Child health: ನಿಮ್ಮ‌ ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ಪಾಲಿಸಲೇಬೇಕಾದ ಕೆಲವು ಸಲಹೆಗಳು ಇಲ್ಲಿವೆ

ಕೆಲವರು ಬಾರಿ ಚಿಕ್ಕ ವಯಸ್ಸಿನಲ್ಲಿರುವ ಮಕ್ಕಳ ನಿಮ್ಮಂತೆಯೇ ಕಲಿಯುತ್ತಾರೆ. ಕೆಲವು ಬಾರಿ ನೀವು ಕೋಪದಲ್ಲಿದ್ದಾಗಿನ ಪ್ರತಿಕ್ರಿಯೆಯನ್ನು ಮಕ್ಕಳೂ ಸಹ ಕಲಿಯುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಈ ಕೆಲವು ವಿಷಯಗಳನ್ನು ಪೋಷಕರು ನೆನಪಿನಲ್ಲಿಕೊಳ್ಳುವುದು ಉತ್ತಮ.

Child health: ನಿಮ್ಮ‌ ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ಪಾಲಿಸಲೇಬೇಕಾದ ಕೆಲವು ಸಲಹೆಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Sep 11, 2021 | 9:07 AM

ಮಕ್ಕಳ ಮೊದಲ ಗುರು ಮಗುವಿನ ತಾಯಿ. ಹುಟ್ಟಿದಾಗಿನಿಂದ ಸುರಕ್ಷಿತವಾಗಿ ತನ್ನ ಮಗುವನ್ನು ಬೆಳೆಸುತ್ತಾರೆ. ಆರೋಗ್ಯದಲ್ಲಿ ಯಾವುದೇ ಹಾನಿಯಾಗದಂತೆ ಮಗುವನ್ನು ಕಾಪಾಡುತ್ತಾಳೆ. ಮಕ್ಕಳು ಬೆಳೆಯುತ್ತಿದ್ದಂತೆಯೇ ಕೆಲವು ಸಹವಾಸ ದೋಷಗಳಿಂದಲೋ ಅಥವಾ ಮನಸಿನ ಸ್ಥಿತಿ ಅಸಮತೋಲನದಿಂದ ದಾರಿ ತಪ್ಪುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಈ ಕೆಲವು ಅಂಶಗಳ ಬಗೆಗೆ ತಾಯಿ ಹೆಚ್ಚು ಗಮನವಹಿಸುವುದು ಮುಖ್ಯ.

ಕೆಲವರು ಬಾರಿ ಚಿಕ್ಕ ವಯಸ್ಸಿನಲ್ಲಿರುವ ಮಕ್ಕಳ ನಿಮ್ಮಂತೆಯೇ ಕಲಿಯುತ್ತಾರೆ. ಕೆಲವು ಬಾರಿ ನೀವು ಕೋಪದಲ್ಲಿದ್ದಾಗಿನ ಪ್ರತಿಕ್ರಿಯೆಯನ್ನು ಮಕ್ಕಳೂ ಸಹ ಕಲಿಯುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಈ ಕೆಲವು ವಿಷಯಗಳನ್ನು ಪೋಷಕರು ನೆನಪಿನಲ್ಲಿಕೊಳ್ಳುವುದು ಉತ್ತಮ. ಈ ವಿಷಯಗಳಲ್ಲಿ ಪೋಷಕರು ಯಾವಾಗಲೂ ಜಾಗರೂಕರಾಗಿರಬೇಕು.

ಜಗಳ ಮಕ್ಕಳ ಎದುರು ಎಂದಿಗೂ ಜಗಳವಾಡಲು ಹೋಗಬೇಡಿ. ನಿಮ್ಮ ಕೋಪದ ಮಧ್ಯೆ ನೀವು ಮಾತನಾಡುವ ಕೆಲವು ಶಬ್ದಗಳನ್ನು ಮಕ್ಕಳು ಪುನರಾವರ್ತಿಸಲು ಪ್ರಾರಂಭಿಸುತ್ತಾರೆ. ಜತೆಗೆ ಅತಿಯಾದ ಕೋಪ ಒಳ್ಳೆಯದಲ್ಲ. ಇದು ಮಕ್ಕಳ ಆರೋಗ್ಯವನ್ನು ಕೆಡಿಸುವುದಲ್ಲದೇ ಮಕ್ಕಳ ಮನಸ್ಥಿತಿಯನ್ನೂ ಸಹ ಕೆಡಿಸುತ್ತದೆ.

ಸುಳ್ಳು ಹೇಳುವುದು ಇಂದಿನ ಮಕ್ಕಳು ತುಂಬಾ ಚುರುಕಾಗಿರುತ್ತಾರೆ. ಕೇಳಿಸಿಕೊಂಡಿರುವುದನ್ನು ಬಹುಬೇಗ ಅರ್ಥೈಸಿಕೊಳ್ಳುತ್ತಾರೆ ಮತ್ತು ಗ್ರಹಿಸಿಕೊಂಡಿರುತ್ತಾರೆ. ಕೆಲವು ಬಾರಿ ನೀವು ಮಕ್ಕಳೊಂದಿಗೆ ಸುಳ್ಳು ಹೇಳಿದರೆ ಮಗುವು ಸಹ ಸುಳ್ಳನ್ನು ನಕಲಿಸುತ್ತದೆ. ಜತೆಗೆ ಸಂದರ್ಭ ಬಂದಾಗ ಮಕ್ಕಳು ಸಹ ಸುಳ್ಳು ಹೇಳಲು ಪ್ರಾರಂಭಿಸುತ್ತಾರೆ. ಹಾಗಾಗಿ ಎಂದಿಗೂ ಮಕ್ಕಳೊಂದಿಗೆ ಸುಳ್ಳು ಹೇಳಬೇಡಿ.

ಹೋಲಿಕೆ ಮಾಡಬೇಡಿ ಕೆಲವೊಮ್ಮೆ ಪೋಷಕರು ಮಕ್ಕಳಿಗೆ ಕಲಿಸಲು ಇನ್ನಿತರರನ್ನು ಹೋಲಿಕೆ ಮಾಡುತ್ತಾರೆ. ಬೇರೆಯವರೊಂದಿಗೆ ಹೋಲಿಕೆ ಮಾಡಿದಾಗ ಮಗುವಿನ ಆತ್ಮ ವಿಶ್ವಾಸ ದುರ್ಬಲಗೊಳ್ಳುತ್ತದೆ. ಜತೆಗೆ ಕೀಳರಿಮೆಯನ್ನು ಹುಟ್ಟುಹಾಕುತ್ತದೆ. ಆದ್ದರಿಂದ ಮಗುವನ್ನು ಎಂದಿಗೂ ಇತರರೊಂದಿಗೆ ಹೋಲಿಕೆ ಮಾಡಬೇಡಿ.

ಸಿಗರೇಟ್ ಮತ್ತು ಮದ್ಯ ಬಳಕೆ ಮಕ್ಕಳೆದರು ಕುಡಿಯುವುದು, ಕೆಟ್ಟ ಮಾತುಗಳನ್ನಾಡುವ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ. ನಿಮ್ಮನ್ನು ನೋಡಿದ ಮಗು ನಿಮ್ಮಂತೆಯೇ ವರ್ತಿಸುತ್ತದೆ. ಜತೆಗೆ ಮದ್ಯಪಾನಕ್ಕೆ ಮಕ್ಕಳು ಸಹ ಒಗ್ಗಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹಾಗಾಗಿ ಸಿಗರೇಟ್ ಮತ್ತು ಮದ್ಯ ಸೇವನೆಯನ್ನು ಮಕ್ಕಳೆದುರು ಎಂದಿಗೂ ಮಾಡಬೇಡಿ.

ಇದನ್ನೂ ಓದಿ:

Health Tips: ನೀವು ಕೆಚಪ್ ಪ್ರಿಯರಾ?; ಅತಿಯಾಗಿ ಕೆಚಪ್ ಸೇವಿಸಿದರೆ ಆಗುವ 7 ಶಾಕಿಂಗ್ ಅಡ್ಡ ಪರಿಣಾಮಗಳಿವು!

Health Tips: ಹೃದಯಾಘಾತದಿಂದ ಪಾರಾಗಲು 10 ಮಾರ್ಗಗಳು; ಆಯುರ್ವೇದ ತಜ್ಞರ ಸಲಹೆ ಇಲ್ಲಿದೆ

(These tips for parents of child health check in kannada)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್