AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2.5 ಕೋಟಿ ಡೋಸ್​ ದಾಖಲೆ ಬರೆದ ಕೊರೊನಾ ಲಸಿಕೆ ಅಭಿಯಾನ; ಎರಡನೇ ಸ್ಥಾನದಲ್ಲಿದೆ ಕರ್ನಾಟಕ

ಕೊರೊನಾ ಲಸಿಕೆ ಅಭಿಯಾನದಲ್ಲಿ ಅದ್ಭುತ ಗುರಿ ಸಾಧಿಸಿದ ಬಗ್ಗೆ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೇ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವೀಟ್​ ಮಾಡಿ, ಇದು ಹೆಮ್ಮೆ ಪಡುವ ವಿಚಾರ ಎಂದಿದ್ದಾರೆ.

2.5 ಕೋಟಿ ಡೋಸ್​ ದಾಖಲೆ ಬರೆದ ಕೊರೊನಾ ಲಸಿಕೆ ಅಭಿಯಾನ; ಎರಡನೇ ಸ್ಥಾನದಲ್ಲಿದೆ ಕರ್ನಾಟಕ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Sep 18, 2021 | 9:37 AM

Share

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ (PM Modi ದ ಹಿನ್ನೆಲೆಯಲ್ಲಿ ದೇಶಾದ್ಯಂತ ಕೊವಿಡ್​ 19 ಲಸಿಕೆ ಸೇವೆ ಅಭಿಯಾನ (Covid 19 Vaccine Drive) ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಅದ್ಭುತ ಗುರಿಸಾಧನೆಯಾಗಿದೆ. ನಿನ್ನೆ ದೇಶದಲ್ಲಿ ಬರೋಬ್ಬರಿ 2.5 ಕೋಟಿ ಡೋಸ್​ ಕೊರೊನಾ ಲಸಿಕೆ ನೀಡಲಾಗಿದೆ. ಇದು ಹಿಂದೆಂದಿಗಿಂತಲೂ ಅಧಿಕವಾಗಿದ್ದು ಹೊಸದಾಖಲೆ ಸೃಷ್ಟಿಯಾಗಿದೆ. ಇನ್ನು ಭಾರತ ಒಂದೇ ದಿನದಲ್ಲಿ 2.5ಕೋಟಿ ಡೋಸ್​ ಕೊರೊನಾ ಲಸಿಕೆ ನೀಡಿದ್ದಕ್ಕೆ ಕೇಂದ್ರ ಸಚಿವರಾದಿಯಿಂದ ಹಿಡಿದು ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಈ ಸೇವಾ ಅಭಿಯಾನ ಹಮ್ಮಿಕೊಂಡು, ಅದನ್ನು ಯಶಸ್ವಿಯಾಗಿ ನಡೆಸಿದ ಬಿಜೆಪಿಯ ಪ್ರತಿ ಕಾರ್ಯಕರ್ತರ, ನಾಯಕರಿಗೂ ಧನ್ಯವಾದ ಎಂದು ಹೇಳಿದ್ದಾರೆ. 

ನಿನ್ನೆ ಎಲ್ಲ ರಾಜ್ಯಗಳಲ್ಲೂ ಅದ್ಭುತವಾಗಿ ಕೊರೊನಾ ಲಸಿಕೆ ಅಭಿಯಾನ ನಡೆಸಲಾಗಿದೆ. ಅದರಲ್ಲೂ ಬಿಹಾರ ಪ್ರಥಮ ಸ್ಥಾನದಲ್ಲಿದೆ. ನಿನ್ನೆ ರಾತ್ರಿ 11.20ರ ಡಾಟಾ ಪ್ರಕಾರ ಬಿಹಾರದಲ್ಲಿ ಬರೋಬ್ಬರಿ 29,38,653  ಡೋಸ್​ ಕೊರೊನಾ ಲಸಿಕೆ ನೀಡಲಾಗಿದ್ದು, ಮೊದಲ ಸ್ಥಾನದಲ್ಲಿದೆ. ಅದಾದ ನಂತರ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ಇಲ್ಲಿ ನಿನ್ನೆ ಒಂದೇ ದಿನ  27,80,032 ಡೋಸ್​ ಲಸಿಕೆ ನೀಡಲಾಗಿದ್ದು, ಮೂರನೇ ಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ ನಿನ್ನೆ 24.86 ಲಕ್ಷ ಡೋಸ್​ ನೀಡಲಾಗಿದೆ.

ಇನ್ನು ಕೊರೊನಾ ಲಸಿಕೆ ಅಭಿಯಾನದಲ್ಲಿ ಅದ್ಭುತ ಗುರಿ ಸಾಧಿಸಿದ ಬಗ್ಗೆ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೇ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವೀಟ್​ ಮಾಡಿ, ಇಂದು ಕೊರೊನಾ ಲಸಿಕೆ ನೀಡುವುದರಲ್ಲಿ ಭಾರತ ದಾಖಲೆ ಮಾಡಿದ್ದು, ಪ್ರತಿ ಭಾರತೀಯನೂ ಹೆಮ್ಮೆ ಪಡುವ ವಿಚಾರ ಇದು. ನಮ್ಮ ಎಲ್ಲ ವೈದ್ಯರು, ಆಡಳಿತ ಸಿಬ್ಬಂದಿ, ನರ್ಸ್​ಗಳು, ಆರೋಗ್ಯ ಸಿಬ್ಬಂದಿಗೆ ಧನ್ಯವಾದಗಳು. ಇವರಿಂದಾಗಿಯೇ ಲಸಿಕೆ ಅಭಿಯಾನದಲ್ಲಿ ಅಷ್ಟು ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತು  ಎಂದು ಟ್ವೀಟ್ ಮಾಡಿದ್ದಾರೆ.  ಹಾಗೇ, ಕೊರೊನಾ ಲಸಿಕೆಯನ್ನು ಅತ್ಯಂತ ಹೆಚ್ಚು ನೀಡಿದ ಎರಡನೇ ರಾಜ್ಯ ಕರ್ನಾಟಕವಾಗಿದ್ದು, ಆರೋಗ್ಯ ಸಚಿವ ಸುಧಾಕರ್​ ಕೂಡ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.

ಇದನ್ನೂ ಓದಿ: Health Tips: ನಿಮ್ಮ ಪಾದಗಳು ಆರೋಗ್ಯವಾಗಿರಲು ಈ ಕೆಲವು ಸಲಹೆಗಳು ನಿಮಗಾಗಿ

‘ಕಾಬೂಲ್​ ಏರ್​ಪೋರ್ಟ್​​ ಮೇಲೆ ನಾವು ಡ್ರೋನ್​ ದಾಳಿ ಮಾಡಿದ್ದು ತಪ್ಪಾಯ್ತು’-ಕ್ಷಮೆ ಕೇಳಿದ ಯುಎಸ್​