Coronavirus: ಲಸಿಕೆ ಪಡೆದವರ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಕೊರೊನಾ, ಲಸಿಕೆ ಪಡೆದರೂ ಮರೆಯಬೇಡಿ ಮಾಸ್ಕ್

ಲಸಿಕೆ ಪಡೆದವರ ನಿರ್ಲಕ್ಷ್ಯದಿಂದಲೇ ಕೊರೊನಾ ಮತ್ತಷ್ಟು ಬಲಿಷ್ಠವಾಗಿ ಹರಡುತ್ತಿದೆ. ಗೌರಿ ಗಣೇಶ ಹಬ್ಬದ ಬಳಿಕ ಲಸಿಕೆ ಪಡೆದ ಶೇ.20ರಿಂದ 25ರಷ್ಟು ಜನರಿಗೆ ಕೊರೊನಾ ಸೋಂಕು ತಗುಲಿದೆ.

Coronavirus: ಲಸಿಕೆ ಪಡೆದವರ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಕೊರೊನಾ, ಲಸಿಕೆ ಪಡೆದರೂ ಮರೆಯಬೇಡಿ ಮಾಸ್ಕ್
Follow us
TV9 Web
| Updated By: ಆಯೇಷಾ ಬಾನು

Updated on: Sep 19, 2021 | 12:11 PM

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಆತಂಕ ಈಗ ಮತ್ತೆ ಹೆಚ್ಚಾಗುತ್ತಿದೆ. ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. 2 ಡೋಸ್ ಲಸಿಕೆ ಪಡೆದವರು ನಮಗೆ ಕೊರೊನಾ ಬರೋದಿಲ್ಲ ನಾವು ಕೊರೊನಾ ಮುಕ್ತ ಎಂದು ನಿರ್ಲಕ್ಷ್ಯದಿಂದ ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಮಾಸ್ಕ್ ಧರಿಸದೇ ಉಡಾಫೆ ವರ್ತನೆಯಿಂದ ಸಂಕಷ್ಟ ಹೆಚ್ಚಾಗುತ್ತಿದೆ.

ಲಸಿಕೆ ಪಡೆದವರ ನಿರ್ಲಕ್ಷ್ಯದಿಂದಲೇ ಕೊರೊನಾ ಮತ್ತಷ್ಟು ಬಲಿಷ್ಠವಾಗಿ ಹರಡುತ್ತಿದೆ. ಗೌರಿ ಗಣೇಶ ಹಬ್ಬದ ಬಳಿಕ ಲಸಿಕೆ ಪಡೆದ ಶೇ.20ರಿಂದ 25ರಷ್ಟು ಜನರಿಗೆ ಕೊರೊನಾ ಸೋಂಕು ತಗುಲಿದೆ. ನಿತ್ಯ ದಾಖಲಾಗುವ ಸೋಂಕಿತರಲ್ಲಿ 70 ರಿಂದ 80 ರಷ್ಟು ಸೋಂಕಿತರು ಲಸಿಕೆ ಪಡೆದವರಿರುತ್ತಾರೆ. ಬೆಂಗಳೂರು ನಗರದಲ್ಲಿ ಬ್ರೇಕ್ ಥ್ರೂ ಇನ್ಫೆಕ್ಷನ್ ಹೆಚ್ಚಾಗುತ್ತಿದೆ.

ವೈರಲ್ ಫೀವರ್ಗೇ ಬೆಂಗಳೂರಲ್ಲಿ ಬೆಡ್ಗಳು ಭರ್ತಿ! ಇಷ್ಟು ದಿನ ಬೆಂಗಳೂರಲ್ಲಿ ಕೊರೊನಾ, ಬ್ಲ್ಯಾಕ್ ಫಂಗಸ್ ಅಂತಾ ಬೆಡ್ಗಳು ಫುಲ್ ಆಗಿದ್ದವು ಇದೀಗ ವೈರಲ್ ಫೀವರ್ನಿಂದ ಮಕ್ಕಳ ಆಸ್ಪತ್ರೆಗಳ ಬೆಡ್ಗಳು ಫುಲ್ ಆಗಿವೆ.

ಕೆ.ಸಿ. ಜನರಲ್ ಆಸ್ಪತ್ರೆಗೆ ನಿತ್ಯ 140ರಿಂದ 150 ಮಕ್ಕಳು ವೈರ್ಲ ಇನ್ಫೆಕ್ಷನ್ನಿಂದಾಗಿ OPDಗೆ ದಾಖಲಾಗ್ತಿದ್ದಾರೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ 36 ಬೆಡ್ ಮೀಸಲಿಡಲಾಗಿದ್ದು, ಆ 36 ಬೆಡ್ಗಳೂ ಭರ್ತಿಯಾಗಿವೆ. ಇನ್ನು 10 ಐಸಿಯು ಬೆಡ್ಗಳ ಪೈಕಿ 6 ಬೆಡ್ಗಳು ಭರ್ತಿಯಾಗಿವೆ. ಇನ್ನು ವಾಣಿ ವಿಲಾಸ ಆಸ್ಪತ್ರೆಯಲ್ಲಿಯೂ ಶೇ 60 ರಷ್ಟು ಮಕ್ಕಳ ಬೆಡ್ ಫುಲ್ ಆಗಿವೆ. ಮಕ್ಕಳಿಗಾಗಿ ಪ್ರತ್ಯೇಕ 110 ಬೆಡ್ ಗಳು ಮೀಸಲು ಇಡಲಾಗಿದೆ. ಈ ಪೈಕಿ 70 ಬೆಡ್ಗಳಲ್ಲಿ ವೈರಲ್ ಫೀವರ್ನಿಂದ ಬಳಲ್ತಿರೋ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 6 ICU ಬೆಡ್ಗಳ ಫೈಕಿ ಕೇವಲ 2 ಬೆಡ್ಗಳು ಖಾಲಿ ಇವೆ. ವಾಣಿವಿಲಾಸ ಆಸ್ಪತ್ರೆಯ OPD ವಿಭಾಗಕ್ಕೆ ಪ್ರತಿನಿತ್ಯ 80ದಿಂದ 90 ಮಕ್ಕಳು ದಾಖಲಾಗ್ತಿದ್ದಾರೆ. ಇತ್ತ ವಿಕ್ಟೋರಿಯಾ ಆಸ್ಪತ್ರೆಯಲ್ಲಿಯೂ ಶೇಕಡಾ 60ರಷ್ಟು ಬೆಡ್ಗಳು ಭರ್ತಿಯಾಗಿವೆ. ಇಲ್ಲಿನ ಕೊವಿಡ್ ಹಾಗೂ ಹೆರಿಗೆ ವಾರ್ಡ್ನಲ್ಲಿ ಮಕ್ಕಳಿಗಾಗಿ 182 ಬೆಡ್ ಮೀಸಲಿಡಲಾಗಿದೆ. ಇದ್ರಲ್ಲಿ 120 ಬೆಡ್ಗಳು ವೈರಲ್ ಇನ್ಫೆಕ್ಷನ್ ಹಾಗೂ ಬೇರೆ ಕಾಯಿಲೆಯಿಂದ ಬಳಲ್ತಿರೋ ಮಕ್ಕಳಿಗೆ ಮೀಸಲಿಡಲಾಗಿದೆ. ಈ ಪೈಕಿ 80 ಬೆಡ್ಗಳು ಈಗಾಗಲೇ ಫುಲ್ ಆಗಿವೆ. ಇನ್ನು 8 ICU ಬೆಡ್ಗಳ ಪೈಕಿ 5 ಭರ್ತಿಯಾಗಿವೆ. ಇನ್ನು ಪ್ರತಿ ನಿತ್ಯ 70 ರಿಂದ 80 ರಷ್ಟು ಮಕ್ಕಳು ಪ್ರತಿ ನಿತ್ಯ OPDಗೆ ದಾಖಲಾಗ್ತಿದ್ದಾರೆ. ಮತ್ತೊಂದೆಡೆ ಬೌರಿಂಗ್, ಇಎಸ್ಐ ಹಾಗೂ ಕೆಲ ಖಾಸಗಿ ಆಸ್ಪತ್ರೆಗಳಲ್ಲಿಯೂ ಶೇ 50 ರಷ್ಟು ಬೆಡ್ ಫುಲ್ ಆಗಿವೆ.

ಬ್ರಾಂಕೈಟಿಸ್, ಡೆಂಘೀ, ನ್ಯೂಮೋನಿಯಾ, ರಕ್ತಹಿನತೆ, ಅಸ್ತಮಾ ಸೇರಿದಂತೆ ನಾನಾ ಇನ್ಫೆಕ್ಷನ್ಗಳಿಂದ ಬಳಲ್ತಿರೋ ಮಕ್ಕಳು ಆಸ್ಪತ್ರೆಗೆ ದಾಖಲಾಗ್ತಿದ್ದಾರೆ. ಇದ್ರಲ್ಲಿ ಶೇಕಡಾ 50ರಷ್ಟು ಮಕ್ಕಳು ಉಸಿರಾಟದ ಸಮಸ್ಯೆಯಿಂದ ಬಳಲ್ತಿದ್ದಾರೆ.

ಇದನ್ನೂ ಓದಿ: 2.5 ಕೋಟಿ ಡೋಸ್​ ದಾಖಲೆ ಬರೆದ ಕೊರೊನಾ ಲಸಿಕೆ ಅಭಿಯಾನ; ಎರಡನೇ ಸ್ಥಾನದಲ್ಲಿದೆ ಕರ್ನಾಟಕ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್