Health Tips: ನಿಮ್ಮ ಪಾದಗಳು ಆರೋಗ್ಯವಾಗಿರಲು ಈ ಕೆಲವು ಸಲಹೆಗಳು ನಿಮಗಾಗಿ

ಬಿರುಕು ಬಿಟ್ಟ ಪಾದಗಳ ಹಿಮ್ಮಡಿಯಲ್ಲಿ ಮಣ್ಣಿನ ಕಣಗಳು ಸೇರಿಕೊಳ್ಳುವುದರಿಂದ ನೋವಿನ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಹಾಗಾಗಿ ಪಾದಗಳ ಆರೈಕೆಗಾಗಿಯೇ ಕೆಲವೊಂದಿಷ್ಟು ಸಲಹೆಗಳು ನಿಮಗಾಗಿ.

Health Tips: ನಿಮ್ಮ ಪಾದಗಳು ಆರೋಗ್ಯವಾಗಿರಲು ಈ ಕೆಲವು ಸಲಹೆಗಳು ನಿಮಗಾಗಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Sep 18, 2021 | 8:56 AM

ಸಾಮಾನ್ಯವಾಗಿ ಪಾದಗಳು ಸುಂದರವಾಗಿ ಕಾಣಿಸಬೇಕು ಎಂಬುದು ಎಲ್ಲರ ಆಸೆ. ಹಾಗಾಗಿಯೇ ಹೆಚ್ಚು ಆರೈಕೆ ಮಾಡಿ, ಪಾದಗಳ ಆರೋಗ್ಯವನ್ನು ಕಾಪಾಡಿಕೊಳ್ಳುತ್ತೇವೆ. ಚರ್ಮದ ಒಡೆತದಿಂದ ನೋವು ಕಾಣಿಸಿಕೊಳ್ಳುತ್ತಿರಬಹುದು. ಇಲ್ಲವೇ ಕಾಲು ಒಡೆತದಿಂದ ಪಾದಗಳು ಹೆಚ್ಚು ಹಾನಿಗೊಳಗಾಗಿರಬಹುದು. ಇದರಿಂದ ನೋಡಲು ಅಷ್ಟು ಸುಂದರವಾಗಿ ಕಾಣಿಸುವುದಿಲ್ಲ. ಜತೆಗೆ ಬಿರುಕು ಬಿಟ್ಟ ಪಾದಗಳ ಹಿಮ್ಮಡಿಯಲ್ಲಿ ಮಣ್ಣಿನ ಕಣಗಳು ಸೇರಿಕೊಳ್ಳುವುದರಿಂದ ನೋವಿನ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಹಾಗಾಗಿ ಪಾದಗಳ ಆರೈಕೆಗಾಗಿಯೇ ಕೆಲವೊಂದಿಷ್ಟು ಸಲಹೆಗಳು ನಿಮಗಾಗಿ.

ಸುಂದರ ಪಾದಗಳನ್ನು ಹೊಂದಲು ಕೆಲವು ಸಲಹೆಗಳು ಸ್ವಚ್ಛವಾಗಿಟ್ಟುಕೊಳ್ಳಿ ಮತ್ತು ಕಾಲನ್ನು ಒಣಗಿಸಿಟ್ಟುಕೊಳ್ಳಿ ನೀವು ಹೊರಗಡೆ ಓಡಾಡಿದಂತೆಯೇ ಪಾದಗಳು ಧೂಳು, ಮಣ್ಣಿನ ಕಣಗಳು, ಕೊಳಕಿನಿಂದ ಹಾನಿಗೊಳಗಾಗುತ್ತವೆ. ಜತೆಗೆ ಅತಿಯಾಗಿ ಓಡಾಡುವುದರಿಂದ ಪಾದಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ನಂಜಿನ ಶರೀರದವರಿಗೆ ಕಾಲುಗಳ ಬೆರಳುಗಳ ಸಂದಿಯಲ್ಲಿ ಗಾಯವಾಗಬಹುದು. ಹಾಗಾಗಿ ಎಂದೂ ಒದ್ದೆಯಾದ ಕಾಲನ್ನು ಹೊಂದಬೇಡಿ. ನೀರಿನಲ್ಲಿ ತೊಳೆದ ತಕ್ಷಣ ಒಣ ವಸ್ತ್ರದಲ್ಲಿ ಕಾಲನ್ನು ಒರೆಸಿಕೊಳ್ಳಿ.

ಶೂಗಳು ಮತ್ತು ಸಾಕ್ಸ್​ಗಳ ಬಳಕೆ ಧೂಳು, ಮಣ್ಣು ಮತ್ತು ವಾತಾವರಣದ ಏರು ಪೇರಿನಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹಾಗಾಗಿ ಹೊರಗಡೆ ಹೋಗುವಾಗ ಶೂ ಧರಿಸುವುದರ ಜತೆಗೆ ಸಾಕ್ಸ್​ಗಳನ್ನು ಹಾಕಿಕೊಳ್ಳಿ. ಆಗ ನಿಮ್ಮ ಪಾದಗಳು ಕೆಸರು ಹಾಗೂ ಹಾನಿಕಾರಕ ವಸ್ತುಗಳು ತಗುಲಿ ಹಾನಿಗೊಳಗಾಗುವುದನ್ನು ತಡೆಯಬಹುದು.

ಪಾದಗಳ ನೈರ್ಮಲ್ಯದ ಬಗ್ಗೆ ಜಾಗರೂಕರಾಗಿರಿ ಶುಚಿತ್ವ ಮತ್ತು ನೈರ್ಮಲ್ಯದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಮಲಗುವಾಗ ಕಾಲಿನ ಪಾದಗಳನ್ನು ಸ್ವಚ್ಛವಾಗಿ ತೊಳೆದು ಒಣ ವಸ್ತ್ರದಲ್ಲಿ ಒರೆಸಿ. ಬಳಿಕ ಶುದ್ಧವಾದ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ. ಇದರಿಂದ ನಿಮ್ಮ ಪಾದದ ಚರ್ಮ ಹೊಳಪು ಪಡೆಯುತ್ತದೆ ಮತ್ತು ಚರ್ಮ ಹೆಚ್ಚು ಮೃದುವಾಗಿ ಸುಂದರವಾಗಿ ಕಾಣಿಸುತ್ತದೆ.

ಬೇರೆಯವರ ಶೂಗಳನ್ನು ಎಂದಿಗೂ ಧರಿಸಬೇಡಿ ಚರ್ಮದ ಖಾಯಿಲೆಗಳು ಬಹುಬೇಗ ಹರಡುತ್ತವೆ. ಹಾಗಾಗಿ ಇನ್ನೊಬ್ಬರ ಶೂಗಳನ್ನು ಅಥವಾ ಸಾಕ್ಸ್​ಗಳನ್ನು ಧರಿಸುವುದು ಒಳ್ಳೆಯದಲ್ಲ. ಜತೆಗೆ ಅವರ ಬೆವರು, ಧೂಳು ನಿಮ್ಮ ಕಾಲಿಗೆ ಅಂಟಿಕೊಳ್ಳುವುದರಿಂದ ಅಲರ್ಜಿಯಂತಹ ಸಮಸ್ಯೆಗಳನ್ನು ಎದುರಿಸಬಹುದಾದ ಪರಿಸ್ಥಿತಿ ಬರಬಹುದು.

ಇದನ್ನೂ ಓದಿ:

Health Tips: ಬಾಯಿಯಿಂದ ದುರ್ವಾಸನೆ ಬರುತ್ತಿದೆಯೇ? ಸಮಸ್ಯೆ ಪರಿಹಾರಕ್ಕಾಗಿ ಇಲ್ಲಿದೆ ಸರಳ ಸಲಹೆಗಳು

Health Tips: ಒಮ್ಮೆ ಮಾಡಿಟ್ಟ ಚಹಾ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ; ಕಾರಣ ತಿಳಿದುಕೊಳ್ಳಿ

(Know about these tips for have healthy feet check in Kannada)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್