Health Tips: ನೀವು ಕೆಚಪ್ ಪ್ರಿಯರಾ?; ಅತಿಯಾಗಿ ಕೆಚಪ್ ಸೇವಿಸಿದರೆ ಆಗುವ 7 ಶಾಕಿಂಗ್ ಅಡ್ಡ ಪರಿಣಾಮಗಳಿವು!

Tomato Ketchup | ಕೆಚಪ್​ನಲ್ಲಿ ಯಾವುದೇ ಪ್ರೋಟೀನ್ ಅಗಲಿ ಫೈಬರ್ ಅಂಶವಾಗಲಿ ಇರುವುದಿಲ್ಲ. ಅದರಲ್ಲಿ ಸಕ್ಕರೆ, ಉಪ್ಪು, ಮಸಾಲೆ ಪದಾರ್ಥ, ಫ್ರೂಕ್ಟೋಸ್ ಕಾರ್ನ್ ಸಿರಪ್ ಹೇರಳವಾಗಿರುತ್ತದೆ.

Health Tips: ನೀವು ಕೆಚಪ್ ಪ್ರಿಯರಾ?; ಅತಿಯಾಗಿ ಕೆಚಪ್ ಸೇವಿಸಿದರೆ ಆಗುವ 7 ಶಾಕಿಂಗ್ ಅಡ್ಡ ಪರಿಣಾಮಗಳಿವು!
ಟೊಮ್ಯಾಟೋ ಕೆಚಪ್
TV9kannada Web Team

| Edited By: Sushma Chakre

Sep 07, 2021 | 6:37 PM

ನೀವು ಚೈನೀಸ್​ ತಿಂಡಿಗಳ ಪ್ರಿಯರಾಗಿದ್ದರೆ ಕೆಚಪ್ ಅಥವಾ ಸಾಸ್ ಇಲ್ಲದೆ ಅದನ್ನು ತಿನ್ನಲು ಸಾಧ್ಯವೇ ಇಲ್ಲ. ಮ್ಯಾಗಿಯಿಂದ ಹಿಡಿದು ಪಿಜ್ಜಾವರೆಗೆ ಕೆಚಪ್ ಅನ್ನು ಬಳಸುವವರಿದ್ದಾರೆ. ಕೆಲವರಂತೂ ಪರೋಟಕ್ಕೂ ಕೆಚಪ್ ಹಾಕಿಕೊಂಡು ತಿನ್ನುತ್ತಾರೆ. ನೀವೇನಾದರೂ ಕೆಚಪ್ ಪ್ರಿಯರಾಗಿದ್ದರೆ ಈ ಸುದ್ದಿಯನ್ನು ಮಿಸ್ ಮಾಡದೆ ಓದಿ. ಅತಿಯಾಗಿ ಕೆಚಪ್ ಸೇವಿಸುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳ ಮಾಹಿತಿ ಇಲ್ಲಿದೆ.

ಕೇವಲ ಮಕ್ಕಳಲ್ಲದೆ ದೊಡ್ಡವರು ಕೂಡ ಕೆಚಪ್ ಅಥವಾ ಸಾಸ್​ಗೆ ಅಡಿಕ್ಟ್ ಆಗುತ್ತಿದ್ದಾರೆ. ಆದರೆ, ಅತಿಯಾಗಿ ಕೆಚಪ್ ಸೇವಿಸಿದರೆ ದೊಡ್ಡ ತೊಂದರೆಯನ್ನೇ ಎದುರಿಸಬೇಕಾದೀತು. ಕೆಚಪ್​ಗೆ ಟೊಮ್ಯಾಟೋ ಮಾತ್ರವಲ್ಲದೆ ಇನ್ನಿತರ ಪದಾರ್ಥಗಳನ್ನೂ ಬಳಸುತ್ತಾರೆ. ಆ ಪದಾರ್ಥಗಳು ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದು ನಿಮಗೆ ಗೊತ್ತಾ?

ಡಯಟಿಷಿಯನ್ ಪ್ರಿಯಾ ಪಾಲನ್ ಅವರ ಪ್ರಕಾರ, ಕೆಚಪ್​ನಲ್ಲಿ ಯಾವುದೇ ಪ್ರೋಟೀನ್ ಅಗಲಿ ಫೈಬರ್ ಅಂಶವಾಗಲಿ ಇರುವುದಿಲ್ಲ. ಅದರಲ್ಲಿ ಸಕ್ಕರೆ, ಉಪ್ಪು, ಮಸಾಲೆ ಪದಾರ್ಥ, ಫ್ರೂಕ್ಟೋಸ್ ಕಾರ್ನ್ ಸಿರಪ್ ಹೇರಳವಾಗಿರುತ್ತದೆ. ಫ್ರೂಕ್ಟೋಸ್ ಕಾರ್ನ್ ಸಿರಪ್ ಅನ್ನು ಹೆಚ್ಚು ಬಳಸುವುದರಿಂದ ಸ್ಥೂಲಕಾಯ, ಇನ್ಸುಲಿನ್ ರೆಸಿಸ್ಟನ್ಸ್, ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಕೆಚಪ್ ಖರೀದಿಸುವಾಗ ಅದಕ್ಕೆ ಬಳಸಲಾದ ಪದಾರ್ಥಗಳ ಬಗ್ಗೆ ಕೂಡ ಗಮನ ಹರಿಸುವುದು ಬಹಳ ಅಗತ್ಯ. ಅತಿಯಾದ ಕೆಚಪ್ ಬಳಕೆ ಬಿಪಿ (ಅಧಿಕ ರಕ್ತದೊತ್ತಡ) ಮಿನರಲ್ ಇಂಬ್ಯಾಲನ್ಸ್​ಗೂ ಕಾರಣವಾಗುತ್ತದೆ.

ಕೆಚಪ್ ಅನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದರೆ ಏನಾಗುತ್ತದೆ ಎಂಬುದಕ್ಕೆ ಇಲ್ಲಿದೆ ಮಾಹಿತಿ.

1. ಕೆಚಪ್​ನಲ್ಲಿ ಪೌಷ್ಟಿಕಾಂಶದ ಮಟ್ಟ ಕಡಿಮೆ ಇರುತ್ತದೆ, ಇದರಲ್ಲಿ ಪ್ರೋಟೀನ್ ಮತ್ತು ಫೈಬರ್ ಅಂಶ ಇರುವುದಿಲ್ಲ.

2. ಫ್ರೂಕ್ಟೋಸ್ ಕಾರ್ನ್ ಸಿರಪ್ ಹೆಚ್ಚಾಗಿರುವ ಕೆಚಪ್ ಅನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದರೆ ಹೃದಯದ ಸಮಸ್ಯೆಗಳು ಉಂಟಾಗುತ್ತವೆ.

3. ಸಕ್ಕರೆ ಅಂಶ ಹೆಚ್ಚಾಗಿರುವ ಕೆಚಪ್​ನಲ್ಲಿ ಫ್ರೂಕ್ಟೋಸ್ ಸಿರಪ್ ಕೂಡ ಇರುವುದರಿಂದ ಇದು ಸ್ಥೂಲಕಾಯ, ಇನ್ಸುಲಿನ್ ರೆಸಿಸ್ಟನ್ಸ್​ಗೂ ಕಾರಣವಾಗುತ್ತದೆ.

4. ಕೆಚಪ್​ ಅನ್ನು ಹೆಚ್ಚಾಗಿ ಬಳಸುವುದರಿಂದ ಆ್ಯಸಿಡಿಟಿ ಹೆಚ್ಚಾಗುತ್ತದೆ. ಇದೊಂದು ಆ್ಯಸಿಡಿಕ್ ಫುಡ್ ಆಗಿದ್ದು, ಹೊಟ್ಟೆ ಉಬ್ಬರ ಮತ್ತು ಎದೆ ಉರಿ ಹೆಚ್ಚಾಗುತ್ತದೆ. ಅಲ್ಲದೆ, ಜೀರ್ಣಕ್ರಿಯೆಗೂ ತೊಂದರೆ ಉಂಟುಮಾಡುತ್ತದೆ.

5. ಕೆಚಪ್​ ಸಂರಕ್ಷಿತ ಆಹಾರ ಪದಾರ್ಥವಾದ್ದರಿಂದ ಇದನ್ನು ಹೆಚ್ಚಾಗಿ ಬಳಸಿದರೆ ಸಂದುಗಳ ಸಮಸ್ಯೆ ಎದುರಾಗುತ್ತದೆ. ಜಾಯಿಂಟ್​ ಪೇಯಿನ್ ಇದ್ದವರು ಕೆಚಪ್​ನಿಂದ ದೂರ ಇರುವುದು ಉತ್ತಮ.

6. ಕೆಚಪ್​ನಲ್ಲಿ ಹೆಚ್ಚು ಸೋಡಿಯಂ ಅಂಶ ಇರುವುದರಿಂದ ಮೂತ್ರದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದ ಕಿಡ್ನಿ ಸ್ಟೋನ್ ಮುಂತಾದ ಮೂತ್ರಪಿಂಡದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚು.

7. ಕೆಚಪ್​ನಲ್ಲಿ ಇರುವ ಟೊಮ್ಯಾಟೋದಲ್ಲಿ ಹಿಸ್ಟಾಮಿನ್ಸ್​ ಪ್ರಮಾಣ ಹೆಚ್ಚಾಗಿರುತ್ತದೆ. ಇದರಿಂದ ಸೀನು, ಉಸಿರಾಟದ ತೊಂದರೆ ಮುಂತಾದ ಅಲರ್ಜಿಗಳು ಉಂಟಾಗುವ ಸಾಧ್ಯತೆಗಳಿವೆ.

ಕೆಚಪ್‍ನ ಬಾಟಲ್‍ಗಳ ಮೇಲೆ ಸುಂದರವಾದ ಟೊಮ್ಯಾಟೋ ಚಿತ್ರವನ್ನು ಮುದ್ರಿಸಲಾಗುತ್ತದೆ. ಇದರ ಅರ್ಥ ಹೆಚ್ಚು ಪ್ರಮಾಣದಲ್ಲಿ ಚೆನ್ನಾಗಿ ಹಣ್ಣಾಗಿರುವ ಟೊಮ್ಯಾಟೋಗಳನ್ನು ಬಳಸಿ ಸಾಸ್ ತಯಾರಿಸಲಾಗಿದೆ ಎಂದರ್ಥವಲ್ಲ. ಸಾಸ್ ತಯಾರಿಸುವಾಗ ಟೊಮ್ಯಾಟೋ ಹಣ್ಣನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ. ಟೊಮ್ಯಾಟೋ ಸಿಪ್ಪೆ ಮತ್ತು ಬೀಜಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವುಗಳನ್ನು ಹೆಚ್ಚು ಶಾಖದಲ್ಲಿ ದೀರ್ಘ ಸಮಯಗಳ ಕಾಲ ಬೇಯಿಸಲಾಗುವುದು. ಆಗ ದೊಡ್ಡ ಪ್ರಮಾಣದಲ್ಲಿ ಮೈಕ್ರೋನ್ಯೂಟ್ರಿಯಂಟ್ ಮತ್ತು ನಾರಿನಾಂಶ ನಷ್ಟವಾಗುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು.

ಒಂದು ಕೆಚಪ್ ಬಾಟಲ್​ನಲ್ಲಿ ಶೇ. 39.2ರಷ್ಟು ಸಿಹಿ ಇರುತ್ತದೆ. ಎರಡು ಸ್ಯಾಚೆಟ್ ಸಾಸ್ ಸೇವಿಸಿದರೆ ಅದರಲ್ಲಿ 1.5 ಚಮಚದಷ್ಟು ಸಕ್ಕರೆಯನ್ನು ಸೇವಿಸಿದಂತೆ ಅನಿಸುವುದು. ಅದನ್ನು ಗ್ಲಾಸ್ ಅಳತೆಯಲ್ಲಿ ಹೇಳುವುದಾದರೆ ಒಂದು ಗ್ಲಾಸ್ ಕೋಲಾ ಸಕ್ಕರೆಯನ್ನು ಸೇವಿಸಿದಂತೆ. ಇದು ಮಧುಮೇಹ, ಸ್ಥೂಲ ಕಾಯ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಾರುಕಟ್ಟೆಯಲ್ಲಿ ಕೆಚಪ್​ ಖರೀದಿಸುವಾಗ ಅದರಲ್ಲಿ ಎಷ್ಟು ಪ್ರಮಾಣದಲ್ಲಿ ಉಪ್ಪು, ಸಕ್ಕರೆ, ಟೊಮ್ಯಾಟೋ, ಸಂರಕ್ಷಿತ ಪದಾರ್ಥಗಳನ್ನು ಬಳಸಿದ್ದಾರೆ ಎಂಬುದನ್ನು ಪರಿಶೀಲಿಸಿ.

ಇದನ್ನೂ ಓದಿ: Health Tips: ಹೃದಯಾಘಾತದಿಂದ ಪಾರಾಗಲು 10 ಮಾರ್ಗಗಳು; ಆಯುರ್ವೇದ ತಜ್ಞರ ಸಲಹೆ ಇಲ್ಲಿದೆ

Coffee Health Benefits: ದಿನಕ್ಕೆ ಮೂರೇ ಮೂರು ಕಪ್ ಕಾಫಿ ಕುಡಿದರೆ ಏನೆಲ್ಲ ಉಪಯೋಗವಿದೆ ಗೊತ್ತಾ?

(Health Tips: 7 shocking side effects of eating too much Tomato ketchup)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada