AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡ್​​ ಜನರಿಗೆ ಭರ್ಜರಿ ಭರವಸೆ ನೀಡಿದ ಅರವಿಂದ್ ಕೇಜ್ರಿವಾಲ್​; 6 ತಿಂಗಳಲ್ಲಿ ಲಕ್ಷ ಉದ್ಯೋಗ ಸೃಷ್ಟಿ

ಉತ್ತರಾಖಂಡ್​ನಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ ಇಲ್ಲಿನ ಯುವಜನತೆ ವಲಸೆ ಹೋಗುವಂತಾಗಿದೆ. ಹಾಗಾಗಿ ಇಲ್ಲಿನ ಯುವಕರಿಗೆ ಇಲ್ಲೇ ಕೆಲಸ ಸಿಗುವಂತಾಗಬೇಕು ಎಂದು

ಉತ್ತರಾಖಂಡ್​​ ಜನರಿಗೆ ಭರ್ಜರಿ ಭರವಸೆ ನೀಡಿದ ಅರವಿಂದ್ ಕೇಜ್ರಿವಾಲ್​; 6 ತಿಂಗಳಲ್ಲಿ ಲಕ್ಷ ಉದ್ಯೋಗ ಸೃಷ್ಟಿ
ಅರವಿಂದ್ ಕೇಜ್ರಿವಾಲ್​
TV9 Web
| Edited By: |

Updated on:Sep 19, 2021 | 5:08 PM

Share

ದೆಹಲಿ: ಉತ್ತರಾಖಂಡ್​ನಲ್ಲಿ ಬರುವ ವರ್ಷ ವಿಧಾನಸಭೆ ಚುನಾವಣೆ  (Uttarakhand) ನಡೆಯಲಿರುವ ಹಿನ್ನೆಲೆಯಲ್ಲಿ ಆಮ್​ ಆದ್ಮಿ ಪಕ್ಷ (Aam Aadmi Party) ಅಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಆಪ್​​ನ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal)​ ಇಂದು ಉತ್ತರಾಖಂಡ್​​ನ ಹಾಲ್ದ್​ವಾನಿಗೆ ಭೇಟಿ ನೀಡಿದ್ದು ಒಂದು ಬಹುದೊಡ್ಡ ಘೋಷಣೆ ಮಾಡಿದ್ದಾರೆ. ಉತ್ತರಾಖಂಡ್​​ನಲ್ಲಿ ಆಮ್​ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಆರೇ ತಿಂಗಳಲ್ಲಿ ಒಂದು ಲಕ್ಷ ಉದ್ಯೋಗ ನೀಡುತ್ತೇವೆ. ಇದರ ಹೊರತಾಗಿಯೂ ಮಾಸಿಕ 5000 ರೂ.ಭತ್ಯೆ ನೀಡಲಾಗುವುದು ಎಂದು ಹೇಳಿದ್ದಾರೆ. ಇನ್ನೊಂದು ಮಹತ್ವದ ಘೋಷಣೆಯೆಂದರೆ, ರಾಜ್ಯದಲ್ಲಿ ಶೇ.80 ರಷ್ಟು ಉದ್ಯೋಗವನ್ನು ಸ್ಥಳೀಯ ಜನರಿಗೇ ಮೀಸಲಾಗಿಡಲಾಗುತ್ತದೆ ಎಂದಿದ್ದಾರೆ.

ಇದಕ್ಕೂ ಮೊದಲೇ ಎರಡು ಬಾರಿ ಡೆಹ್ರಾಡೂನ್​ಗೆ ಅರವಿಂದ್ ಕೇಜ್ರಿವಾಲ್​ ಭೇಟಿ ನೀಡಿದ್ದರು. ಹಿಂದೊಮ್ಮೆ ಭೇಟಿ ನೀಡಿದಾಗ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಉತ್ತರಾಖಂಡ್​​ ರಾಜ್ಯವನ್ನು ಭಾರತದ ಅಧ್ಯಾತ್ಮ ರಾಜಧಾನಿಯನ್ನಾಗಿ ಘೋಷಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಹಾಗೇ ಈ ಬಾರಿ ಭೇಟಿ ನೀಡಿದ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಯುವಕರಿಗೆ ಉದ್ಯೋಗ ನೀಡುವುದು ಮೊದಲ ಆದ್ಯತೆ ಆಗಿರುತ್ತದೆ ಎಂದು ಹೇಳಿದ ಅರವಿಂದ್ ಕೇಜ್ರಿವಾಲ್​, ಅದಕ್ಕೆಂದೇ ಒಂದು ಪೋರ್ಟಲ್​ ನಿರ್ಮಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ.

ಉತ್ತರಾಖಂಡ್​ನಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ ಇಲ್ಲಿನ ಯುವಜನತೆ ವಲಸೆ ಹೋಗುವಂತಾಗಿದೆ. ಹಾಗಾಗಿ ಇಲ್ಲಿನ ಯುವಕರಿಗೆ ಇಲ್ಲೇ ಕೆಲಸ ಸಿಗುವಂತಾಗಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಖಂಡಿತ ಇದನ್ನು ಸಾಧ್ಯವಾಗಿಸುತ್ತೇವೆ ಎಂದು ಉತ್ತರಾಖಂಡ್​​ಗೆ ಭೇಟಿ ನೀಡುವುದಕ್ಕೂ ಮೊದಲು ಟ್ವೀಟ್​ನಲ್ಲಿ ಹೇಳಿದ್ದರು.  ಉತ್ತರಾಖಂಡ್​ ರಾಜ್ಯದಲ್ಲಿ ನಡೆಯಲಿರುವ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಆಪ್​ ಎಲ್ಲ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಅರವಿಂದ್ ಕೇಜ್ರಿವಾಲ್​ ಘೋಷಿಸಿದ್ದಾರೆ. ಹಾಗೇ, ನಿವೃತ್ತ ಕರ್ನಲ್​ ಅಜಯ್​ ಕೊಠಿಯಾಲ್​ ಅವರು ಮುಖ್ಯಮಂತ್ರಿ ಅಭ್ಯರ್ಥಿ ಎಂದೂ ಘೋಷಿಸಲಾಗಿದೆ.

ಇದನ್ನೂ ಓದಿ:  ಕಾರ್ಯಕ್ರಮ ಮುಗಿಯಿತು: ಕೊವಿಡ್ ಲಸಿಕೆ ವಿತರಣೆ ದಾಖಲೆ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ

IPL 2021: ಎಲ್ಲರೂ ಬಲಿಷ್ಠರೇ…ಆದರೆ 8 ತಂಡಗಳಲ್ಲೂ ಇದೆ ವೀಕ್​​ನೆಸ್ ಪಾಯಿಂಟ್

(Arvind Kejriwal announces 1 lakh govt jobs within 6 months in Uttarakhand)

Published On - 4:40 pm, Sun, 19 September 21

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ