಸ್ ಗಣನೀಯವಾಗಿ ದುರ್ಬಲಗೊಂಡಿದೆ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಆಕ್ರಮಣಕಾರಿಯಾಗಿ ಪ್ರಚಾರ ನಡೆಸುತ್ತಿದೆ.

ಫಲೆರೊ ಅವರು 2019 ರ ರಾಷ್ಟ್ರೀಯ ಚುನಾವಣೆಗೆ ತ್ರಿಪುರಾದ ಕಾಂಗ್ರೆಸ್ ಉಸ್ತುವಾರಿಯಾಗಿದ್ದರು ಮತ್ತು ಈಶಾನ್ಯ ರಾಜ್ಯದಲ್ಲಿ ತೃಣಮೂಲಕ್ಕೆ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಮತ್ತು ಆಡಳಿತಾರೂಢ ಬಿಜೆಪಿ ವಿರುದ್ಧ ಹೋರಾಡಲು ಸಹಾಯ ಮಾಡುವ ಸಾಧ್ಯತೆ ಇದೆ.

ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕರಾದ ಡೆರೆಕ್ ಒ ಬ್ರಿಯಾನ್ ಮತ್ತು ಪ್ರಸೂನ್ ಬ್ಯಾನರ್ಜಿ ಅವರು ಗೋವಾದಲ್ಲಿ ಫಲೆರೊ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಇತರ ರಾಜ್ಯಗಳೊಂದಿಗೆ ಗೋವಾದಲ್ಲಿ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: ’ಪ್ರಧಾನಿ ಮೋದಿಗೆ ನನ್ನ ಮೇಲೆ ಅಸೂಯೆ, ಹಾಗಾಗಿಯೇ ಇಟಲಿಗೆ ಹೋಗಲು ಅನುಮತಿ ಸಿಗಲಿಲ್ಲ’-ಮಮತಾ ಬ್ಯಾನರ್ಜಿ

(Veteran Goa Congress leader Luizinho Faleiro quit his party After Praising Mamata Banerjee)

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?