AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಯಕ್ರಮ ಮುಗಿಯಿತು: ಕೊವಿಡ್ ಲಸಿಕೆ ವಿತರಣೆ ದಾಖಲೆ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ

Rahul Gandhi ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ನಿಮಿತ್ತ ಶುಕ್ರವಾರ ಒಂದೇ ದಿನದಲ್ಲಿ 2.5 ಕೋಟಿ ಜನರಿಗೆ ಭಾರತ ಲಸಿಕೆ ಹಾಕಿದೆ. Vaccination ಹ್ಯಾಶ್‌ಟ್ಯಾಗ್ ಲಸಿಕೆ ಬಳಸಿ ರಾಹುಲ್ ಗಾಂಧಿ ಟ್ವೀಟ್ ನಲ್ಲಿ "ಈವೆಂಟ್ ಓವರ್" ಎಂದು ಬರೆದಿದ್ದಾರೆ .

ಕಾರ್ಯಕ್ರಮ ಮುಗಿಯಿತು: ಕೊವಿಡ್ ಲಸಿಕೆ ವಿತರಣೆ ದಾಖಲೆ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Sep 19, 2021 | 4:29 PM

Share

ದೆಹಲಿ: ಒಂದೇ ದಿನದಲ್ಲಿ ದಾಖಲೆಯ ಕೊವಿಡ್ -19 (Covid-19) ಲಸಿಕೆಗಳ ವಿತರಣೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾನುವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು “ಕಾರ್ಯಕ್ರಮ” ಈಗ ಮುಗಿದಿದೆ ಎಂದು ಟ್ವೀಟ್ ಮಾಡಿದ್ದಾರೆ. ದಾಖಲೆಯ ನಂತರ ಚುಚ್ಚುಮದ್ದಿನ ಕುಸಿತವನ್ನು ತೋರಿಸಲು ಕೊವಿನ್ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ ಅವರು ಕಳೆದ 10 ದಿನಗಳಲ್ಲಿ ವ್ಯಾಕ್ಸಿನೇಷನ್ ಪ್ರವೃತ್ತಿಯ ಗ್ರಾಫ್ ಅನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ನಿಮಿತ್ತ ಶುಕ್ರವಾರ ಒಂದೇ ದಿನದಲ್ಲಿ 2.5 ಕೋಟಿ ಜನರಿಗೆ ಭಾರತ ಲಸಿಕೆ ಹಾಕಿದೆ. Vaccination ಹ್ಯಾಶ್‌ಟ್ಯಾಗ್ ಲಸಿಕೆ ಬಳಸಿ ರಾಹುಲ್ ಗಾಂಧಿ ಟ್ವೀಟ್ ನಲ್ಲಿ “ಈವೆಂಟ್ ಓವರ್” ಎಂದು ಬರೆದಿದ್ದಾರೆ .

ದೇಶದಲ್ಲಿ ಇಂತಹ ದಾಖಲೆಯ ಲಸಿಕೆಗಳು ಹೆಚ್ಚು ನಡೆಯಲಿ ಎಂದು ಗಾಂಧಿ ಶನಿವಾರ ಆಶಿಸಿದ್ದರು. “2.1 ಕೋಟಿ ಲಸಿಕೆಗಳನ್ನು ಇನ್ನೂ ಹಲವು ದಿನಗಳವರೆಗೆ ಎದುರು ನೋಡುತ್ತಿದ್ದೇನೆ. ಈ ವೇಗ ನಮ್ಮ ದೇಶಕ್ಕೆ ಬೇಕಾಗಿದೆ ”ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಶುಕ್ರವಾರ ದೇಶಾದ್ಯಂತ ಕೊವಿಡ್​ 19 ಲಸಿಕಾ ಬೃಹತ್​ ಮೇಳವನ್ನು ಆಯೋಜಿಸಲಾಗಿತ್ತು. ಇಂದು ಒಂದೇದಿನ 2 ಕೋಟಿ ಡೋಸ್​ ಗಡಿ ದಾಟುವ ಮೂಲಕ ದೇಶ ಕೊವಿಡ್​ 19 ಲಸಿಕೆ ಅಭಿಯಾನದಲ್ಲಿ ಮತ್ತೊಂದು ಹೆಜ್ಜೆ ಮುಂದಡಿ ಇಟ್ಟಿದೆ. ದೇಶದಲ್ಲಿ ಒಟ್ಟಾರೆ 78.68 ಕೋಟಿ ಡೋಸ್​ ಕೊರೊನಾ ಲಸಿಕೆ ನೀಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ ಕೇಂದ್ರ ಆರೋಗ್ಯ ಸಚಿವಾಲಯ, ಇಂದು 2 ಕೋಟಿಗೂ ಹೆಚ್ಚು ಡೋಸ್ ಕೊರೊನಾ ಲಸಿಕೆ ನೀಡುವ ಮೂಲಕ ಭಾರತದ ಕೊವಿಡ್​ 19 ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಖುಷಿ ಹಂಚಿಕೊಂಡಿದೆ.

ಇನ್ನು ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಫುಲ್​ ಖುಷಿಯಾಗಿದ್ದಾರೆ. ಇಂದಿನ ಲಸಿಕಾ ಮೇಳ ತುಂಬ ವೇಗವಾಗಿ ನಡೆಯಿತು. ಆರೋಗ್ಯ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಲೇಬೇಕು ಎಂದು ಹೇಳಿದ್ದಾರೆ. ಮಧ್ಯಾಹ್ನ 1.30ರ ಹೊತ್ತಿಗೆ ಒಂದು ಕೋಟಿ ಡೋಸ್​ ಮೀರಿದಾಗಲೇ ಟ್ವೀಟ್ ಮಾಡಿದ್ದ ಅವರು,  ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟಿದ ದಿನದಂತು ದೇಶ 1 ಕೋಟಿ ಡೋಸ್​ ಕೊವಿಡ್ 19 ಲಸಿಕೆಯನ್ನು ನೀಡಿದೆ. ಇನ್ನೂ ಸಂಜೆಯವರೆಗೆ ಸಮಯವಿದೆ. ಇಂದು ಕೊರೊನಾ ಲಸಿಕೆ ನೀಡುವುದರಲ್ಲಿ ನಾವು ಖಂಡಿತ ದಾಖಲೆ  ಬರೆಯುತ್ತೇವೆ. ಇದೇ ಪ್ರಧಾನಿ ಮೋದಿಯವರಿಗೆ ನೀಡುವ ಉಡುಗೊರೆ ಎಂದು ಹೇಳಿದ್ದರು.

ಭಾರತದಲ್ಲಿ ಜನವರಿಯಿಂದ ಕೊವಿಡ್​ 19 ಲಸಿಕಾ ಅಭಿಯಾನ ಶುರುವಾಗಿದ್ದರೂ ಕೆಲವು ಅಡಚಣೆಗಳ ಕಾರಣದಿಂದ ಮಧ್ರ ಸ್ವಲ್ಪ ದಿನ ತೊಡಕಾಗಿತ್ತು. ಆದರೆ ಈಗ ಅಭಿಯಾನ ವೇಗ ಪಡೆದುಕೊಂಡಿದೆ. ಇಲ್ಲಿಯವರೆಗೆ ಆಗಸ್ಟ್​ 27, ಆಗಸ್ಟ್​ 31 ಮತ್ತು ಸೆಪ್ಟೆಂಬರ್​ 6ರಂದು 1 ಕೋಟಿಗೂ ಹೆಚ್ಚು ಡೋಸ್​ಗಳಷ್ಟು ಕೊರೊನಾ ಲಸಿಕೆ ನೀಡಲಾಗಿತ್ತು.

ಇದನ್ನೂ ಓದಿ: Coronavirus: ಲಸಿಕೆ ಪಡೆದವರ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಕೊರೊನಾ, ಲಸಿಕೆ ಪಡೆದರೂ ಮರೆಯಬೇಡಿ ಮಾಸ್ಕ್

ಇದನ್ನೂ ಓದಿ:  ವಿರೋಧ ಪಕ್ಷ ಕಾಂಗ್ರೆಸ್‌ಗೆ ಲಸಿಕೆ ಜ್ವರ ಬಂದಿದೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

(Congress leader Rahul Gandhi took a swipe at the government over the record Covid-19 vaccinations in a single day)

Published On - 4:26 pm, Sun, 19 September 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!