AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಒಮ್ಮೆ ಮಾಡಿಟ್ಟ ಚಹಾ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ; ಕಾರಣ ತಿಳಿದುಕೊಳ್ಳಿ

Tea: ಒಂದೇ ಬಾರಿ ತುಂಬಾ ಚಹಾ ಮಾಡಿ ಇಟ್ಟುಕೊಂಡು ಅದನ್ನೇ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುತ್ತೇವೆ. ಆದರೆ ಇದರಿಂದ ಆರೋಗ್ಯ ಸಮಸ್ಯೆಗಳು ಇದೆ ಎಂಬುದು ಗೊತ್ತೇ? ಒಮ್ಮೆ ಮಾಡಿಟ್ಟ ಚಹಾ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯಬಾರದು ಯಾಕೆ ಎಂದು ಇಲ್ಲಿ ವಿವರಿಸಲಾಗಿದೆ.

Health Tips: ಒಮ್ಮೆ ಮಾಡಿಟ್ಟ ಚಹಾ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ; ಕಾರಣ ತಿಳಿದುಕೊಳ್ಳಿ
ಚಹಾ
TV9 Web
| Updated By: shruti hegde|

Updated on: Sep 13, 2021 | 8:23 AM

Share

ಬಹುತೇಕ ಮಂದಿ ಬೆಳಗ್ಗೆ ಚಹಾ ಕುಡಿಯುವ ಮೂಲಕ ದಿನ ಆರಂಭಿಸುತ್ತಾರೆ. ಬೆಳಗಾದರೆ ಚಹಾ ಕುಡಿಯದೆ ದಿನ ದೂಡಲು ಆಗುವುದಿಲ್ಲ. ಟೀ ಬೇಕೇ ಬೇಕು ಎಂದು ಚಹಾವನ್ನು ಬಿಟ್ಟು ಇರುವುದಿಲ್ಲ. ಚಹಾ ಕೂಟ, ಟೀ ಪಾರ್ಟಿ, ಟೀ ಟೈಂ ಎಂದು ಚಹಾ ಎಂಬ ಪಾನೀಯ ಒಬ್ಬರನ್ನು ಒಬ್ಬರು ಬೆಸೆಯಲು ಕೂಡ ಸಹಕಾರಿ ಆಗಿದೆ. ಚಹಾ ಕುಡಿಯುವುದರಿಂದ ರಿಫ್ರೆಶ್ ಆದ ಅನುಭವ ಸಿಗುತ್ತದೆ. ಆಯಾಸ ಪರಿಹಾರ ಆಯ್ತು ಎಂದು ಜನ ಖುಷಿ ಪಡುತ್ತಾರೆ. ನಮ್ಮ ಚೈತನ್ಯ ಹೆಚ್ಚುತ್ತದೆ ಹೀಗೆ ಚಹಾ ಕುಡಿಯುವುದಕ್ಕೆ ಹಲವು ಕಾರಣಗಳನ್ನು ಜನ ನೀಡುತ್ತಾರೆ. ಕೆಲಸದ ಸುಸ್ತು ಪರಿಹರಿಸಲು ಚಹಾ ಉತ್ತಮ ಜೊತೆಗಾರ. ಆದರೆ ಕೆಲವರಿಗೆ ಅಗತ್ಯಕ್ಕಿಂತ ಹೆಚ್ಚು ಚಹಾ ಕುಡಿಯುವ ಅಭ್ಯಾಸವೂ ಇರುವುದು ಅಪಾಯಕಾರಿ.

ಹಲವು ಬಾರಿ ಇನ್ನೊಂದು ತಪ್ಪು ನಾವು ಮಾಡುತ್ತೇವೆ. ಅಂದರೆ, ಮತ್ತೆ ಮತ್ತೆ ಬೇಕಾದಾಗ ಚಹಾ ಮಾಡಲು ಉದಾಸೀನ ತೋರುತ್ತೇವೆ. ಬದಲಾಗಿ ಒಂದೇ ಬಾರಿ ತುಂಬಾ ಚಹಾ ಮಾಡಿ ಇಟ್ಟುಕೊಂಡು ಅದನ್ನೇ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುತ್ತೇವೆ. ಆದರೆ ಇದರಿಂದ ಆರೋಗ್ಯ ಸಮಸ್ಯೆಗಳು ಇದೆ ಎಂಬುದು ಗೊತ್ತೇ? ಒಮ್ಮೆ ಮಾಡಿಟ್ಟ ಚಹಾ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯಬಾರದು ಯಾಕೆ ಎಂದು ಇಲ್ಲಿ ವಿವರಿಸಲಾಗಿದೆ.

ರುಚಿ ಮತ್ತು ವಾಸನೆ ಬದಲಾಗುತ್ತದೆ ಒಮ್ಮೆ ಮಾಡಿದ ಟೀ ಮತ್ತೆ ಬಿಸಿ ಮಾಡುವುದರಿಂದ ಅದರ ವಾಸನೆ ಮತ್ತು ರುಚಿ ಕೆಡುತ್ತದೆ. ಚಹಾ ಕುಡಿಯುವ ಅನುಭವ ಉತ್ತಮವಾಗುವುದೇ ಅದರ ವಾಸನೆ ಮತ್ತು ರುಚಿಯಿಂದ. ಅದೇ ಇಲ್ಲವಾದರೆ ಚಹಾದ ಸ್ವಾದ ಸಿಗಲಾರದು. ಅಷ್ಟೇ ಅಲ್ಲದೆ, ಚಹಾ ಮತ್ತೆ ಬಿಸಿ ಮಾಡುವುದರಿಂದ ಅದರ ಸತ್ವವೂ ನಾಶವಾಗುತ್ತದೆ.

ಬ್ಯಾಕ್ಟೀರಿಯ ಅಧಿಕವಾಗುತ್ತದೆ ಮೊದಲು ಮಾಡಿಟ್ಟ ಚಹಾ ಸೇವಿಸುವುದು ಅಥವಾ ಅದನ್ನು ಮತ್ತೆ ಬಿಸಿ ಮಾಡಿ ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿ. ಅಂದರೆ, ಅಂತಹ ಚಹಾದಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಈ ಸಣ್ಣ ಬ್ಯಾಕ್ಟೀರಿಯಾಗಳು ಆರೋಗ್ಯಕ್ಕೆ ಹಾನಿಕಾರಕ. ನಮ್ಮಲ್ಲಿ ಬಹುತೇಕ ಮನೆಗಳಲ್ಲಿ ಮಾಡುವ ಚಹಾದಲ್ಲಿ ಹಾಲಿನ ಅಂಶ ಹೆಚ್ಚಾಗಿ ಇರುತ್ತದೆ. ಇದರಿಂದಾಗಿ ಸಣ್ಣ ಬ್ಯಾಕ್ಟೀರಿಯಾಗಳ ಬೆಳವಣಿಗೆ ಪ್ರಮಾಣ ಅಧಿಕ ಆಗಿರುತ್ತದೆ.

ಹೊಟ್ಟೆ ನೋವಿನಂತಹ ಸಮಸ್ಯೆ ಕಾಣಬಹುದು ತಣಿದ ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುತ್ತಾ ಇರುವುದರಿಂದ ಹಾಗೂ ಇದೇ ಅಭ್ಯಾಸವನ್ನು ದೀರ್ಘಕಾಲದ ವರೆಗೆ ಉಳಿಸಿಕೊಂಡರೆ ಅದರಿಂದ ಆರೋಗ್ಯ ಸಮಸ್ಯೆ ಕಾಣಬಹುದು. ಹೊಟ್ಟೆ ಕೆಡುವುದು, ಹೊಟ್ಟೆ ನೋವು ಕಾಣುವುದು ಆಗಬಹುದು. ಆದ್ದರಿಂದ ಈ ಅಭ್ಯಾಸ ಬಿಡುವುದು ಒಳ್ಳೆಯದು.

ಈ ವಿಚಾರಗಳನ್ನು ಗಮನಿಸಿ ಈಗ ಮಾಡಿದ ಚಹಾವನ್ನು ಮತ್ತೆ ಐದು ಅಥವಾ ಹದಿನೈದು ನಿಮಿಷಗಳ ಅಂತರದಲ್ಲೇ ಮತ್ತೆ ಬಿಸಿ ಮಾಡಿಕೊಂಡು ಕುಡಿದರೆ ಅದರಿಂದ ಸಮಸ್ಯೆಗಳೇನು ಉಂಟಾಗದು. ಆದರೆ ಉದಾಹರಣೆಗೆ, ಬೆಳಗ್ಗೆ 7 ಗಂಟೆಗೇ ಚಹಾ ಮಾಡಿಟ್ಟು ಹತ್ತು ಗಂಟೆಗೆ ಮತ್ತೆ ಅದನ್ನೇ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ. ಹಾಗಾಗಿ ಸಾಧ್ಯವಾದಷ್ಟು ಮಿತಿಯಲ್ಲಿ ಚಹಾ ಮಾಡಿಕೊಳ್ಳಿ. ಬೇಕಾದಷ್ಟು ಚಹಾ ಮಾಡಿ ಕುಡಿದು ಮುಗಿಸಿ. ಉಳಿಸಬೇಡಿ.

ಇದನ್ನೂ ಓದಿ: Women Health: ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ ಹೆಚ್ಚಾಗಲು ಕಾರಣ ಏನು? ಇದರ ಲಕ್ಷಣಗಳನ್ನು ಗುರುತಿಸುವುದು ಹೇಗೆ?

ಇದನ್ನೂ ಓದಿ: Child health: ನಿಮ್ಮ‌ ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ಪಾಲಿಸಲೇಬೇಕಾದ ಕೆಲವು ಸಲಹೆಗಳು ಇಲ್ಲಿವೆ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ