AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಪ್ರವಾಸಿ ತಾಣಗಳ ಮಾಹಿತಿ ನೀಡುವ ಆ್ಯಪ್​ ಬಿಡುಗಡೆ: ದೆಹಲಿಯನ್ನು ಅನುಭವಿಸಿ

ಈ ಆ್ಯಪ್​ನಲ್ಲಿ ದೆಹಲಿಯ ಎಲ್ಲ ಪ್ರವಾಸಿ ತಾಣಗಳ ಸಂಕ್ಷಿಪ್ತ ಇತಿಹಾಸ, ಜನಪ್ರಿಯ ಸ್ಥಳೀಯ ಭಕ್ಷ್ಯಗಳು, ಮಾರುಕಟ್ಟೆ ಸ್ಥಳಗಳು ಹಾಗೂ ಪಾರಂಪರಿಕ ನಡಿಗೆ ಬಗ್ಗೆ ಮಾಹಿತಿ ಇದೆ.

ದೆಹಲಿ ಪ್ರವಾಸಿ ತಾಣಗಳ ಮಾಹಿತಿ ನೀಡುವ ಆ್ಯಪ್​ ಬಿಡುಗಡೆ: ದೆಹಲಿಯನ್ನು ಅನುಭವಿಸಿ
ಅರವಿಂದ್ ಕೇಜ್ರಿವಾಲ್​
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Sep 27, 2021 | 6:37 PM

Share

ದೆಹಲಿ: ವಿಶ್ವ ಪ್ರವಾಸೋದ್ಯಮ ದಿನದ ಪ್ರಯುಕ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿವಿಧ ಪ್ರವಾಸಿ ತಾಣಗಳ ಮಾಹಿತಿ ನೀಡುವ ‘ದೇಖೋ ಹಮಾರಿ ಡೆಲ್ಲಿ’ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದರು. ಪ್ರತಿ ತಾಣಗಳ ಬಗ್ಗೆ ಸಂಕ್ಷಿಪ್ತ ಇತಿಹಾಸ, ಜನಪ್ರಿಯ ಸ್ಥಳೀಯ ಭಕ್ಷ್ಯಗಳು, ಮಾರುಕಟ್ಟೆ ಸ್ಥಳಗಳು ಹಾಗೂ ಪಾರಂಪರಿಕ ನಡಿಗೆ ಬಗ್ಗೆ ಮಾಹಿತಿ ಹೊಂದಿರುತ್ತದೆ. ನಗರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಇದು ಅತ್ಯುತ್ತಮ ಅನುಭವ ನೀಡುತ್ತದೆ ಎಂದು ಮುಖ್ಯಮಂತ್ರಿ ಸೋಮವಾರ ಹೇಳಿದರು.

ದೆಹಲಿ ಒಂದು ಐತಿಹಾಸಿಕ ಹಾಗೆಯೇ ಅತ್ಯಾಧುನಿಕ ನಗರ. ಅತ್ಯುತ್ತಮ ಆಹಾರ, ಮಾರುಕಟ್ಟೆಗಳಿಂದ ಹಿಡಿದು ಸ್ಮಾರಕಗಳವರೆಗೆ ಎಲ್ಲವೂ ಇಲ್ಲಿದೆ. ಒಂದೇ ವಿಚಾರದಲ್ಲಿ ದೆಹಲಿ ಹಿಂದುಳಿದಿತ್ತು. ಅದೆಂದರೆ ಮಾಹಿತಿ ಎಂದು ಕೇಜ್ರಿವಾಲ್ ನುಡಿದರು. ಈ ಕೊರತೆಯನ್ನು ಹೊಸ ಮೊಬೈಲ್ ಆ್ಯಪ್ ನಿವಾರಿಸಿದೆ. ನೀವು ಇರುವ ಸ್ಥಳದಿಂದ 5 ಕಿಮೀ ವ್ಯಾಪ್ತಿಯಲ್ಲಿರುವ ಮನರಂಜನಾ ಪಾರ್ಕ್​ಗಳು, ಸ್ಮಾರಕಗಳು, ಜನಪ್ರಿಯ ಮಾರುಕಟ್ಟೆಗಳು ಮತ್ತು ಸಾರ್ವಜನಿಕ ಸ್ಥಳಗಳ ಮಾಹಿತಿಯನ್ನು ಆ್ಯಪ್ ನೀಡಲಿದೆ.

ಕೇವಲ ಪ್ರವಾಸಿಗರು ಮಾತ್ರವೇ ಅಲ್ಲ, ಈ ಆ್ಯಪ್ ದೆಹಲಿ ನಿವಾಸಿಗಳಿಗೂ ಉಪಯುಕ್ತ. ವಿಶ್ವದ ಕೆಲವೇ ನಗರಗಳಲ್ಲಿ ಇಂಥ ಆ್ಯಪ್ ಲಭ್ಯವಿದೆ ಎಂದು ಕೇಜ್ರಿವಾಲ್ ದೆಹಲಿ ಸಚಿವಾಲಯದ ಸಭಾಂಗಣದಲ್ಲಿ ಹೇಳಿದರು. ದೆಹಲಿ ನಿವಾಸಿಗಳು ಸಹ ತಮಗೆ ಈವರೆಗೆ ತಿಳಿದಿರದ ಸ್ಥಳಗಳ ಬಗ್ಗೆ ಆ್ಯಪ್​ನಿಂದ ಮಾಹಿತಿ ಪಡೆದುಕೊಳ್ಳಬಹುದು. ಸ್ಮಾರಕಗಳು ಮತ್ತು ಹೊಟೆಲ್​ಗಳಿಗೆ ಭೇಟಿ ನೀಡಬಹುದು ಎಂದು ತಿಳಿಸಿದರು.

ದೆಹಲಿ ಪ್ರವಾಸೋದ್ಯಮ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಮನೀಸ್ ಸಿಸೋಡಿಯಾ ಮಾತನಾಡಿ, ‘ದೆಹಲಿಗೆ ಬರಲು ಇದೊಂದು ಆಮಂತ್ರಣ ಪತ್ರಿಕೆಯಿದ್ದಂತೆ. ಇಲ್ಲಿಗೆ ಬಂದವರಿಗೆ ದೆಹಲಿಯನ್ನು ಅನುಭವಿಸಲು ಈ ಆ್ಯಪ್ ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದರು. ನಮ್ಮ ಸರ್ಕಾರವು ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ದೆಹಲಿಗೆ ಆಹ್ವಾನಿಸುತ್ತಿದೆ. ಇದೊಂದೇ ಆ್ಯಪ್ ಮೂಲಕ ಪ್ರವಾಸಿಗರು ದೆಹಲಿಯಲ್ಲಿ ಏನಿದೆ? ಏನಿಲ್ಲ ಎಂಬುದನ್ನು ತಿಳಿದುಕೊಳ್ಳಬಹುದು ಎಂದರು.

ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಪ್ರಕಾರ 2019ರಲ್ಲಿ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡಿದದ ವಿಶ್ವದ 4ನೇ ನಗರ ದೆಹಲಿ ಎನಿಸಿತ್ತು. ವಿಶ್ವ ಪ್ರವಾಸೋದ್ಯಮ ಉದ್ಯಮದಲ್ಲಿ ದೆಹಲಿಯನ್ನು ಗಟ್ಟಿಯಾಗಿ ಬ್ರಾಂಡ್ ಮಾಡಲೆಂದು ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. You don’t just visit Delhi, You Experience It (ನೀವು ದೆಹಲಿಗೆ ಕೇವಲ ಭೇಟಿ ನೀಡುವುದಿಲ್ಲ, ಅದನ್ನು ಅನುಭವಿಸುತ್ತೀರಿ) ಎನ್ನುವುದು ಈ ಆ್ಯಪ್​ಗೆ ನೀಡಿರುವ ಘೋಷವಾಕ್ಯವಾಗಿದೆ.

(Delhi Chief Minister Arvind Kejriwal Launches new App That Provides Information About Delhi Tourist Spots)

ಇದನ್ನೂ ಓದಿ: ಗೋವಾದ ಪ್ರತಿ ಮನೆಯ ಒಬ್ಬ ನಿರುದ್ಯೋಗಿಗೆ ತಿಂಗಳಿಗೆ 3000 ರೂ. ಭತ್ಯೆ; ಅರವಿಂದ್ ಕೇಜ್ರಿವಾಲ್ ಭರವಸೆ

ಇದನ್ನೂ ಓದಿ: ಉತ್ತರಾಖಂಡ್​​ ಜನರಿಗೆ ಭರ್ಜರಿ ಭರವಸೆ ನೀಡಿದ ಅರವಿಂದ್ ಕೇಜ್ರಿವಾಲ್​; 6 ತಿಂಗಳಲ್ಲಿ ಲಕ್ಷ ಉದ್ಯೋಗ ಸೃಷ್ಟಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ