Health Tips: ಪಿತ್ತಜನಕಾಂಗವನ್ನು ಆರೋಗ್ಯವಾಗಿಡಲು ಈ ಕ್ರಮಗಳನ್ನು ಅನುಸರಿಸಿ

ಹಲವು ಬಾರಿ ಯಕೃತ್ತು ಅತಿಯಾದ ಜಂಕ್, ಅನಾರೋಗ್ಯಕರ ಮತ್ತು ಹುರಿದ ಆಹಾರ ಸೇವನೆ ಹಾಗೂ ಅತಿಯಾದ ಮದ್ಯ ಸೇವಿಸುವ ಮೂಲಕ  ಕೆಲಸ ಮಾಡುವುದನ್ನು ನಿಧಾನ ಮಾಡುತ್ತದೆ. ಹೀಗಾಗಿ, ಯಕೃತ್ತಿನಲ್ಲಿ ಕೊಳಕು ಇದ್ದರೆ, ಅದರ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ಅದಕ್ಕಾಗಿಯೇ ಪಿತ್ತಜನಕಾಂಗವನ್ನು ನಿರ್ವಿಷಗೊಳಿಸುವುದು ಬಹಳ ಮುಖ್ಯ.

Health Tips: ಪಿತ್ತಜನಕಾಂಗವನ್ನು ಆರೋಗ್ಯವಾಗಿಡಲು ಈ ಕ್ರಮಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Sep 11, 2021 | 8:07 AM

ಯಕೃತ್ತು ಅಥವಾ ಪಿತ್ತಜನಕಾಂಗ ದೇಹದ ಒಂದು ಪ್ರಮುಖ ಭಾಗವಾಗಿದೆ. ಆರೋಗ್ಯಕರ ಯಕೃತ್ತಿಗೆ ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಯಕೃತ್ತು ಅನೇಕ ಅಗತ್ಯ ದೈಹಿಕ ಕಾರ್ಯಗಳಿಗೆ ಕಾರಣವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹವನ್ನು ಸದೃಢವಾಗಿಸುತ್ತದೆ. ಅನಾರೋಗ್ಯಕರ ಅಭ್ಯಾಸಗಳಿಂದಾಗಿ, ಅನೇಕ ಯಕೃತ್ತಿನ ರೋಗ, ಕಾಮಾಲೆ ಮತ್ತು ಹೆಪಟೈಟಿಸ್ ನಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಹಲವು ಬಾರಿ ಯಕೃತ್ತು ಅತಿಯಾದ ಜಂಕ್, ಅನಾರೋಗ್ಯಕರ ಮತ್ತು ಹುರಿದ ಆಹಾರ ಸೇವನೆ ಹಾಗೂ ಅತಿಯಾದ ಮದ್ಯ ಸೇವಿಸುವ ಮೂಲಕ  ಕೆಲಸ ಮಾಡುವುದನ್ನು ನಿಧಾನ ಮಾಡುತ್ತದೆ. ಹೀಗಾಗಿ, ಯಕೃತ್ತಿನಲ್ಲಿ ಕೊಳಕು ಇದ್ದರೆ, ಅದರ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ಅದಕ್ಕಾಗಿಯೇ ಪಿತ್ತಜನಕಾಂಗವನ್ನು ನಿರ್ವಿಷಗೊಳಿಸುವುದು ಬಹಳ ಮುಖ್ಯ.

ಪುದೀನ ಚಹಾ ಪುದೀನ ಎಲೆ ಮೆಂಥಾನ್ ಗುಣಗಳಿಂದ ಸಮೃದ್ಧವಾಗಿವೆ. ಹೀಗಾಗಿ ಪದೀನಾವನ್ನು ಡಿಟಾಕ್ಸ್​ ರೂಪದಲ್ಲಿ ಕುಡಿಯಬಹುದು ಅಥವಾ ಚಹಾ ರೂಪದಲ್ಲಿ ಕುಡಿಯಬಹುದು. ಇದು ಯಕೃತ್ತನ್ನು ಆರೋಗ್ಯವಾಗಿಸುತ್ತದೆ. ಆ ಮೂಲಕ ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಸಿ, ನಂತರ 2  ಪುದೀನ ಎಲೆಗಳನ್ನು ಸೇರಿಸಿ. ಸ್ವಲ್ಪ ಸಮಯ ಕುದಿಸಿ, ರಾತ್ರಿ ಮಲಗುವ ಮುನ್ನ ಅರ್ಧ ಗಂಟೆ ಮೊದಲು ಕುಡಿಯಿರಿ.

ಅರಿಶಿಣದ ಚಹಾ  ಅರಿಶಿಣವು ಆಯುರ್ವೇದದಲ್ಲಿ ಶತಮಾನಗಳಿಂದ ಬಳಸಲಾಗುವ ಪ್ರಬಲ ಮಸಾಲೆ ಪದಾರ್ಥ. ನಮ್ಮ ದೇಹದಲ್ಲಿರುವ ವಿಷವನ್ನು ಹೊರಹಾಕಲು ಇದು ಒಂದು ಉತ್ತಮ ವಿಧಾನವಾಗಿದೆ. ಪ್ರತಿದಿನ ಅರಿಶಿಣ ಚಹಾ ಕುಡಿಯಿರಿ. ಒಂದು ಲೋಟ ಕುದಿಯುವ ನೀರಿಗೆ ಒಂದು ಚಿಟಿಕೆ ಅರಿಶಿಣ ಪುಡಿ ಸೇರಿಸಿ, ನಂತರ ಜೇನುತುಪ್ಪ ಬೆರಸಿ ಕುಡಿಯಿರಿ.

ಶುಂಠಿ ಮತ್ತು ನಿಂಬೆ ಚಹಾ  ನಿಂಬೆ ರಸದೊಂದಿಗೆ ಶುಂಠಿಯನ್ನು ಬೆರೆಸಿ ತಯಾರಿಸಲಾಗುತ್ತದೆ. ಇದು  ಉರಿಯೂತದ ಗುಣಲಕ್ಷಣಗಳನ್ನು ದೂರ ಮಾಡಿ ಶಕ್ತಿ ಹೊಂದಿದ್ದು,  ದೇಹವನ್ನು ನಿರ್ವಿಷಗೊಳಿಸುವುದಲ್ಲದೆ ತೂಕ ಇಳಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಈ ಮಿಶ್ರಣವು ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ರೋಗವನ್ನು ತಡೆಯುತ್ತದೆ. ಒಂದು ಲೋಟ ಕುದಿಯುವ ನೀರಿನಲ್ಲಿ ನಿಂಬೆ ರಸ ಮತ್ತು ಶುಂಠಿಯ ತುಂಡು ಹಾಕಿ ಮಿಶ್ರಣ ಮಾಡಿ.  15 ನಿಮಿಷಗಳ ಕಾಲ ಕುದಿಸಿ ನಂತರ ಸೇವಿಸಿ.

ಮೆಂತೆ ಜ್ಯೂಸ್​ ಮೆಂತೆ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಸುಲಭವಾಗಿ ಇದನ್ನು ತಯಾರಿಸಬಹುದು.  ಮಲಗುವ ಮುನ್ನ ಒಂದು ಗಂಟೆ ಮೊದಲು ಮೆಂತೆ ನೀರನ್ನು ಸೇವಿಸಬೇಕು ಏಕೆಂದರೆ ಇದು ನಮ್ಮ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಒಂದು ಲೋಟ ಕುದಿಯುವ ನೀರಿನಲ್ಲಿ ಒಂದು ಚಮಚ ಮೆಂತೆ ಪುಡಿಯನ್ನು ಹಾಕಿ. 15 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಕುಡಿಯಿರಿ.

ಕ್ಯಾಮೊಮೈಲ್ ಚಹಾ  ಕ್ಯಾಮೊಮೈಲ್ ಚಹಾವು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ.  ಒತ್ತಡವನ್ನು ನಿವಾರಿಸಲು ಮತ್ತು ನಿದ್ರೆಯನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ. ಅಲ್ಲದೆ ಯಕೃತ್ತನ್ನು ಸದಾ ಸ್ವಚ್ಛವಾಗಿಡುತ್ತದೆ. 1 ಚಮಚ ಕ್ಯಾಮೊಮೈಲ್ ಅನ್ನು ಒಂದು ಲೋಟ ಕುದಿಯುವ ನೀರಿನಲ್ಲಿ ಹಾಕಿ. ಇದನ್ನು 10 ನಿಮಿಷಗಳ ಕಾಲ ಕುದಿಸಿ ಕುಡಿಯಿರಿ.

ಓಟ್ ಮೀಲ್ ಮತ್ತು ದಾಲ್ಚಿನ್ನಿ ಜ್ಯೂಸ್​ ಓಟ್ಸ್​ನಲ್ಲಿ ಫೈಬರ್, ಖನಿಜಾಂಶಗಳು ಮತ್ತು ವಿಟಮಿನ್​ಗಳು ಹೇರಳವಾಗಿದ್ದು, ಇದು ಕರುಳು ಮತ್ತು ಯಕೃತ್ತನ್ನು ಸ್ವಚ್ಛಗೊಳಿಸಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಓಟ್ಸ್‌ನಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಆದ್ದರಿಂದ ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುವ ಉತ್ತಮ ಡಿಟಾಕ್ಸ್ ಪಾನೀಯವಾಗಿದೆ. ಕುದಿಯುವ ನೀರಿನಲ್ಲಿ, ಒಂದು ಟೀ ಚಮಚ ಓಟ್ಸ್ ಅನ್ನು ಹಾಕಿ 2-3 ಗಂಟೆಗಳ ಕಾಲ ನೆನೆಸಿ. ನಂತರ ಓಟ್ಸ್ ಅನ್ನು ಫಿಲ್ಟರ್ ಮಾಡಿ ಮತ್ತು ಒಂದು ಚಮಚ ದಾಲ್ಚಿನ್ನಿ ಮತ್ತು ಸ್ವಲ್ಪ ನೀರು ಸೇರಿಸಿ ಕುಡಿಯಿರಿ.

ಇದನ್ನೂ ಓದಿ: Health Benefits: ಕಿಡ್ನಿ ಸಮಸ್ಯೆ ಉಂಟಾದ ಮೇಲೆ ಪರಿಹಾರ ಹುಡುಕುವ ಬದಲು, ಪ್ರತಿದಿನ ಡಿಟಾಕ್ಸ್​ ಮಾಡಿ ಕುಡಿಯಿರಿ

Health Benefits: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆಲ್ಲಿಕಾಯಿ, ಶುಂಠಿ ಜ್ಯೂಸ್ ಕುಡಿಯಿರಿ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ